ತುಮಕೂರು: ಕಣ್ಣು ಆಪರೇಷನ್ ಮಾಡಿಸುವ ನೆಪದಲ್ಲಿ ಬಂದ ವ್ಯಕ್ತಿಯೊಬ್ಬ ವೃದ್ಧ ದಂಪತಿಗಳಿಗೆ ಮಕ್ಮಲ್ ಟೋಪಿ ಹಾಕಿ ₹3 ಲಕ್ಷ ದೋಚಿಕೊಂಡು ಹೋಗಿದ್ದಾನೆ. ಜಿಲ್ಲೆಯ ಕೊರಟಗೆರೆ ದೊಡ್ಡಪೇಟೆಯಲ್ಲಿ ಗಿರಿಜಮ್ಮ, ರೇಣುಕಪ್ಪ ಎಂಬ ವೃದ್ದ ದಂಪತಿ ಮೋಸ ಹೋದ ಪ್ರಕರಣ ವರದಿಯಾಗಿದೆ. ಕಣ್ಣು ಆಪರೇಷನ್ ಮಾಡಿಸಿಕೊಂಡರೆ ಆಸ್ಪತ್ರೆಯಲ್ಲಿ ₹10 ಸಾವಿರ ಕೊಡುತ್ತಾರೆಂದು ಸುಳ್ಳು ಹೇಳಿ ಮೋಸ ಮಾಡಿದ್ದಾನೆ.
ವೃದ್ಧೆಯ ಬಳಿ ಬಂದ ಆರೋಪಿ, ಕಣ್ಣು ಆಪರೇಷನ್ ಮಾಡಿಸಿಕೊಂಡರೆ ಸರ್ಕಾರದಿಂದ ₹10ಸಾವಿರ ನೀಡುತ್ತಾರೆ ಎಂದಿದ್ದಾನೆ. ಅದರಲ್ಲಿ ತನಗೆ ₹1 ಸಾವಿರ ಕಮಿಷನ್ ನೀಡುವಂತೆ ಹೇಳಿದ್ದಾನೆ. ಇದಕ್ಕೆ ದಂಪತಿ ಒಪ್ಪಿದ್ದಾರೆ. ಕಣ್ಣು ಆಪರೇಷನ್‌ಗಾಗಿ ಆಧಾರ್, ಪಾನ್ ಹಾಗು ವೋಟರ್ ಐಡಿ ಪಡೆದು ಅವರ ಮುಂದೆ ನಾಟಕ ಮಾಡಿದ್ದಾನೆ. ನಂತರ ಬೈಕ್ ನಲ್ಲಿ ವೃದ್ದೆಯನ್ನು ಆಸ್ಪತ್ರೆ ಬಳಿ ಕರೆತಂದಿದ್ದಾನೆ.
ಆಪರೇಷನ್ ಮಾಡುವಾಗ ಒಡುವೆ ಹೊರತೆಗೆಯಬೇಕು. ನನ್ನ ಬಳಿ ತೆಗೆದು ಕೊಡಿ ನಾನು ಜೋಪಾನವಾಗಿ ಇಟ್ಟುಕೊಳ್ಳುತ್ತೇನೆ ಎಂದು ಹೇಳಿದ್ದಾನೆ. ಇದನ್ನು ನಂಬಿದ ವೃದ್ಧೆ ತಾನು ಧರಿಸಿದ್ದ ಓಲೆ, ನತ್ತು, ಉಂಗುರ, ಎರಡು ಮಾಂಗಲ್ಯ ಸರ ನೀಡಿದ್ದಾಳೆ. ಇಷ್ಟನ್ನೂ ಪಡೆದ ಖದೀಮ, ಅಲ್ಲಿಂದ ಪರಾರಿಯಾಗಿದ್ದಾನೆ.
ಹಾಡ ಹಗಲೆ ನಡೆದಿದ ಘಟನೆಯಲ್ಲಿ ಸುಮಾರು ₹5 ಲಕ್ಷ ಬೆಲೆಬಾಳುವ ಒಡವೆ ಕಳೆದುಕೊಂಡ ವೃದ್ಧ ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಕೊರಟಗರೆ ಪೋಲಿಸರು ವೃದ್ಧರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಿಚಾರಣೆ ನಡೆಸಿದ್ದಾರೆ. ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ| ಮದ್ಯ ದರದಲ್ಲಿ ಮೋಸ ಖಂಡಿಸಿ Gandhigiri ಗಾಂಧಿ, ಅಂಬೇಡ್ಕರ್ ಪೋಟೊ ಇಟ್ಟು ಪ್ರೊಟೆಸ್ಟ್