Site icon Vistara News

Gubbi News : ಬೆಸ್ಕಾಂ ಅಧಿಕಾರಿಗಳನ್ನು ಕಚೇರಿಯೊಳಗೆ ಕೂಡಿ ಹಾಕಿ ಪ್ರತಿಭಟಿಸಿದ ರೈತರು

#image_title

ಗುಬ್ಬಿ : ತಾಲೂಕಿನ ಹಲವೆಡೆ ಸರಿಯಾದ ರೀತಿಯಲ್ಲಿ ವಿದ್ಯುತ್‌ ಸರಬರಾಜು ನಡೆಯುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ. ಅದೇ ಹಿನ್ನೆಲೆ ಸೋಮವಾರದಂದು ತಾಲ್ಲೂಕಿನ ನಿಟ್ಟೂರು ಬೆಸ್ಕಾಂ ಕಚೇರಿಗೆ ಬೀಗ ಜಡಿದು ಅಧಿಕಾರಿಗಳನ್ನು ಕೂಡಿಹಾಕಿ ಪ್ರತಿಭಟನೆ (Gubbi News) ನಡೆಸಿದ್ದಾರೆ.

ಇದನ್ನೂ ಓದಿ: Karnataka Election 2023: ಗುಬ್ಬಿ ಸಂಭಾವ್ಯ ಕೈ ಅಭ್ಯರ್ಥಿ ಎಸ್.ಆರ್. ಶ್ರೀನಿವಾಸ್‌ಗೆ ಜೆಡಿಎಸ್‌ ಪ.ಪಂ ಸದಸ್ಯರ ಬೆಂಬಲ; ದಳಕ್ಕೆ ಆಘಾತ
ಬೇಣಚಗೆರೆ, ಹಾರನ ಹಳ್ಳಿ ಸೇರಿದಂತೆ ಇನ್ನಿತರ ಭಾಗಗಳಿಗೆ ಸರಿಯಾದ ರೀತಿಯಲ್ಲಿ ರೈತರಿಗೆ ವಿದ್ಯುತ್ ನೀಡಲಾಗುತ್ತಿಲ್ಲ ಎಂದು ರೈತರು ದೂರಿದ್ದಾರೆ. ಈ ಬಗ್ಗೆ ಬಿಜೆಪಿ ತಾಲ್ಲೂಕು ಅಧ್ಯಕ್ಷ ಪಂಚಾಕ್ಷರಿ ಅವರು ಮಾತನಾಡಿದದ್ದು, “ಸುಮಾರು ಎರಡು ತಿಂಗಳಿನಿಂದಲೂ ಈ ಸಮಸ್ಯೆ ನಿರಂತರವಾಗಿದೆ. ನಿರಂತರ ವಿದ್ಯುತ್ತನ್ನು ನೀಡುತ್ತಿಲ್ಲ. ಇದರಿಂದ ಮನೆಗಳಿಗೆ ಸಮಸ್ಯೆಯಾಗುದೆ ಹಾಗೂ ಕುಡಿಯುವ ನೀರಿಗೆ ಅಭಾವ ಸೃಷ್ಟಿಯಾಗಿದೆ. ಇಲ್ಲಿರುವಂತಹ ಅಧಿಕಾರಿ ಅನಿಲ್ ಕುಮಾರ್ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸದೆ ಇರುವುದರಿಂದ ನಿರಂತರವಾಗಿ ಇಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಕೂಡಲೇ ಇವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು” ಎಂದು ಆಗ್ರಹ ಮಾಡಿದರು.

ಗ್ರಾಮ ಪಂಚಾಯತಿ ಅಧ್ಯಕ್ಷ ನರಸೇ ಗೌಡ ಮಾತನಾಡಿ “ಇಲ್ಲಿರುವ ಅಧಿಕಾರಿ ಯಾವುದೇ ರೀತಿಯಲ್ಲೂ ಜನರಿಗೆ ಸ್ಪಂದನೆ ಮಾಡುವುದಿಲ್ಲ. ರೈತರ ಸಮಸ್ಯೆ ಬಗ್ಗೆ ಅವರಿಗೆ ತಿಳಿದೇ ಇಲ್ಲ. ಇಂತಹ ಅಧಿಕಾರಿಗಳು ನಮಗೆ ಬೇಕಿಲ್ಲ” ಎಂದು ಒತ್ತಾಯ ಮಾಡಿದರು.

ಇದನ್ನೂ ಓದಿ: Karnataka Election: ಗುಬ್ಬಿ ಜೆಡಿಎಸ್‌ ಶಾಸಕ ಶ್ರೀನಿವಾಸ್ ರಾಜೀನಾಮೆ ಅಂಗೀಕಾರ
“ಎರಡು ತಿಂಗಳಿನಿಂದಲೂ ಸಮಸ್ಯೆ ಬಗ್ಗೆ ಎಷ್ಟು ಬಾರಿ ತಿಳಿಸಿದರು ಸಹ ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಇಂತಹ ಅಧಿಕಾರಿಗಳಿಂದಾಗಿ ಮನೆಗಳಲ್ಲಿ ಮತ್ತು ರೈತರಿಗೆ ಅವಶ್ಯಕವಾದ ವಿದ್ಯುತ್ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ” ಎಂದಿದ್ದಾರೆ ರೈತ ಬಾಗೂರು ಲೋಕೇಶ್‌.

ಈ ವೇಳೆ ಕಾಂತ್ ರಾಜು ವಿಜಯ್ ಕುಮಾರ್, ಮಂಗಳ ಗೌರಮ್ಮ, ಗಿರೀಶ್ ಬಸವರಾಜು, ಸಿದ್ದರಾಮಣ್ಣ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Exit mobile version