Site icon Vistara News

Koppala News: ಶಿಶುಪಾಲನಾ ಕೇಂದ್ರಗಳು ಗ್ರಾಮೀಣ ಜನರಿಗೆ ವರದಾನ: ಗಂಗಪ್ಪ

Training Workshop for Child Care Center Care Takers at Gangavathi

ಗಂಗಾವತಿ: ರಾಜ್ಯ ಸರ್ಕಾರ (State Government) ಆರಂಭಿಸಲಿರುವ ಶಿಶುಪಾಲನಾ ಕೇಂದ್ರಗಳು (Child Care Center) ಗ್ರಾಮೀಣ (Rural) ಭಾಗದ ಜನರಿಗೆ ವರದಾನವಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಗಂಗಪ್ಪ ಹೇಳಿದರು.

ನಗರದ ಮಂಥನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶಿಶು ಪಾಲನಾ ಕೇಂದ್ರದ ಮಹಿಳಾ ಆರೈಕೆದಾರರಿಗೆ (ಕೇರ್ ಟೇಕರ್ಸ್‌) ಆಯೋಜಿಸಿರುವ ಎರಡನೇ ದಿನದ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು.

ಇದನ್ನೂ ಓದಿ: Tomato Price : Good News; ಟೊಮ್ಯಾಟೊ ಧಾರಣೆ ದಿಢೀರ್‌ ಅರ್ಧಕ್ಕರ್ಧ ಕುಸಿತ; ಅಬ್ಬರ ಮುಗೀತಾ?

ಹಳ್ಳಿಗಳಲ್ಲಿ ಅದೆಷ್ಟೊ ಬಡ ಕುಟುಂಬಗಳು ಮಕ್ಕಳ ಆರೈಕೆ ಮಾಡಲು ಕಷ್ಟ ಪಡುತ್ತಿವೆ. ಮುಖ್ಯವಾಗಿ ಮೂರು ವರ್ಷದೊಳಗಿನ ಮಕ್ಕಳ ಆರೈಕೆಗೆ ಗ್ರಾಮೀಣ ಭಾಗದ ಬಡ ಕುಟುಂಬಗಳು ಕಷ್ಟಪಡುತ್ತಿವೆ.

ಹೀಗಾಗಿ ಸರ್ಕಾರ ಜಾರಿಗೆ ತಂದಿರುವ ಶಿಶುಪಾಲನ ಕೇಂದ್ರಗಳು ಗ್ರಾಮೀಣ ಜನರ ಪಾಲಿಗೆ ವರದಾನವಾಗಲಿದೆ. ಆದರೆ ಕೇಂದ್ರಗಳನ್ನು ನಿರ್ವಹಿಸುವವರು ಮತ್ತು ಮಕ್ಕಳನ್ನು ಆರೈಕೆ ಮಾಡುವವರು ಸೂಕ್ತ ತರಬೇತಿ ಪಡೆಯಬೇಕು ಎಂದರು ಕರೆ ನೀಡಿದರು.

ಇದನ್ನೂ ಓದಿ: Annabhagya Scheme : ಶೀಘ್ರ ಹೊಸ ಪಡಿತರ ಕಾರ್ಡ್‌; ಎಲ್ಲೋ ಬೋರ್ಡ್‌ ಕಾರಿದ್ದವರಿಗೆ BPL: ಕೆ.ಎಚ್. ಮುನಿಯಪ್ಪ

ಇದೇ ವೇಳೆ ತಾಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ್, ಶಿಶುಪಾಲನಾ ಕೇಂದ್ರದ ಆರೈಕೆದಾರರಿಗೆ ಹಾಗೂ ಕೇಂದ್ರದ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.

Exit mobile version