Site icon Vistara News

Train services: ಮಂಗಳೂರಿಗೆ ಇನ್ನು 10 ದಿನ ರೈಲು ಸಂಚಾರ ಬಂದ್‌!

There will be no train services to Bengaluru and Mangaluru for the next 10 days

ಮಂಗಳೂರು/ಬೆಂಗಳೂರು: ನೈರುತ್ಯ ರೈಲ್ವೆಯು (South Western Railway) ಭಾಗಶಃ ಬೆಂಗಳೂರು ಮತ್ತು ಮಂಗಳೂರು ನಡುವಿನ (Bengaluru and Mangaluru) ಎಲ್ಲ ರೈಲುಗಳನ್ನು (Train services) ಇಂದಿನಿಂದ (ಡಿ.14) ರದ್ದುಗೊಳಿಸಿದೆ. ಹಾಸನ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಯಾರ್ಡ್ ಮರುನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ಡಿಸೆಂಬರ್ 14 ರಿಂದ ಡಿಸೆಂಬರ್ 22 ರವರೆಗೆ ಬೆಂಗಳೂರು ಮತ್ತು ಮಂಗಳೂರು ನಡುವಿನ ಬಹುತೇಕ ಎಲ್ಲಾ ರೈಲುಗಳನ್ನು ರದ್ದುಗೊಳಿಸಿದೆ.

ಹಾಸನ ರೈಲ್ವೆ ನಿಲ್ದಾಣದಲ್ಲಿ ಡಿಸೆಂಬರ್ 14 ರಿಂದ 18ರವರೆಗೆ ಲೈನ್ ಬ್ಲಾಕ್, ಸಿಗ್ನಲ್ ಸೇರಿದಂತೆ ಇತರೆ ಕೆಲಸಗಳು ನಡೆಯಲಿದ್ದು, ಡಿಸೆಂಬರ್ 19 ರಿಂದ ಡಿಸೆಂಬರ್ 22 ರವರೆಗೆ ಎಂಜಿನಿಯರಿಂಗ್ ಕೆಲಸಕ್ಕಾಗಿ ಸಮಯ ಮೀಸಲಿಡಲಾಗಿದೆ. ಈ ಅವಧಿಯಲ್ಲಿ ಯಾವುದೇ ರೈಲುಗಳು ಸಂಚಾರ ಇರುವುದಿಲ್ಲ.

ಇದನ್ನೂ ಓದಿ: Chikkamagaluru News : ಪ್ರವಾಸಿಗರೇ.. ಡಿ.22ರಿಂದ ಚಿಕ್ಕಮಗಳೂರಿನ ಈ ಪ್ರವಾಸ ತಾಣಕ್ಕೆ ಹೋಗ್ಬೇಡಿ!

1) ಬೆಂಗಳೂರು-ಕಣ್ಣೂರು-ಬೆಂಗಳೂರು ಹಾಗೂ ಬೆಂಗಳೂರು- ಕಾರವಾರ- ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ ಪ್ರತಿ ರಾತ್ರಿ ಸಂಚರಿಸುವ ರೈಲುಗಳು ರದ್ದಾಗಿವೆ.
2) ಬೆಂಗಳೂರು-ಕಾರವಾರ-ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ (ಪ್ರತಿ ರಾತ್ರಿ ಸಂಚರಿಸುವ ರೈಲು) – ಡಿಸೆಂಬರ್ 16 ರಿಂದ ಡಿಸೆಂಬರ್ 20 ರವರೆಗೆ ರದ್ದಾಗಲಿದೆ.
3) ಯಶವಂತಪುರ-ಮಂಗಳೂರು ಜಂಕ್ಷನ್ ಗೊಮ್ಮಟೇಶ್ವರ (ವಾರಕ್ಕೆ ಮೂರು ದಿನ ಸಂಚರಿಸುವ) ಎಕ್ಸ್‌ಪ್ರೆಸ್ – ಡಿಸೆಂಬರ್ 14, 17, 19 ಮತ್ತು 21 ರಂದು ರದ್ದು.
4) ಯಶವಂತಪುರ-ಕಾರವಾರ (ವಾರಕ್ಕೆ ಮೂರು ದಿನ ಸಂಚರಿಸುವ) ಎಕ್ಸ್‌ಪ್ರೆಸ್‌ – ಡಿಸೆಂಬರ್ 13, 15, 18, 20 ಮತ್ತು 22 ರಂದು ಸಂಚಾರ ಇರುವುದಿಲ್ಲ.
5)ಯಶವಂತಪುರ-ಮಂಗಳೂರು ಜಂಕ್ಷನ್ ವೀಕ್ಲಿ ಎಕ್ಸ್‌ ಪ್ರೆಸ್ (ರೈಲು ಸಂಖ್ಯೆ 16539) –
ಡಿಸೆಂಬರ್ 16 ರಂದು ರದ್ದು.
6) ಮಂಗಳೂರು ಜಂಕ್ಷನ್-ಯಶವಂತಪುರ ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16540) – ಡಿಸೆಂಬರ್ 17 ರಂದು ರದ್ದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version