ತುಮಕೂರು: ಜಿಲ್ಲೆ ತಿಪಟೂರಿನ ಗೊರಗೊಂಡನಹಳ್ಳಿ ಬಳಿ ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಕಾರು ಚಾಲಕರೊಬ್ಬರು ಅಪಾಯದಲ್ಲಿ ಸಿಲುಕಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಗೊರಗೊಂಡನಹಳ್ಳಿ ಬಳಿ ಸೇತುವೆ ನಿರ್ಮಾಣ ಹಂತದಲ್ಲಿದೆ. ಆದರೆ ಸೇತುವೆ ನಿರ್ಮಾಣದ ಬಗ್ಗೆ ಯಾವುದೇ ಸೂಚನಾ ಫಲಕ ಹಾಕದೇ ನಿರ್ಲಕ್ಷ್ಯ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ತಿಪಟೂರು ಕಡೆಯಿಂದ ತುರುವೇಕೆರೆ ಕಡೆಗೆ ವೇಗವಾಗಿ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ನಿರ್ಮಾಣ ಹಂತದಲ್ಲಿದ್ದ ಸೇತುವೆಗೆ ಅಳವಡಿಸಿದ್ದ ಪೈಪ್‌ಗೆ ಡಿಕ್ಕಿ ಹೊಡೆದು ಅದರ ಮೇಲೆ ಹತ್ತಿ ನಿಂತಿದೆ. ಇದದಿಂದ ಕೂದಲೆಳೆ ಅಂತರದಲ್ಲಿ ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಸೂಚನಾ ಫಲಕ ಹಾಕದೆ ಸೇತುವೆ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಗುತ್ತಿಗೆದಾರನ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ | Suicide | ಮೊಮ್ಮಗಳು ಬಿದ್ದ ಬಾವಿಯಲ್ಲಿ ಅಜ್ಜಿಯೂ ಬಿದ್ದು ಆತ್ಮಹತ್ಯೆ!