ಮಂಗಳೂರು: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು(Praveen Nettaru) ಅಂತಿಮ ಯಾತ್ರೆ ವೇಳೆ ಲಾಠಿ ಚಾರ್ಜ್ ಮಾಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಮತ್ತು ಸುಬ್ರಹ್ಮಣ್ಯ ಠಾಣೆಗಳ ಪಿಎಸ್‌ಐಗಳನ್ನು ವರ್ಗಾವಣೆ ಮಾಡಿ ಐಜಿಪಿ ದೇವಜ್ಯೋತಿ ರೇ ಆದೇಶ ಹೊರಡಿಸಿದ್ದಾರೆ.
ಬೆಳ್ಳಾರೆ ಠಾಣೆಗೆ ನೂತನ ಪಿಎಸ್‌ಐ ಆಗಿ ಕುಂದಾಪುರ ಪಿಎಸ್‌ಐ ಸುಹಾಸ್, ಸುಬ್ರಹ್ಮಣ್ಯ ಠಾಣೆಗೆ ನೂತನ ಪಿಎಸ್‌ಐ ಆಗಿ ವಿಟ್ಲ ಠಾಣೆ ಪಿಎಸ್‌ಐ ಟಿ. ಮಂಜುನಾಥ ಅವರನ್ನು ನಿಯೋಜಿಸಲಾಗಿದೆ. ಈ ಹಿಂದಿನ ಬೆಳ್ಳಾರೆ ಪಿಎಸ್‌ಐ ರುಕ್ಮ ನಾಯ್ಕ್, ಸುಬ್ರಹ್ಮಣ್ಯ ಪಿಎಸ್‌ಐ ಜಂಬೂರಾಜ್ ಮಹಾಜನ್ ಅವರನ್ನು ಐಜಿಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ | ಹರ್ಷ ಕೊಲೆಗಾರರನ್ನು ಎನ್‌ಕೌಂಟರ್ ಮಾಡಿದ್ದರೆ ಪ್ರವೀಣ್ ಹತ್ಯೆ ನಡೆಯುತ್ತಿರಲಿಲ್ಲ: ಚಕ್ರವರ್ತಿ ಸೂಲಿಬೆಲೆ
ಬುಧವಾರ ಪ್ರವೀಣ್ ಅಂತಿಮ ದರ್ಶನ ಪಡೆಯಲು ಸಚಿವರಾದ ಸುನೀಲ್ ಕುಮಾರ್, ಎಸ್. ಅಂಗಾರ ಹಾಗೂ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಆಗಮಿಸಿದ್ದಾಗ ಬಿಜೆಪಿ ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ನಳಿನ್ ಕುಮಾರ್ ಕಟೀಲ್ ಕಾರಿಗೆ ಮುತ್ತಿಗೆ ಹಾಕಿ ಮಗುಚಲು ಪ್ರಯತ್ನಿಸಿದ್ದರು.
ಆ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರಿಂದ ಕಾಸರಗೋಡಿನ ಹಿರಿಯ ಆರ್‌ಎಸ್‌ಎಸ್ ಕಾರ್ಯಕರ್ತ ರಮೇಶ್ ಸೇರಿ ಹಲವು ಹಿಂದೂ ಹಾಗೂ ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದರು. ಲಾಠಿ ಚಾರ್ಜ್ ಮಾಡಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕಾರ್ಯಕರ್ತರು ಒತ್ತಾಯಿಸಿದ್ದರು. ಇದೀಗ ಬೆಳ್ಳಾರೆ ಮತ್ತು ಸುಬ್ರಹ್ಮಣ್ಯ ಪಿಎಸ್‌ಐಗಳ ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ | Praveen Nettaru | ಸೊಲ್ಯುಷನ್ ನಿಮ್ಮ ಕೈಲೇ ಇದೆ ಸರ್: ಸಿಎಂ ಮುಂದೆ ಪ್ರವೀಣ್ ಪತ್ನಿ ಬೇಸರದ ನುಡಿ