Site icon Vistara News

Karnataka Election: ಪಾವಗಡದಲ್ಲಿ ಜೆಡಿಎಸ್‌ ಭಾರಿ ಪ್ರಚಾರ; ಹಳ್ಳಿ ಹಳ್ಳಿಗಳಲ್ಲಿ ರೋಡ್‌ ಶೋ

Pavagada Assembly Constituency candidate K M Thimmarayappa

K M Thimmarayappa

ಪಾವಗಡ: ತುಮಕೂರಿನ ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ (Pavagada Assembly Constituency) ಚುನಾವಣೆಯ (Karnataka Election) ರಂಗೇರಿದ್ದು, ಎಲ್ಲ ಪಕ್ಷಗಳು ಭರದಿಂದ ಪ್ರಚಾರ ನಡೆಸಲಾರಂಭಿಸಿವೆ. ಜೆಡಿಎಸ್‌ ಪಕ್ಷದ ಅಭ್ಯರ್ಥಿ ಕೆ.ಎಂ.ತಿಮ್ಮರಾಯಪ್ಪ (K M Thimmarayappa) ಕೂಡ ಪ್ರಚಾರ ನಡೆಸುತ್ತಿದ್ದು, ಮಂಗಳವಾರ ತಾಲೂಕಿನ ವೆಂಕಟಮ್ಮನಹಳ್ಳಿ, ಕ್ಯಾತಗಾನಚರ್ಲು, ವಳ್ಳೂರು, ಅನ್ನದಾನಪುರ, ರಾಯಚರ್ಲು, ತಿರುಮಣಿ, ಬಳಸಮುದ್ರ ಗ್ರಾಮಗಳಲ್ಲಿ ರೋಡ್‌ ಶೋ ನಡೆಸಿದ್ದಾರೆ.

ರೋಡ್‌ ಶೋನಲ್ಲಿ ಭಾಗವಹಿಸಿ ಮಾತನಾಡಿದ ತಿಮ್ಮರಾಯಪ್ಪ ಅವರು, “ಪಾವಗಡ ಅಂದು ನಕ್ಸಲ್‌ ನಗರ ಎಂದು ಹೆಸರಾಗಿತ್ತು. ಆದರೆ, ಇಂದು ಸೋಲಾರ್‌ಗೆ ಹೆಸರುವಾಸಿಯಾಗಿದೆ. ಇಲ್ಲಿಗೆ ಸೋಲಾರ್‌ ಬಂದಿದ್ದು, ನನ್ನ ಅಧಿಕಾರದ ಅವಧಿಯಲ್ಲಾಗಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಅವಧಿಯಲ್ಲಿ ಅತಿ ಹೆಚ್ಚು ಸಾಲಮನ್ನಾ ಪ್ರಯೋಜನ ಪಡೆದುಕೊಂಡಿರುವ ರೈತರು ಈ ಭಾಗದಲ್ಲಿ ಇದ್ದಾರೆ. ಜೆಡಿಎಸ್‌ನ ಪಂಚರತ್ನ ಯೋಜನೆಗಳನ್ನು ಮೆಚ್ಚಿ ಪಕ್ಷಕ್ಕೆ ರೈತರು, ಸಾಮಾನ್ಯ ಜನರು ಸೇರ್ಪಡೆಯಾಗುತ್ತಿದ್ದಾರೆ” ಎಂದು ಹೇಳಿದ್ದಾರೆ.

Pavagada Assembly Constituency

ಈ ಭಾಗದಲ್ಲಿ ರೈತರಿಗೆ ಬೆಳಗ್ಗಿನ ಹೊತ್ತು 12 ಗಂಟೆಗಳ ಕಾಲ ವಿದ್ಯುತ್‌ ನೀಡುತ್ತಿಲ್ಲ ಎನ್ನುವ ದೂರಿನ ಕುರಿತಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಇದರ ಬಗ್ಗೆ ಈಗಾಗಲೇ ನಮ್ಮ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಚರ್ಚೆ ಮಾಡಿದ್ದಾರೆ. ನಮ್ಮ ಸರ್ಕಾರ ಬಂದ ತಕ್ಷಣವೇ ರೈತರ ವಿದ್ಯುತ್ ಪೂರೈಕೆ ಸಮಸ್ಯೆ ಹೋಗಲಾಡಿಸಲು ಮುಂದಾಗುತ್ತೇವೆ” ಎಂದು ಹೇಳಿದರು.

ಇದನ್ನೂ ಓದಿ: Karnataka election 2023: ಮುಸ್ಲಿಮರ ಮೀಸಲಾತಿ ರದ್ದು ಆದೇಶಕ್ಕೆ ಸುಪ್ರೀಂ ತಡೆ; ನ್ಯಾಯಾಲಯದ ಮೇಲೆ ವಿಶ್ವಾಸವಿದೆ: ಸಚಿವ ಕೃಷ್ಣನ್ ಪಾಲ್ ಗುರ್ಜರ್‌

“ಕಾಂಗ್ರೆಸ್‌ನ ಸಾಕಷ್ಟು ಮುಖಂಡರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ಅಲ್ಲಿನ ಕಾರ್ಯ ವೈಫಲ್ಯ ನೋಡಿ ಬೇಸತ್ತು ಸ್ವತಃ ಅವರೇ ಪಕ್ಷ ತೊರೆದು ನಮ್ಮತ್ತ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ನಮ್ಮ ಪಕ್ಷ ಸೇರಲಿದ್ದಾರೆ” ಎಂದು ಹೇಳಿದರು.

pavagada

ಈ ವೇಳೆ ಮುಖಂಡರಾದ ಅಂಜನ್ ಕುಮಾರ್, ಮಾಜಿ ಚಿಲ್ಲಾ ಪಂಚಾಯತ್ ಸದಸ್ಯ ಚನ್ನಮಲ್ಲಪ್ಪ, ಬಲರಾಮರೆಡ್ಡಿ, ವಿ.ಎಸ್.ಎಸ್.ಎನ್.ನಾರಾಯಣ್ ಮೂರ್ತಿ (ನಾನಿ), ಮಾಜಿ ತಾ.ಪಂ. ಅಧ್ಯಕ್ಷ ಸೊಗಡು ವೆಂಕಟೇಶ್, ಚಲ್ಲಚಿಮಲ ಸಿನಾ, ಶಾಂತಿ ಮೆಡಿಕಲ್ ದೇವರಾಜ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನರಸಿಂಹ, ಎನ್.ಎ.ಈರಣ್ಣ, ವಳ್ಳೂರು ಹನಮಂತರೆಡ್ಡಿ, ರಾಮಮೂರ್ತಿ, ಎಸ್.ಟಿ.ನಾರಾಯಣ್, ಜೆಡಿಎಸ್ ಕಾರ್ಯದರ್ಶಿ ನರಸಿಂಹ ಮೂರ್ತಿ, ಭರತ್, ನಲ್ಲಪ್ಪ, ನಾಗರಾಜ್, ವೆಂಕಟರಾಮ್, ಈರಯ್ಯ, ಪೆದ್ದನ್ನ, ನಾರಾಯಣ್, ಡಿ.ನಾರಾಯಣಪ್ಪ. ಚೌಡಪ್ಪ, ವೆಂಕಟ್ ನಾಯ್ಡು ಮತ್ತಿತರರಿದ್ದರು.

Exit mobile version