ತುಮಕೂರು: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಕಂಟಲಗೆರೆಯಲ್ಲಿ ಕೆರೆಯಲ್ಲಿ ಈಜಲು ಹೋಗಿ ಬಾಲಕರಿಬ್ಬರು (Drown in lake) ಮೃತಪಟ್ಟಿದ್ದಾರೆ. ರಾಕೇಶ್(14), ಧನುಷ್(15) ಮೃತ ದುರ್ದೈವಿಗಳು.
ರಾಕೇಶ್, ಧನುಷ್ ತಿಮ್ಮನಹಳ್ಳಿ ನಿವಾಸಿಗಳಾಗಿದ್ದು, ಇಬ್ಬರು ಕೆರೆಯಲ್ಲಿ ಈಜಲು ಜಿಗಿದಿದ್ದಾರೆ. ಆದರೆ ನೀರಿನಿಂದ ಹೊರಬರಲು ಆಗದೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕೆರೆಯಿಂದ ಮೃತದೇಹವನ್ನು ಪೊಲೀಸರು ಹೊರ ತೆಗೆದಿದ್ದಾರೆ.
ಮೃತ ಬಾಲಕರಿಬ್ಬರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗಾಗಿ ರವಾನಿಸಲಾಗಿದೆ. ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೈಕ್ ಸವಾರನ ಜೀವ ತೆಗೆದ ಕಾಂಕ್ರೀಟ್ ಮಿಕ್ಸಿಂಗ್ ಲಾರಿ
ಬೆಂಗಳೂರು: ಜೆಎಂಜೆ ರಸ್ತೆಯ ಜೂಡಿಯ ಶಾಪಿಂಗ್ ಮಾಲ್ ಬಳಿ ಕಾಂಕ್ರೀಟ್ ಲಾರಿ ಗುದ್ದಿ (Road Accident) ಪಾದಚಾರಿಯೊಬ್ಬರು ಭಾನುವಾರ ಬೆಳಗ್ಗೆ ಸಾವಿಗೀಡಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಬೈಕ್ ಕಾಂಕ್ರೀಟ್ ಮಿಕ್ಸಿಂಗ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ದೆವೇಂದ್ರಪ್ಪ (21) ಮೃತ ದುರ್ದೈವಿ.
ಬೈಕ್‌ನಲ್ಲಿ ತೆರಳುತ್ತಿದ್ದ ದೆವೇಂದ್ರಪ್ಪಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಿಂದ ಹಾರಿ ಬಿದ್ದ ಪರಿಣಾಮ ತಲೆಗೆ ಗಂಭೀರವಾಗಿದ್ದು, ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ. ಯಲಹಂಕ ಅಟ್ಟೂರು ಲೇಔಟ್‌ನಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಯಲಹಂಕ ಸಂಚಾರಿ ಪೊಲೀಸರು ಆಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಕಾಂಕ್ರೀಟ್ ಲಾರಿ ಗುದ್ದಿ ಪಾದಚಾರಿ ಸಾವು
ಬೆಂಗಳೂರು: ಕಾಂಕ್ರೀಟ್ ಲಾರಿ ಗುದ್ದಿ (Road Accident) ಪಾದಚಾರಿಯೊಬ್ಬರು ಸಾವಿಗೀಡಾಗಿದ್ದಾರೆ. ನಾಗವಾರದ ಮಹೇಂದ್ರ ಕುಮಾರ್ (50) ಮೃತ ವ್ಯಕ್ತಿ.
ಜೆಎಂಜೆ ರಸ್ತೆಯ ಜೂಡಿಯ ಶಾಪಿಂಗ್ ಮಾಲ್ ಬಳಿ ಅಫಘಾತ ನಡೆದಿತ್ತು. ಸಂಜೆ 7 ಗಂಟೆ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದ ಮಹೇಂದ್ರ ಅವರಿಗೆ ಲಾರಿ ಬಡಿದಿತ್ತು. ಲಾರಿ ಚಾಲಕನನ್ನು ಕೆ.ಜಿ ಹಳ್ಳಿ ಸಂಚಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆ.ಜಿ ಹಳ್ಳಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :Self Harming : ಶಾಲೆ ಪಕ್ಕದಲ್ಲಿತ್ತು ಆಟೋ ಚಾಲಕನ ಡೆಡ್‌ಬಾಡಿ; ಇದು ಕೊಲೆಯೋ? ಆತ್ಮಹತ್ಯೆಯೋ?
ನಾಯಿ ತಪ್ಪಿಸಲು ಹೋಗಿ ಬಲಿಯಾದ ಮಹಿಳೆ
ದೊಡ್ಡಬಳ್ಳಾಪುರ: ಬೈಕ್‌ಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಕೆಳಗೆ ಬಿದ್ದ ಮಹಿಳೆಯ ಮೇಲೆ ಲಾರಿ ಹರಿದು ಮಹಿಳೆ ಮೃತಪಟ್ಟಿದ್ದಾರೆ. ದೊಡ್ಡಬಳ್ಳಾಪುರ ಕೊಂಗಾಡಿಯಪ್ಪ ಕಾಲೇಜು ಬಳಿ ಘಟನೆ ನಡೆದಿದೆ.
ದ್ವಿಚಕ್ರದಲ್ಲಿ ಹೋಗುವಾಗ ಏಕಾಏಕಿ ನಾಯಿ ರಸ್ತೆಗೆ ನುಗ್ಗಿ ಅಡ್ಡ ಬಂದಿದೆ. ನಾಯಿ ತಪ್ಪಿಸಲು ಹೋಗಿ ಕೆಳಗೆ ಬಿದ್ದ ಮಹಿಳೆ ಮೇಲೆ ಹಿಂದಿನಿಂದ ಬಂದ ಲಾರಿ ಹರಿದಿದೆ. ನಂದಿನಿ(28) ಮೃತ ಮಹಿಳೆ. ಕೆಳಗೆ ಬಿದ್ದ ದ್ವಿಚಕ್ರ ವಾಹನ ಸಮೇತ ಮಹಿಳೆಯನ್ನು ಲಾರಿ ಎಳೆದುಕೊಂಡು ಹೋಗಿದೆ.
ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನದಲ್ಲಿ ನಂದಿನಿ ಮತ್ತು ಅವರ ಮಗು ತೆರಳುತ್ತಿದ್ದರು. ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ. ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣ ಮಹಿಳೆ ಸಾವಿಗೀಡಾದರು. ಕೂಡಲೇ ದೊಡ್ಡಬಳ್ಳಾಪುರದ ಸರಕಾರಿ ಆಸ್ಪತ್ರೆಗೆ ರವಾನಿಸಲಾಯಿತಾದರೂ ಬದುಕುಳಿಯಲಿಲ್ಲ. ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ