Site icon Vistara News

ಬಿಬಿಎಂಪಿಯಲ್ಲಿ ಟ್ರಾನ್ಸ್‌ಫರ್ ಸ್ಟೇಷನ್ ಕರ್ಮಕಾಂಡ; 179 ಕೋಟಿ ರೂಪಾಯಿ ಪಾಲಿಕೆ ಹಣ ಗುಂಡಿಪಾಲು?

ಟ್ರಾನ್ಸ್‌ಫರ್ ಸ್ಟೇಷನ್

ಬೆಂಗಳೂರು: ಕಸ ಸಂಗ್ರಹಣೆಗೆ ಬಿಬಿಎಂಪಿ ಹೊಸ ಪ್ಲ್ಯಾನ್ ಮಾಡಿ ದುಡ್ಡು ಹೊಡೆಯಲು ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ತ್ಯಾಜ್ಯ ವಿಲೇವಾರಿಗೆ ಹೊಸ ಟ್ರಾನ್ಸ್‌ಫರ್ ಸ್ಟೇಷನ್ ನಿರ್ಮಾಣಕ್ಕೆ ಮುಂದಾಗಿರುವ ಬಿಬಿಎಂಪಿ 179 ಕೋಟಿ ರೂಪಾಯಿ ಟೆಂಡರ್‌ ಪ್ರಕ್ರಿಯೆ ಮುಗಿಸಿ, 300 ಕೋಟಿ ರೂಪಾಯಿ ಬೆಲೆ ಬಾಳುವ ಜಾಗವನ್ನು ತ್ಯಾಜ್ಯ ವಿಲೇವಾರಿಗಾಗಿ ಖಾಸಗಿ ಕಂಪನಿಗೆ ನೀಡಲು ಪಾಲಿಕೆ ಮುಂದಾಗಿದೆ ಎನ್ನಲಾಗಿದೆ.

ವಾರ್ಡ್‌ಗಳಲ್ಲಿ ಕಸ ಸಂಗ್ರಹಿಸಿಕೊಂಡು ಪ್ರತಿನಿತ್ಯ ಹೊರವಲಯದ ಸಂಸ್ಕರಣಾ ಘಟಕಗಳಿಗೆ ಕಸ ಸಾಗಿಸುವ ಬದಲು ನಗರದ ಮಧ್ಯೆ ಒಂದೆಡೆ ಸಂಗ್ರಹಿಸಿ ನಂತರ ಸಾಗಣೆ ಮಾಡಲು ಒಂದೆಡೆಗೆ ಸುರಿಯಲು ಟ್ರಾನ್ಸ್‌ಫರ್ ಸ್ಟೇಷನ್ ನಿರ್ಮಾಣ ಮಾಡಲಾಗುತ್ತಿದೆ. ಟ್ರಾನ್ಸ್‌ಫರ್ ಸ್ಟೇಷನ್ ನಿರ್ಮಾಣದ ನೆಪದಲ್ಲಿ 1೭೯ ಕೋಟಿ ರೂ.ಗಳನ್ನು ಕಸದ ಗುಂಡಿಗೆ ಸುರಿಯಲು ಬಿಬಿಎಂಪಿ ಮುಂದಾಗಿದೆಯೇ ಎಂಬ ಅನುಮಾನ ಮೂಡಿದೆ.

ಇದನ್ನೂ ಓದಿ | Suicide Cases | 2021ರಲ್ಲಿ ದಾಖಲೆಯ 10,560 ಆತ್ಮಹತ್ಯೆ ಪ್ರಕರಣಗಳು, ಸಾವಿಗೆ ಕಾರಣ ಏನು?

ಕಸ ಸಂಗ್ರಹಣೆ ಘಟಕಕ್ಕಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಮೂರು ಪ್ರಮುಖ ಜಾಗಗಳು ಖಾಸಗಿಯವರಿಗೆ ನೀಡಲು ಮುಂದಾಗಲಾಗಿದ್ದು, ಟ್ರಾನ್ಸ್‌ಫರ್ ಸ್ಟೇಷನ್ ಹೆಸರಿನ ಕಸದ ಸಂಗ್ರಹ ತಾಣ ನಿರ್ಮಿಸಲು ಸದ್ದಿಲ್ಲದೆ ಟೆಂಡರ್ ಪ್ರಕ್ರಿಯೆಯನ್ನು ಬಿಬಿಎಂಪಿ ಮುಗಿಸಿದೆ. ಸದ್ಯ ಮನೆಗಳಿಂದ ಆಟೋ, ಕಾಂಪ್ಯಾಕ್ಟರ್ ಮೂಲಕ ಸಂಗ್ರಹಿಸುವ ಕಸ ನಗರದ ಹೊರ ವಲಯಗಳ ಕಸ ಸಂಸ್ಕರಣಾ ಘಟಕ‌ ಸೇರುತ್ತಿದೆ. 10 ಟನ್ ಸಾಮರ್ಥ್ಯದ ಒಂದು ಕಾಂಪ್ಯಾಕ್ಟರ್‌ಗೆ ಕಸ ಸಾಗಿಸಲು ತಿಂಗಳಿಗೆ 1.86 ಲಕ್ಷ ರೂಪಾಯಿ ಬಾಡಿಗೆಯನ್ನು ಬಿಬಿಎಂಪಿ ಪಾವತಿಸುತ್ತಿದೆ. ಆದರೆ, ಟ್ರಾನ್ಸ್‌ಫರ್‌ ಸ್ಟೇಷನ್‌ಗಳನ್ನು ನಿರ್ಮಿಸಿದರೆ ಕಸ ವಿಲೇವಾರಿಗೆ ಈಗ ಆಗುತ್ತಿರುವ ವೆಚ್ಚಕ್ಕಿಂತ ಹೆಚ್ಚಿನ ಹೊರೆ ಬಿಬಿಎಂಪಿ ಮೇಲೆ ಬೀಳಲಿದೆ.

ಏನಿದು ಹೊಸ ಸ್ಕ್ಯಾಮ್?
ಬೆಂಗಳೂರಿನಲ್ಲಿ ನಿತ್ಯ 4200 ಮೆಟ್ರಿಕ್ ಟನ್ ಕಸ ಉತ್ಪಾದನೆಯಾಗುತ್ತಿದ್ದು, ಇದರಲ್ಲಿ 3000 ಮೆಟ್ರಿಕ್ ಟನ್‌ಗಳಿಗೂ ಅಧಿಕ ಕಸವನ್ನು ನಗರದ ಮೂರು ಜಾಗಗಳಲ್ಲಿ ಸಂಗ್ರಹಿಸಿಕೊಂಡು ನಂತರ ಕಸ ಹಾಕುವ ಭೂಭರ್ತಿ (ಲ್ಯಾಂಡ್ ಫಿಲ್ ಸೈಟ್) ತಾಣಗಳಿಗೆ ಸಾಗಿಸಲಾಗುತ್ತದೆ. ಆದರೆ, ಬಿಬಿಎಂಪಿ ಆಡಳಿತ ಈಗ ಕೋರಮಂಗಲ, ಚಿಕ್ಕಪೇಟೆ ಹಾಗೂ ಹೂಡಿಯಲ್ಲಿ ತಲಾ ಒಂದೊಂದು ಟ್ರಾನ್ಸ್‌ಫರ್ ಸ್ಟೇಷನ್ ನಿರ್ಮಾಣಕ್ಕೆ ಅಸ್ತು ಎಂದಿದೆ. ಸುಮಾರು 150 ಟನ್ ಸಾಮರ್ಥ್ಯದ ಒಂದು ಟ್ರಾನ್ಸ್‌ಫರ್ ಸ್ಟೇಷನ್ ನಿರ್ಮಿಸಲು ಕನಿಷ್ಠ 22 ಕೋಟಿ ರೂ. ಬೇಕಾಗುತ್ತದೆ. ಅಂದರೆ ಟ್ರಾನ್ಸ್‌ಫರ್ ಸ್ಟೇಷನ್ ನಿರ್ಮಾಣಕ್ಕೆ 13 ಕೋಟಿಗಳಾದರೆ, ಅದರ ನಿರ್ವಹಣೆಗೆ 9 ಕೋಟಿ ರೂ.ವೆಚ್ಚ ಮಾಡಲು ಬಿಬಿಎಂಪಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಇದೇ ರೀತಿ ಬೆಂಗಳೂರಿನ ಮೂರು ಪ್ರಮುಖ ಸ್ಥಳಗಳಲ್ಲಿ ಟ್ರಾನ್ಸ್‌ಫರ್ ಸ್ಟೇಷನ್ ನಿರ್ಮಿಸಿ, ನಿರ್ವಹಣೆ ಮಾಡಲು ವರ್ಷಕ್ಕೆ ಕನಿಷ್ಠ 66 ಕೋಟಿ ರೂ. ವೆಚ್ಚವಾಗುತ್ತದೆ. ಇದಲ್ಲದೆ ಕೋರಮಂಗಳ, ಹೂಡಿ ಮತ್ತು ಚಿಕ್ಕಪೇಟೆ ವಾರ್ಡ್‌ಗಳಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸುಮಾರು ಎರಡೂವರೆ ಎಕರೆಗೂ ಹೆಚ್ಚಿನ ಜಾಗವನ್ನೂ ಖಾಸಗಿಗೆ ನೀಡಲಾಗುತ್ತಿದೆ. ಇದರಿಂದ ಬಿಬಿಎಂಪಿಗೆ ಭಾರಿ ನಷ್ಟ ಉಂಟಾಗುವ ಸಾಧ್ಯತೆ ಇದೆ. ಅಂದರೆ ಟ್ರಾನ್ಸ್‌ಫರ್ ಸ್ಟೇಷನ್ ನಿರ್ಮಾಣದಿಂದ ಬಿಬಿಎಂಪಿಗೆ ವರ್ಷಕ್ಕೆ 66 ಕೋಟಿ ರೂಪಾಯಿ ಹೆಚ್ಚವರಿ ಹೊರೆಯ ಜತೆಗೆ ನೂರಾರು ಕೋಟಿ ಬೆಲೆ ಬಾಳುವ ಜಾಗವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

ಬಿಬಿಎಂಪಿಗೆ ಹೇಗೆ ನಷ್ಟ?
ಬಿಬಿಎಂಪಿ ಮೂರು ಜಾಗದಲ್ಲಿ 66 ಕೋಟಿ ರೂ. ವೆಚ್ಚ ಮಾಡಿ 150 ಟನ್ ಸಾಮರ್ಥ್ಯದ ಟ್ರಾನ್ಸ್‌ಫರ್ ಸ್ಟೇಷನ್‌ಗಳನ್ನು ನಿರ್ಮಿಸುವ ಬದಲು ಈಗ ಇರುವ ಮಾದರಿಯಲ್ಲೇ ಕಾಂಪ್ಯಾಕ್ಟರ್‌ಗಳನ್ನು ಹೆಚ್ಚಿಸಬಹುದು. ಒಂದು ಕಾಂಪ್ಯಾಕ್ಟರ್ 10 ಟನ್ ಕಸ ಸಾಗಣೆ ಮಾಡುವ ಸಾಮರ್ಥ್ಯವಿದೆ. ಇದಕ್ಕೆ ತಿಂಗಳಿಗೆ 1.86 ಲಕ್ಷ ವೆಚ್ಚವಾಗುತ್ತದೆ. ಅದರಂತೆ 150 ಟನ್ ಟ್ರಾನ್ಸ್‌ಫರ್ ಸ್ಟೇಷನ್ ಬದಲು 15 ಕಾಂಪ್ಯಾಕ್ಟರ್‌ಗಳನ್ನು ನಿಯೋಜಿಸಿದರೆ, ತಿಂಗಳಿಗೆ 28 ಲಕ್ಷ ಮಾತ್ರ ವೆಚ್ಚವಾಗಿ, ವರ್ಷಕ್ಕೆ 3.35 ಕೋಟಿಗಳಲ್ಲಿ ಕಸ ಸಾಗಣೆಯಾಗುತ್ತದೆ. ಅಂದರೆ ವರ್ಷಕ್ಕೆ 22 ಕೋಟಿ ರೂ ವೆಚ್ಚ ಮಾಡಿ ಒಂದು ಟ್ರಾನ್ಸ್‌ಫರ್ ಸ್ಟೇಷನ್ ನಿರ್ಮಿಸಿ ಮಾಡುವ ಕೆಲಸವನ್ನು ಕಾಂಪ್ಯಾಕ್ಟರ್‌ಗಳ ಮೂಲಕ ಕೇವಲ 3.35 ಕೋಟಿ ವೆಚ್ಚದಲ್ಲೇ ಮುಗಿಸಬಹುದು. ಆದರೆ ಬಿಬಿಎಂಪಿ ಟ್ರಾನ್ಸ್‌ಫರ್ ಸ್ಟೇಷನ್ ನಿರ್ಮಿಸುವ ಲಾಬಿಗೆ ಜೋತು ಬಿದ್ದಿದ್ದು, ಒಂದು ಟ್ರಾನ್ಸ್‌ಫರ್ ನಿರ್ವಹಣೆಯಲ್ಲೇ 6 ಕೋಟಿಗಳನ್ನು (ನಿರ್ಮಾಣ ವೆಚ್ಚ 13 ಕೋಟಿ ರೂ. ಹೊರತುಪಡಿಸಿ) ವೆಚ್ಚ ಮಾಡಿ ನಷ್ಟಕ್ಕೆ ಗುರಿಯಾಗುತ್ತಿದೆ.

ಇದೇ ರೀತಿ ನಗರದಲ್ಲಿ ಮೂರು ಟ್ರಾನ್ಸ್‌ಫರ್ ಸ್ಟೇಷನ್ ನಿರ್ವಹಣೆಯಿಂದ ಸುಮಾರು 18 ಕೋಟಿ ರೂ.ಗಳಿಗೂ ನಷ್ಟಕ್ಕೆ ಗುರಿಯಾಗಲಿದೆ. ಈ ಟ್ರಾನ್ಸ್‌ಫರ್ ಸ್ಟೇಷನ್ ನಿರ್ಮಿಸಿ, ನಿರ್ವಹಣೆ ಮಾಡುವ 7 ವರ್ಷಗಳ ಗುತ್ತಿಗೆಯನ್ನು ಹೈದರಾಬಾದ್ ಮೂಲದ ಖಾಸಗಿ ಸಂಸ್ಥೆಯೊಂದಕ್ಕೆ ನೀಡಲಾಗಿದೆ. ಇದರಿಂದ 7 ವರ್ಷಗಳ ಅವಧಿಗೆ ಬರೀ ಕಸ ನಿರ್ವಹಣೆ ಒಂದೇ ವಿಚಾರದಲ್ಲಿ ಬಿಬಿಎಂಪಿ 140 ಕೋಟಿ ರೂಪಾಯಿ ನಷ್ಟ ಅನುಭವಿಸಬೇಕಾಗುತ್ತದೆ. ಜತೆಗೆ 3 ಟ್ರಾನ್ಸ್‌ಫರ್ ಸ್ಟೇಷನ್ ನಿರ್ಮಾಣ ವೆಚ್ಚ 39 ಕೋಟಿ ರೂಪಾಯಿ ಸೇರಿದರೆ, 179 ಕೋಟಿ ರೂಪಾಯಿ ನಷ್ಟವಾಗಲಿದೆ ಎಂದು ಅಧಿಕಾರಿಗಳೇ ಹೇಳಿದ್ದಾರೆ ಎನ್ನಲಾಗಿದೆ.

ಈಗ ಇರುವ ಸ್ಟೇಷನ್ ಏನಾಯ್ತು?
ಬಿಬಿಎಂಪಿ 5 ವರ್ಷಗಳ ಹಿಂದೆಯೇ ಟ್ರಾನ್ಸ್‌ಫರ್ ಸ್ಟೇಷನ್ ಆರಂಭಿಸಲು ಹೋಗಿ ಕೈ ಸುಟ್ಟುಕೊಂಡಿದೆ. ನಗರದ 50ಕ್ಕೂ ಹೆಚ್ಚು ಕಡೆ ಮಿನಿ ಟ್ರಾನ್ಸ್‌ಫರ್ ಸ್ಟೇಷನ್ ನಿರ್ಮಿಸಲು ಟಿಪಿಎಸ್ ಎಂಬ ಖಾಸಗಿ ಸಂಸ್ಥೆಗೆ ಬಿಬಿಎಂಪಿ ಗುತ್ತಿಗೆ ನೀಡಿತ್ತು. ಆದರೆ, ಆ ಸಂಸ್ಥೆ ಈತನಕ ಸಂಜಯ್ ನಗರ, ದೊಮ್ಮಲೂರು ಹಾಗೂ ಚಿಕ್ಕಪೇಟೆ ಸೇರಿದಂತೆ ಬರೀ 5 ಕಡೆ ಮಾತ್ರ ಮಿನಿ ಟ್ರಾನ್ಸ್‌ಫರ್ ಸ್ಟೇಷನ್‌ಗಳನ್ನು ಆರಂಭಿಸಿದ್ದು ಕಸ ನಿರ್ವಹಣೆ ಯಾವುದೇ ಸಹಕಾರಿಯಾಗಿಲ್ಲ.

ಯೋಜನೆಯ ನಷ್ಟಗಳೇನು?

ಪರಿಹಾರಗಳೇನು ?

Exit mobile version