Site icon Vistara News

Traffic Violation | ಕುಡಿದು ಜಾಲಿ ಡ್ರೈವಿಂಗ್‌; 20 ಸಾವಿರ ರೂ. ದಂಡ ಹಾಕಿ ಕಿಕ್‌ ಇಳಿಸಿದ ಟ್ರಾಫಿಕ್‌ ಪೊಲೀಸ್‌!

traffic

ದಾವಣಗೆರೆ: ಗಣೇಶ ವಿಸರ್ಜನಾ ಮೆರವಣಿಗೆ ಖುಷಿಯಲ್ಲಿ ಕಂಠಪೂರ್ತಿ ಕುಡಿದಿದ್ದ ಯುವಕರ ನಶೆಯನ್ನು ಟ್ರಾಫಿಕ್‌ ಪೊಲೀಸರು (Traffic Violation) ಇಳಿಸಿದ್ದಾರೆ. ಇಲ್ಲಿನ ಹೊಂಡಾ ಸರ್ಕಲ್‌ ‌ಬಳಿ ಸಂಚಾರಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ಕುಡಿದು ವಾಹನ ಚಲಾಯಿಸಿದ್ದ ಯುವಕರಿಗೆ ಭಾರಿ ಮೊತ್ತದ ದಂಡವನ್ನು ವಿಧಿಸಿದ್ದಾರೆ.

ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದ ಯುವಕರನ್ನು ಹಿಡಿದು 20 ಸಾವಿರ ರೂ.ದಂಡವನ್ನು ದಾವಣಗೆರೆ ಸಂಚಾರಿ ಠಾಣೆ ಪೊಲೀಸರು ವಿಧಿಸಿದ್ದಾರೆ. ಗಣೇಶ ವಿಸರ್ಜನಾ ಮೆರವಣೆಗೆ ವೇಳೆ ಕಂಠಪೂರ್ತಿ ಕುಡಿದು ರಾಯಲ್‌ ಎನ್‌ಫೀಲ್ಡ್ ಬೈಕ್‌ನಲ್ಲಿ ಮಾರುತಿ ಎಂಬಾತ ಕರ್ಕಶ ಶಬ್ದ ಮಾಡಿಕೊಂಡು ಸಂಚಾರ ಮಾಡುತ್ತಿದ್ದ ಎನ್ನಲಾಗಿದೆ.

ಜಾಲಿ ಡ್ರೈವಿಂಗ್‌ ಮೂಡ್‌ನಲ್ಲಿದ್ದ ಮಾರುತಿಯನ್ನು ಸಂಚಾರಿ ಪೊಲೀಸರು ತಡೆದಿದ್ದಾರೆ. ಈ ವೇಳೆ ಆತ ಕುಡಿದು ವಾಹನ ಚಲಾಯಿಸುತ್ತಿದ್ದುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆಲ್ಕೋಮೀಟರ್‌ನಲ್ಲಿ ಪರಿಶೀಲನೆ ಮಾಡಿದ ಬಳಿಕ ಆತ ಕುಡಿದಿರುವುದು ಸಾಬೀತಾಗಿದೆ. ಹೀಗಾಗಿ 20 ಸಾವಿರ ರೂ. ದಂಡ ವಿಧಿಸಿದ್ದಲ್ಲದೇ ಬೈಕ್ ಅನ್ನು ಸಹ ಸೀಜ್ ಮಾಡಿದ್ದಾರೆ.

ಇದನ್ನೂ ಓದಿ | Rain news | ಬೆಂಗಳೂರಿನಲ್ಲಿ ವರುಣನ ಆರ್ಭಟದ ನಡುವೆ ಟ್ರಾಫಿಕ್ ಪೊಲೀಸರ ಕಾರ್ಯವೈಖರಿಗೆ ಮೆಚ್ಚುಗೆ

Exit mobile version