ಶಿರಾ: ಆಕಸ್ಮಿಕ ಅಗ್ನಿ ಅವಘಡ (Fire Accident) ಸಂಭವಿಸಿ, ಐದು ಗುಡಿಸಲುಗಳು ಸುಟ್ಟು ಭಸ್ಮವಾಗಿರುವ ಘಟನೆಯು ಶಿರಾ ತಾಲೂಕಿನ ಕಳ್ಳಂಬೆಳ್ಖ ಹೋಬಳಿಯ ನೆಲದಿಮ್ಮನಹಳ್ಳಿ ಗ್ರಾಮದಲ್ಲಿ ಜರುಗಿದೆ.
ಗ್ರಾಮದಲ್ಲಿ ಬುಧವಾರ ಮಧ್ಯಾಹ್ನದ ವೇಳೆ ಕೆಂಪಮ್ಮ ಎಂಬುವವರ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿಬಿದ್ದು, ನಂತರ ಪಕ್ಕದಲ್ಲಿದ್ದ ನರಸಮ್ಮ, ಸರಸ್ವತಮ್ಮ, ಶಿವಮ್ಮ, ರಾಮಕ್ಕ ಎಂಬುವವರ ಗುಡಿಸಲುಗಳಿಗೂ ಬೆಂಕಿ ತಗುಲಿ, ಸಂಪೂರ್ಣ ಸುಟ್ಟು ಭಸ್ಮವಾಗಿವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Monkey Death : ಕರುಳು ಹಿಂಡುವ ದೃಶ್ಯ; ಅಪಘಾತದಲ್ಲಿ ಮೃತಪಟ್ಟ ಮರಿ ಕೋತಿಯನ್ನು ತಬ್ಬಿ ಅಮ್ಮನ ರೋಧನೆ
ಬೆಂಕಿ ಅವಘಡದಿಂದಾಗಿ ಗುಡಿಸಲುಗಳಲ್ಲಿದ್ದ ದವಸ ಧಾನ್ಯಗಳು, ಬಟ್ಟೆಗಳು, ಪಾತ್ರೆ ಸಾಮಗ್ರಿಗಳು, ದಾಖಲಾತಿಗಳು ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂ. ಹಾನಿ ಸಂಭವಿಸಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Indian Coffee: ದಕ್ಷಿಣ ಭಾರತದ ಫಿಲ್ಟರ್ ಕಾಫಿ ವಿಶ್ವದಲ್ಲೇ ಟಾಪ್ 2; ಫಸ್ಟ್ ಯಾವುದು?
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಕಳ್ಳಂಬೆಳ್ಳ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.