ತುಮಕೂರು: ಒಕ್ಕಲಿಗ ಯುವ ಬ್ರಿಗೇಡ್ ಮತ್ತು ಎನ್‌ಆರ್‌ಐ ಒಕ್ಕಲಿಗರ ಬ್ರಿಗೇಡ್ ವತಿಯಿಂದ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಹಾಗೂ ಶ್ರೀ ಸಿದ್ದಲಿಂಗ ಮಾಹಾ ಸ್ವಾಮೀಜಿ ಅವರ ಆಶೀರ್ವಾದಗಳೊಂದಿಗೆ ನಗರದ ಶ್ರೀ ಸಿದ್ಧಗಂಗಾ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ʼದುಡಿಯುವ ಕೈಗಳಿಗೆ ಉದ್ಯೋಗ ಮೇಳʼವನ್ನು ಭಾನುವಾರ ಆಯೋಜಿಸಲಾಗಿತ್ತು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ನಿರುದ್ಯೋಗಿ ಯುವಕ, ಯುವತಿಯರು ಉದ್ಯೋಗಾವಕಾಶ ಪಡೆದರು.
ಉದ್ಯೋಗ ಮೇಳವನ್ನು ಸಿದ್ಧಗಂಗಾಮಠದ ಸಿದ್ದಲಿಂಗ ಸ್ವಾಮೀಜಿ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಐಎಎಸ್ ಅಧಿಕಾರಿ ಡಾ.ಎಂ.ಕೆ. ಶಂಕರಲಿಂಗೇಗೌಡ, ಕಾರ್ಮಿಕ ಆಯುಕ್ತ ಡಾ. ಎಚ್.ಎನ್. ಗೋಪಾಲಕೃಷ್ಣ, ಇನ್‌ಸ್ಟಿಟ್ಯೂಟ್ ಆಫ್ ಯೂರಾಲಜಿ ಸಂಸ್ಥಾಪಕ ಡಾ.ಜಿ.ಕೆ. ವೆಂಕಟೇಶ್, ಸ್ವಿಂಡನ್ ಬರೋ ಕೌನ್ಸಿಲ್ ಮೆಂಬರ್ ಸುರೇಶ್ ಗಟ್ಟಾಪುರ, ಅಮೆರಿಕದ ರಾಬಿನ್ಸ್‌ವಿಲ್ಲೆ ಕೌನ್ಸಿಲರ್ ಕಿರನ್ ಅಗ್ರಹಾರ, ಒಕ್ಕಲಿಗ ಯುವ ಬ್ರಿಗೇಡ್ ಹಾಗೂ ಎನ್‌ಆರ್‌ಐ ಒಕ್ಕಲಿಗ ಬ್ರಿಗೇಡ್ ಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ಭಾಗವಹಿಸಿದ್ದರು.
ಎಸ್‌ಎಸ್‌ಎಲ್‌ಸಿ , ಪಿಯುಸಿ ಅಥವಾ ಯಾವುದೇ ಪದವಿಯಲ್ಲಿ ಪಾಸ್ ಅಥವಾ ಫೇಲ್ ಆದವರು, ಐಟಿಐ, ಡಿಪ್ಲೊಮಾ, ಎಂಜಿನಿಯರಿಂಗ್, ಸ್ನಾತಕೋತ್ತರ ಪದವಿ, ಎನ್‌ಟಿಟಿ / ಟಿಸಿಎಚ್ / ಬಿ.ಎಡ್. / ಎಂ.ಎಡಿ ವಿದ್ಯಾರ್ಹತೆ ಹೊಂದಿದರವರಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು.
ಡಾಮಿನೋಸ್, ರಾಣೆ ಇಂಜಿನ್ ಪ್ರೈವೆಟ್ ಲಿಮಿಟೆಡ್, 24X7 ಕಾರ್ಸ್ ಪ್ರೈವೆಟ್ ಲಿಮಿಟೆಡ್, ರುಚಾ ಎಂಜಿನಿಯರಿಂಗ್ ಪ್ರೈವೆಟ್ ಲಿಮಿಟೆಡ್, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೆಟ್ ಲಿಮಿಟೆಡ್, ಟಿಎಂಐ ಗ್ರೂಪ್, ಮೆಡಿಪ್ಲಸ್, ಮೈನಿ ಉತ್ಪನ್ನಗಳು, ಅಪೋಲೋ ಫಾರ್ಮಸಿ, ಸೊಡೆಕ್ಸೊ ಇಂಡಿಯಾ ಲಿಮಿಟೆಡ್, ನವಭಾರತ್ ಫರ್ಟಿಲೈಸರ್ಸ್ ಪ್ರೈವೆಟ್ ಲಿಮಿಟೆಡ್ಸೇ ರಿ ಸುಮಾರು 50 ಕಂಪನಿಗಳು ಮೇಳದಲ್ಲಿ ಭಾಗವಹಿಸಿದ್ದವು.
ಇದನ್ನೂ ಓದಿ | Job Alert: ಗುಡ್ ನ್ಯೂಸ್!: ಸದ್ಯವೇ 1,000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇಮಕ
ಮೇಳದಲ್ಲಿ ಭಾಗವಹಿಸಿದ್ದ ಸಾವಿರಾರು ನಿರುದ್ಯೋಗಿ ಯುವಕ, ಯುವತಿಯರು ಹೌಸ್ ಕೀಪಿಂಗ್ / ಸೇಲ್ಸ್ ಬಾಯ್ / ಆಫೀಸ್ ಅಸಿಸ್ಟೆಂಟ್, ಡ್ರೈವರ್ / ಡೆಲಿವರಿ ಬಾಯ್, ಸೆಕ್ಯುರಿಟಿ ಸರ್ವಿಸಸ್, ಡಿಟಿಪಿ, ಸಾಫ್ಟ್‌ವೇರ್ / ಹಾರ್ಡ್‌ವೇರ್, ಟೀಚಿಂಗ್ / ಟ್ರೈನಿಂಗ್, ಕೌಂಟರ್ ಸೇಲ್ಸ್ / ಮಾರ್ಕೆಟಿಂಗ್ / ಟೆಲಿ ಮಾರ್ಕೆಟಿಂಗ್ ಮತ್ತಿತರ ಉದ್ಯೋಗ ಪಡೆಯಲು ಉದ್ಯೋಗ ಮೇಳದಿಂದ ಅನುಕೂಲವಾಯಿತು.