Site icon Vistara News

Karnataka Election : ಕಾಂಗ್ರೆಸ್‌ ಅಭ್ಯರ್ಥಿ ಪರ ಸರ್ಕಾರಿ ನೌಕರನಿಂದ ಪ್ರಚಾರ; ದೂರು ದಾಖಲು

#image_title

ಪಾವಗಡ: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ನೀತಿ ಸಹಿತೆ ಜಾರಿಯಲ್ಲಿದೆ. ಹೀಗಿರುವಾಗ ಪಾವಗಡದಲ್ಲಿ ಸರ್ಕಾರಿ ನೌಕರರೊಬ್ಬರು ಕಾಂಗ್ರೆಸ್‌ ಅಭ್ಯರ್ಥಿಯ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಜೆಡಿಎಸ್‌ ಮುಖಂಡರು ಚುನಾವಣಾ (Karnataka Election) ಅಧಿಕಾರಿಗಳಲ್ಲಿ ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಮಾಹಿತಿ ಕೊಟ್ಟಿರುವ ಜೆಡಿಎಸ್‌ ಮುಖಂಡ ಬಿ.ಹೊಸಹಳ್ಳಿ ಗ್ರಾಮದ ಮಲ್ಲಿಕಾರ್ಜುನ್‌, “ಎ.ಎಸ್.ಯೋಗೀಶ್ ಅವರು ತಾಲೂಕಿನ ವೈ.ಎನ್.ಹೊಸಕೋಟೆ ಗ್ರಾಮದ ಪ್ರಿಯದರ್ಶಿನಿ ಅನುದಾನ ರಹಿತ ಶಾಲೆಯಲ್ಲಿ ದ್ವೀತಿಯ ದರ್ಜೆ ಗುಮಾಸ್ತನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಏಪ್ರಿಲ್‌ 27ರಂದು ಪಾವಗಡ ಪಟ್ಟಣದ ಕಣಿವೆ ನರಸಿಂಹ ಸ್ವಾಮಿ ದೇವಾಲಯ ಬಳಿ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಭಾಗವಹಿಸಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್ ಪರ ಮತ ಯಾಚಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯ ಪ್ರತಿಸ್ಪರ್ಧಿಯಾಗಿರುವ ಜೆಡಿಎಸ್‌ನ ಅಭ್ಯರ್ಥಿ ಕೆ.ಎಂ.ತಿಮ್ಮಾರಾಯಪ್ಪ ಬಗ್ಗೆ ಅವಹೇಳನಕಾರಿಯಾಗಿ ಮತ್ತು ಅಸಭ್ಯವಾಗಿ ಮಾತನಾಡಿದ್ದಾರೆ” ಎಂದು ದೂರಿದ್ದಾರೆ.

ಇದನ್ನೂ ಓದಿ: Karnataka Election 2023: ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ದಾಂಧಲೆ
“ಯೋಗೀಶ್‌ ಸರ್ಕಾರಿ ನೌಕರರಾಗಿ ಚುನಾವಣಾ ನಿಯಮಗಳನ್ನು ಗಾಳಿಗೆ ತೂರಿ ರಾಜಕೀಯ ಪ್ರಚಾರದಲ್ಲಿ ತೊಡಗಿದ್ದಾರೆ. ಅವರ ವಿರುದ್ಧ ಈಗಾಗಲೇ ಹಲವು ಪ್ರಕರಣಗಳಿವೆ. ಹಾಗಾಗಿ ಮೊದಲು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಬೇಕು” ಎಂದು ಒತ್ತಾಯಿಸಿದರು.

ಈ ವೇಳೆ ದಲಿತ ಮುಖಂಡರಾದ ಮಲ್ಲಿಕಾರ್ಜುನ ಬಿ.ಹೊಸಹಳ್ಳಿ ಅವರ ಜತೆಯಲ್ಲಿ ರಾಮಾಂಜಪ್ಪ ಭೀಮನಕುಂಟೆ, ಚನ್ನಕೇಶ ಜಾಲೋಡು, ಅಚ್ಚಮ್ಮನಹಳ್ಳಿ, ಪೃಥ್ವಿ ತಿಪ್ಪಯ್ಯನದುರ್ಗ, ರಾಮಾಂಜಿ ವೈ.ಎನ್.ಹೊಸಕೋಟೆ, ಗೋಪಾಲ ಇಂದ್ರಬೆಟ್ಟ, ನಾರಾಯಣಪ್ಪ ತಿಪ್ಪಗಾನಹಳ್ಳಿ, ನಾರಾಯಣಪ್ಪ, ಲೋಕೇಶ, ರವಿ ದೊಡ್ಡಹಳ್ಳಿ ಸೇರಿ ಅನೇಕ ಮುಖಂಡರಿದ್ದರು.

Exit mobile version