ಬೆಂಗಳೂರು : ಐದು ವರ್ಷಗಳಿಂದ ಒಂದೇ ಸ್ಟೇಷನ್ನಲ್ಲಿರುವ ಪೊಲೀಸರನ್ನು ವರ್ಗಾವಣೆ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಆದೇಶದಂತೆ ಸ್ಟೇಷನ್ನ ಹಳೆಯ ಸಿಬ್ಬಂದಿ ವರ್ಗಾವಣೆ ಮಾಡಲಾಗುತ್ತದೆ. ಪೊಲೀಸ್ ಕಾನ್ಸ್ಟೇಬಲ್ನಿಂದ ಹಿಡಿದು ಪಿಎಸ್ಐವರೆಗೂ ಟ್ರಾನ್ಸಫರ್ ಆಗಲಿದ್ದಾರೆ.
ಇದನ್ನೂ ಓದಿ | ಪೊಲೀಸ್ ವರ್ಗಾವಣೆಯಲ್ಲೂ ಲಂಚ : ಬಿಜೆಪಿ ಶಾಸಕನ ಬಾಯಿಂದಲೇ ಹೊರಬಂದ ಸತ್ಯ !
ಮಂಗಳವಾರ (ಜೂನ್ 27)ರಂದು ಎಲ್ಲಾ ಪೊಲೀಸ್ ಠಾಣಾ ವಿಭಾಗದಲ್ಲೂ ಕೌನ್ಸಿಲಿಂಗ್ ನಡೆಯಲಿದ್ದು, ಐದು ವರ್ಷದಿಂದ ಒಂದೇ ಠಾಣೆಯಲ್ಲಿರುವ ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗುತ್ತದೆ. ಬೆಂಗಳೂರಿನಲ್ಲಿಯೇ 300ಕ್ಕೂ ಹೆಚ್ಚು ಸಿಬ್ಬಂದಿ ವರ್ಗಾವಣೆಯಾಗಲಿದ್ದು, ಉಪ-ವಿಭಾಗ, ವಿಭಾಗಕ್ಕೆ ನೂರಾರು ಪೊಲೀಸರು ವರ್ಗಾವಣೆಯಾಗಲಿದ್ದಾರೆ.
ಇದನ್ನೂ ಓದಿ | ಪ್ರಭಾವಿಗಳ ಕೈಚಳಕ! ಉದ್ಯಮಿ ಆದಿಕೇಶವಲು ಪುತ್ರನ ಬಂಧಿಸಿದ್ದ ಎನ್ಸಿಬಿ ಅಧಿಕಾರಿ ವರ್ಗಾವಣೆ