Site icon Vistara News

Karnataka Election : ಮತ್ತೆ ಆಡಳಿತಕ್ಕೆ ಬರಲಿದೆ ಡಬಲ್‌ ಎಂಜಿನ್‌ ಸರ್ಕಾರ; ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿಶ್ವಾಸ

#image_title

ಕುಣಿಗಲ್‌: ದೇಶದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಹಾಗೂ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿಶ್ವಾಸ (Karnataka Election) ವ್ಯಕ್ತಪಡಿಸಿದ್ದಾರೆ.

ಕುಣಿಗಲ್ ಪಟ್ಟಣದಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ಡಿ.ಕೃಷ್ಣಕುಮಾರ್ ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾಗಿದ್ದ ವೇಳೆ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಮಾತನಾಡಿದ್ದಾರೆ. ಮೂರು ಬಾರಿ ಸೋತಿರುವ ಡಿ.ಕೃಷ್ಣಕುಮಾರ್ ಅವರನ್ನು ಈ ಬಾರಿ ಕೈ ಬಿಡಬೇಡಿ ಎಂದು ಬೆಂಬಲಿಗರಲ್ಲಿ ಮನವಿ ಮಾಡಿದ ಅವರು, ಕುಣಿಗಲ್ ಕ್ಷೇತ್ರದ ಜನರ ಧ್ವನಿಯಾಗಿ ವಿಧಾನ ಸಭೆಯಲ್ಲಿ ಕೆಲಸ ಮಾಡಲು ಹಾಗು ಅಭಿವೃದ್ದಿ ಕಾರ್ಯಗಳನ್ನು ಮನೆ ಮನೆಗೆ ತಲುಪಿಸಲು ಈ ಬಾರಿ ಡಿ.ಕೃಷ್ಣಕುಮಾರ್ ಬೆಂಬಲಿಸಿ ಎಂದು ಕೋರಿದರು.

ಕುಣಿಗಲ್ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳಿಗೆ ವೇಗ ಸಿಗಬೇಕಾದರೆ ಭಾರತಿಯ ಜನತಾ ಪಾರ್ಟಿಯ ಅಭ್ಯರ್ಥಿ ಡಿ.ಕೃಷ್ಣಕುಮಾರ್ ಅವರು ಶಾಸಕರಾಗಬೇಕು. ಅದಕ್ಕೆ ನೀವು ಅವರಿಗೆ ಮತ ಹಾಕಿ ಗೆಲ್ಲಿಸಬೇಕು ಎಂದು ಸಚಿವೆ ಹೇಳಿದರು.

ಇದನ್ನೂ ಓದಿ: Karnataka Elections 2023 : ಸಿದ್ದರಾಮಯ್ಯ ಮುಸ್ಲಿಮರ ನಾಯಕ, ಡಿಕೆಶಿ ಕ್ರಿಮಿನಲ್‌ಗಳ ನೇತಾರ ಎಂದ ಶೋಭಾ ಕರಂದ್ಲಾಜೆ

ಕೃಷ್ಣಕುಮಾರ್‌ ಅವರು ಕುಣಿಗಲ್ ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದಿಂದ ಸಾವಿರಾರು ಬೆಂಬಲಿಗರೊಡನೆ ರೋಡ್ ಶೋ ನಡೆಸಿ, ಪಟ್ಟಣದ ತಾಲ್ಲೂಕು ಕಚೆರಿಯಲ್ಲಿರುವ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ವೇಳೆ ವಿಧಾನ ಪರಿಷತ್ತು ಸದಸ್ಯ ವೈ.ಎ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಕೃಷ್ಣಕುಮಾರ್ ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ ದರ್ಶನ್ ಭಾಗಿಯಾಗಿದ್ದರು.

ಇದೇ ವೇಳೆ ಲಿಂಗಾಯಿತ ಅಸ್ತ್ರದ ಬಗ್ಗೆ ಪತ್ರಕರ್ತರು ಶೋಭಾ ಕರಂದ್ಲಾಜೆ ಅವರನ್ನು ಪ್ರಶ್ನಿಸಿದಾಗ, “ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿ ಬಿಜೆಪಿ ಪಕ್ಷದಲ್ಲಿದ್ದರೆ ಸ್ಟಾರ್ ಪ್ರಚಾರಕರು. ಆದರೆ ಕಾಂಗ್ರೆಸ್‌ ಸ್ಟಾರ್ ಪ್ರಚಾರಕರು ಇಮ್ರಾನ್ ಅತೀಕ್ ಅಹ್ಮದ್ ಜತೆ ಗುರುತಿಸಿಕೊಂಡಿದ್ದ ಇಮ್ರಾನ್. ಜಾತಿಯ ಹೇಸರು ಹೇಳಿಕೊಂಡು ಜಗದೀಶ್ ಶೆಟ್ಟರ್‌ರನ್ನು ಕಾಂಗ್ರೆಸ್‌ಗೆ ಕರೆದುಕೊಂಡು ಹೊಗಿದ್ದಾರೆ. ಆದರೆ ಅವರೇನು ಮುಖ್ಯಮಂತ್ರಿ ಅಭ್ಯರ್ಥಿಯಾ? ಜಾತಿಯ ಹೆಸರಲ್ಲಿ ಗೆಲ್ಲಬಹುದು ಎಂದು ಕಾಂಗ್ರೆಸ್‌ನವರು ತಿಳಿದಿದ್ದಾರೆ. ಆದರೆ ವೀರಶೈವ ಲಿಂಗಾಯತ ಸಮುದಾಯವನ್ನು ಹೊಡೆದಿದ್ದು ಇದೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಾರ್ಟಿ. ಇದೇ ಷಡ್ಯಂತ್ರವನ್ನು ಮತ್ತೊಮ್ಮೆ ಮಾಡಲು ಕಾಂಗ್ರೆಸ್ ಹೊರಟಿದೆ” ಎಂದು ದೂರಿದರು.

Exit mobile version