Site icon Vistara News

Bagalkot News: ವರ್ಗಾವಣೆ ಗೊಂದಲ; ಬಾಗಲಕೋಟೆ ಡಿಎಚ್‌ಒ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳ ಕಿತ್ತಾಟ

Bagalkot DHO office

ಬಾಗಲಕೋಟೆ: ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಸ್ಥಾನಕ್ಕೆ (Bagalkot News) ಇಬ್ಬರು ಅಧಿಕಾರಿಗಳ ನಡುವೆ ವಾಗ್ವಾದ ನಡೆದ ಘಟನೆ ನಗರದಲ್ಲಿ ಸೋಮವಾರ ನಡೆದಿದೆ. ಈ ಹಿಂದಿನ ಡಿಎಚ್‌ಒ ಡಾ.ಜಯಶ್ರೀ ಎಮ್ಮಿ ಅವರು ವರ್ಗಾವಣೆ ಆದೇಶಕ್ಕೆ ತಡೆ ತಂದು, ಕಚೇರಿಗೆ ಆಗಮಿಸಿದ್ದಾರೆ. ಆದರೆ, ಆ ಸ್ಥಾನಕ್ಕೆ ಹೊಸದಾಗಿ ನೇಮಕವಾಗಿರುವ ರಾಜಕುಮಾರ್ ಯರಗಲ್ ಅಧಿಕಾರ ಸ್ವೀಕರಿಸಿರುವುದು ಗೊಂದಲಕ್ಕೆ ಕಾರಣವಾಗಿದೆ.

ಕಚೇರಿಗೆ ಆಗಮಿಸಿದ ಡಾ.ಜಯಶ್ರೀ ಎಮ್ಮಿ ಅವರು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಲು ಮುಂದಾಗಿದ್ದಾರೆ. ಈ ವೇಳೆ ರಾಜಕುಮಾರ್ ಯರಗಲ್ ಅಟೆಂಡೆನ್ಸ್ ಬುಕ್ ಕೊಟ್ಟಿಲ್ಲ. ಇದರಿಂದ ಇಬ್ಬರು ನಡುವೆ ವಾಗ್ವಾದ ನಡೆದಿದೆ. ಬಳಿಕ ಬೇಸರಗೊಂಡು ಬಯೋಮೆಟ್ರಿಕ್ ಮೂಲಕ ಮಹಿಳಾ ಅಧಿಕಾರಿ ಹಾಜರಾತಿ ಹಾಕಿದ್ದಾರೆ.

ಇದನ್ನೂ ಓದಿ | Chaluvaraya Swami : ಕೃಷಿ ಸಚಿವರ ವಿರುದ್ಧ ನಕಲಿ ಲಂಚ ಪತ್ರ ಸೃಷ್ಟಿ: ಇಬ್ಬರಿಗೆ ಮೂರು ದಿನ ಪೊಲೀಸ್‌ ಕಸ್ಟಡಿ

ಡಾ.ಜಯಶ್ರೀ ಎಮ್ಮಿ ರಜೆಯಲ್ಲಿದ್ದಾಗ ನೂತನ ಡಿಎಚ್‌ಒ ಆಗಿ ಡಾ.ರಾಜಕುಮಾರ್ ಯರಗಲ್ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ, ಕರ್ನಾಟಕ ಆಡಳಿತ ಮಂಡಳಿ (ಕೆಎಟಿ) ಮೂಲಕ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ತಂದಿರುವುದಾಗಿ ಡಾ.ಜಯಶ್ರೀ ಎಮ್ಮಿ ವಾದಿಸಿದ್ದಾರೆ. ಆದರೆ, ಸರ್ಕಾರದ ನಿಯಮಾನುಸಾರ ಡಿಎಚ್‌ಒ ಆಗಿ ನೇಮಕ ಆಗಿದ್ದಿನಿ ಎಂದು ಡಾ.ರಾಜಕುಮಾರ್ ಯರಗಲ್ ಹೇಳಿದ್ದಾರೆ. ಇಬ್ಬರ ನಡುವಿನ ಗೊಂದಲ ಬಗೆಹರೆಯದ ಹಿನ್ನೆಲೆಯಲ್ಲಿ ಮಹಿಳಾ ಅಧಿಕಾರಿ, ಪೊಲೀಸರಿಗೆ ದೂರು ನೀಡಿದ್ದಾರೆ.

ನಾನು ಸರ್ಕಾರದ ಆದೇಶದ ಪ್ರಕಾರ ಅಧಿಕಾರ ವಹಿಸಿಕೊಂಡಿದ್ದೇನೆ. ಈ ಬಗ್ಗೆ ಆದೇಶ ಪತ್ರವೂ ಇದೆ ಎಂದು ಡಾ.ರಾಜಕುಮಾರ ಯರಗಲ್ ವಾದ ಮಾಡಿದ್ದಾರೆ. ಆದರೆ, ಡಾ.ರಾಜಕುಮಾರ ಯರಗಲ್ ವಿಜಯಪುರ ಡಿಎಚ್‌ಒ ಹುದ್ದೆಯಿಂದ ರಿಲೀವ್ ಲೆಟರ್ ಪಡೆಯದೆ ಹಾಗೂ ಬಾಗಲಕೋಟೆ ಜಿಪಂ ಸಿಇಒ ಅವರಿಂದ ಮೊಮೆಂಟ್ ಆರ್ಡರ್ ಪಡೆಯದೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಡಾ.ಜಯಶ್ರೀ ಹೇಳಿದ್ದಾರೆ.

ಇದನ್ನೂ ಓದಿ | Education Policy : ರಾಜ್ಯದಲ್ಲಿ NEP ರದ್ದು; ಹೊಸ ರಾಜ್ಯ ಶಿಕ್ಷಣ ನೀತಿ CBSE, ICSEಗೆ ಅನ್ವಯ ಆಗುತ್ತಾ?

ಇದಕ್ಕೆ ಸ್ಪಷ್ಟೀಕರಣ ನೀಡಿರುವ ಡಾ.ರಾಜಕುಮಾರ ಯರಗಲ್, ನಾನು ಈಗಾಗಲೇ ಸರ್ಕಾರಕ್ಕೆ ರಿಲೀವ್ ಲೆಟರ್ ಕಳಿಸಿದ್ದೇನೆ ಎಂದು ತಿಳಿಸಿದ್ದಾರೆ. ಆದರೆ ವರ್ಗಾವಣೆ ಆದೇಶಕ್ಕೆ ಕೆಎಟಿಯಿಂದ ತಡೆಯಾಜ್ಞೆ ತಂದಿರುವುದಾಗಿ ಡಾ.ಜಯಶ್ರೀ ಎಮ್ಮಿ ಅವರು ಹೇಳುತ್ತಿರುವುದರಿಂದ ಡಿಎಚ್‌ಒ ಹುದ್ದೆ ವಿಚಾರದಲ್ಲಿ ಗೊಂದಲ ಮುಂದುವರಿದಿದೆ.

Exit mobile version