ತುಮಕೂರು: ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ವೈದ್ಯರಿಲ್ಲದೇ ಮಗು ಸಾವು ಪ್ರಕರಣದ ವಿಚಾರಣೆಗಾಗಿ ರಾತ್ರೋ ರಾತ್ರಿ ಕೊಡಿಗೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದೌಡಾಯಿಸಿದ ಡಿಎಚ್ಓ ಡಾ.ಮಂಜುನಾಥ್, ಪ್ರಕರಣದ ಬಗ್ಗೆ ಸಿಬ್ಬಂದಿಯಿಂದ ಹೇಳಿಕೆ ಪಡೆದಿದ್ದಾರೆ.
ಸುಮಾರು ಮೂರು ಗಂಟೆಗಳ ಕಾಲ ಆಸ್ಪತ್ರೆಯ ವೈದ್ಯಾಧಿಕಾರಿ ರೋಹಿತ್, ಶುಶ್ರೂಷಕಿ ವಾಣಿ, ಇನ್ನೊಬ್ಬ ಡಿ ಗ್ರೂಪ್ ನೌಕರನ ಹೇಳಿಕೆಯನ್ನು ಡಾ. ಮಂಜುನಾಥ್ ಪಡೆದಿದ್ದಾರೆ. ಬಳಿಕ ಈ ಕುರಿತು ಹೇಳಿಕೆ ನೀಡಿದ್ದಾರೆ.
5 ವರ್ಷದ ಮಗು ಸಂಜೆ ಸಂಪಿಗೆ ಬಿದ್ದು ಸಾವನ್ನಪ್ಪಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಮಗುವನ್ನ ಕರೆತಂದಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ವೈದ್ಯರ ಬಳಿ ಹೇಳಿಕೆ ಪಡೆದಿದ್ದೇನೆ. ಪಕ್ಕದಲ್ಲೇ ಇರುವ ಮೈದನಹಳ್ಳಿಗೆ ಮೇದುಳು ಜ್ವರದ ಲಸಿಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ತೆರಳಿದ್ದೆ ಎಂದು ಹೇಳಿದ್ದಾರೆ. ಏನು ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಪರಿಶೀಲನೆ ಮಾಡುತ್ತೇವೆ. ಗಂಭೀರ ಪ್ರಕರಣ ಆಗಿರುವುದರಿಂದ ಮೇಲಧಿಕಾರಿಗಳಿಗೆ ವರದಿ ನೀಡಬೇಕು ಎಂದಿದ್ದಾರೆ.
ಮೂವರ ಹೇಳಿಕೆ ಪಡೆದಿದ್ದೇನೆ. ಹೇಳಿಕೆ ಪ್ರಕಾರ ಮಗು ಆಸ್ಪತ್ರೆಗೆ ಬಂದಾಗಲೇ ಸಾವನ್ನಪ್ಪಿತ್ತು ಎಂದು ಕಂಡುಬಂದಿದೆ. ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ ಯಾರ ಮೇಲೆ ಶಿಸ್ತುಕ್ರಮ ಜರುಗಿಸಬೇಕು ಎಂಬುದರ ಬಗ್ಗೆ ಕಮಿಷನರ್‌ಗೆ ವರದಿ ಕೊಡುತ್ತೇನೆ. ಅವರ ಆದೇಶದಂತೆ ಶಿಸ್ತುಕ್ರಮ ನಡೆಯಲಿದೆ. ಶುಶ್ರೂಷಕಿ ಹೇಳಿಕೆ ಪ್ರಕಾರ ಮಗು ಸಂಜೆ 4.15 ಕ್ಕೆ ಸಂಪ್‌ಗೆ ಬಿದ್ದಿದೆ. ಮಗುವನ್ನ ಆಸ್ಪತ್ರೆಗೆ ಕರೆತಂದ ವೇಳೆ ಡಾಕ್ಟರ್, ಸಂಜೆ 4.40ರ ಸಮಯದಲ್ಲಿ ಆಸ್ಪತ್ರೆಯಿಂದ ಹೋಗಿದ್ದೀನಿ ಅಂತ ಹೇಳಿಕೆ ನೀಡಿದ್ದಾರೆ. ಪೋಷಕರು ನೋಡಿ ನೀರು ಕುಡಿದಿದ್ರೆ ವಾಂತಿ ಮಾಡ್ಲಿ ಅಂತ ಹೊಟ್ಟೆಯನ್ನ ಪುಶ್ ಮಾಡಿದ್ದೇವೆ ಎಂದು ಶುಶ್ರೂಷಕಿ ಬಳಿ ಹೇಳಿದ್ದಾರೆ. ಖಾಸಗಿ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋಗಿದ್ದೆವು ಎಂದು ಮಗುವಿನ ಸಂಬಂಧಿಕರೇ ಶುಶ್ರೂಷಕಿ ಬಳಿ ಹೇಳಿದ್ದಾರೆ. ಮಗು ಚೆಕಪ್ ಮಾಡಿದಾಗಲೇ ಸಾವು ಆಗಿದೆ. ಈ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯಾಧಿಕಾರಿಗಳು ಕರ್ತವ್ಯದಲ್ಲಿದ್ದಾರೆ. ಆಸ್ಪತ್ರೆಯಲ್ಲಿ 24 ಗಂಟೆ ಕೆಲಸ ನಿರ್ವಹಣೆ ಆಗಬೇಕು. ಘಟನೆ ಬಗ್ಗೆ ಎಚ್.ಡಿ ಕುಮಾರಸ್ವಾಮಿ ಅವರು ನನಗೆ ಕರೆ ಮಾಾಡಿದ್ದರು. ಆರೋಗ್ಯ ಮಂತ್ರಿಗಳು, ಕಮಿಷನರ್ ಸಹ ಕರೆ ಮಾಡಿ, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ಆದೇಶ ನೀಡಿದ್ದಾರೆ. ವೈದ್ಯರ ಹಾಗೂ ಸಿಬ್ಬಂದಿಗಳ ಲೋಪ ಕಂಡುಬಂದರೆ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗುವುದು ಎಂದಿದ್ದಾರೆ.
ಇದನ್ನೂ ಓದಿ | Hospital Negligence | ಜ್ವರದಿಂದ ಬಳಲುತ್ತಿದ್ದ 9 ತಿಂಗಳ ಮಗು ಸಾವು; ವೈದ್ಯರ ನಿರ್ಲಕ್ಷ್ಯದ ವಿರುದ್ಧ ರಸ್ತೆ ತಡೆ