ಬೆಂಗಳೂರು: ಹೊಸ ವರ್ಷಕ್ಕೆ ಐಪಿಎಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ರಾಜ್ಯದಲ್ಲಿ 53 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮತ್ತು ಮುಂಬಡ್ತಿ (Transfer and Promotions) ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸೇವಾ ಹಿರಿತನ ಆಧಾರದಲ್ಲಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಅಧಿಕಾರಿಗಳಿಗೆ ವರ್ಗಾವಣೆ ಹಾಗೂ ಮುಂಬಡ್ತಿ ನೀಡಲಾಗಿದೆ.
- ಅಲೋಕ್ ಮೋಹನ್, ಗೃಹ ರಕ್ಷಕ ದಳದ ಡಿಜಿಪಿ ಮತ್ತು ಕಮಾಂಡೆಂಟ್ ಜನರಲ್ ಆಗಿ ವರ್ಗಾವಣೆ
- ಪ್ರತಾಪ್ ರೆಡ್ಡಿ ಡಿಜಿಪಿಯಾಗಿ ಮುಂಬಡ್ತಿ, ಬೆಂಗಳೂರು ಆಯುಕ್ತರಾಗಿ ಮುಂದುವರಿಕೆ
- ಪಂಕಜ್ ಕುಮಾರ್ ಠಾಕೂರ್, ಜಂಟಿ ನಿರ್ದೇಶಕರು, ಇಂಟೆಲಿಜೆನ್ಸ್ ಬ್ಯೂರೋ ದೆಹಲಿ, ಮುಂಬಡ್ತಿ
- ಮನೀಶ್ ಖರ್ಬಿಕರ್ ಎಡಿಜಿಪಿ, ಬಂದೀಖಾನೆ ಮುಂಬಡ್ತಿ
- ಸೌಮೆಂದು ಮುಖರ್ಜಿ, ಎಡಿಜಿಪಿ, ಕಂಪ್ಯೂಟರ್ ವಿಂಗ್ ಮುಂಬಡ್ತಿ
- ಚಂದ್ರಶೇಖರ, ಹೆಚ್ಚುವರಿ ಪೊಲೀಸ್ ಆಯುಕ್ತ, ಪೊಲೀಸ್ ಪೂರ್ವ ವಲಯ ವರ್ಗಾವಣೆ
- ಸತೀಶ್ ಕುಮಾರ್, ಕಲ್ಬುರ್ಗಿ ಈಶಾನ್ಯ ವಲಯ ಐಜಿಪಿಯಾಗಿ ವರ್ಗಾವಣೆ
- ಅಭಿಷೇಕ್ ಘೋಯಲ್ ಐಜಿಪಿಯಾಗಿ ಮುಂಬಡ್ತಿ
- ರಮಣ್ ಗುಪ್ತಾ, ಐಜಿಪಿ, ಬೆಳಗಾವಿ ಉತ್ತರ ವಲಯ
- ಕೌಶಲೇಂದ್ರ ಕುಮಾರ್, ಐಜಿಪಿಯಾಗಿ ಮುಂಬಡ್ತಿ
- ರವಿಕಾಂತೇಗೌಡ, ಐಜಿಪಿ ಕೇಂದ್ರ ವಲಯ, ಬೆಂಗಳೂರು
- ಎಸ್.ಎನ್.ಸಿದ್ದರಾಮಪ್ಪ, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಐಜಿಪಿಯಾಗಿ ಮುಂಬಡ್ತಿ
- ಬಿ.ಎಸ್.ಲೋಕೇಶ್ ಕುಮಾರ್, ಬಳ್ಳಾರಿ ಐಜಿಪಿಯಾಗಿ ಮುಂಬಡ್ತಿ
- ಕೆ.ಟಿ.ಬಾಲಕೃಷ್ಣ, ಅಗ್ನಿಶಾಮಕ ದಳ ಐಜಿಪಿಯಾಗಿ ಮುಂಬಡ್ತಿ
- ಶರಣಪ್ಪ, ಡಿಐಜಿಯಾಗಿ ಮುಂಬಡ್ತಿ, ಸಿಸಿಬಿ ಜಂಟಿ ಆಯುಕ್ತರಾಗಿ ಮುಂದುವರಿಕೆ
- ಅನುಚೇತ್, ಬೆಂಗಳೂರು ಸಂಚಾರ ಪೊಲೀಸ್ ಡಿಐಜಿಯಾಗಿ ಮುಂಬಡ್ತಿ
- ಅಭಿನವ್ ಖರೆ, ಡಿಐಜಿಯಾಗಿ ಮುಂಬಡ್ತಿ
- ವಂಶಿಕೃಷ್ಣ, ಡಿಐಜಿಯಾಗಿ ಮುಂಬಡ್ತಿ
- ರವಿ ಡಿ. ಚನ್ನಣ್ಣನವರ್ ಡಿಐಜಿಯಾಗಿ ಮುಂಬಡ್ತಿ, ಕಿಯೋನಿಕ್ಸ್ ಎಂಡಿ ಆಗಿ ಮುಂದುವರಿಕೆ
- ರಮೇಶ್ ಬಾನೋತ್ ಡಿಐಜಿಯಾಗಿ ಮುಂಬಡ್ತಿ
- ದಿವ್ಯಾ ಗೋಪಿನಾಥ್, ಎಸ್.ಪಿ ರಾಜ್ಯ ಗುಪ್ತಚರ ಇಲಾಖೆ ಮುಂಬಡ್ತಿ
- ವರ್ತಿಕಾ ಕಟಿಯಾರ್, ಸಿಐಡಿ ಎಸ್.ಪಿ ಮುಂಬಡ್ತಿ
ಇದನ್ನೂ ಓದಿ | Amit Shah | ದೇವನಹಳ್ಳಿಯಲ್ಲಿ ಕೇಂದ್ರೀಯ ಬೇಹುಗಾರಿಕೆ ತರಬೇತಿ ಶಾಲೆ ಕಟ್ಟಡಕ್ಕೆ ಶಂಕುಸ್ಥಾಪನೆ