ಕೊರಟಗೆರೆ: ವೀರಶೈವ ಸಮುದಾಯದವರಿಗೆ ಆಚಾರ, ವಿಚಾರ, ಸಂಪ್ರದಾಯ ಮತ್ತು ಪರಂಪರೆಗಳ ಮಹತ್ವದ ಬಗ್ಗೆ ಪ್ರಜ್ಞೆ ಮೂಡಿಸಿ, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಧ್ಯೇಯದಿಂದ ಹಾನಗಲ್ ಕುಮಾರಸ್ವಾಮಿರವರು 1902ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾವನ್ನು ಸ್ಥಾಪಿಸಿದರು ಎಂದು ಶ್ರೀ ಕ್ಷೇತ್ರ ಸಿದ್ದರಬೆಟ್ಟ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ (Koratagere News) ತಿಳಿಸಿದರು.
ಪಟ್ಟಣದ ಕನ್ನಿಕಾ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದಿಂದ ಘಟಕದ ನೂತನ ಅಧ್ಯಕ್ಷ ಹಾಗೂ ನಿರ್ದೇಶಕರ ಪದಗ್ರಹಣ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ವೀರಶೈವ ಮಹಾಸಭಾ ರಾಜ್ಯದಲ್ಲಿ ಧಾರ್ಮಿಕ ನೆಲಗಟ್ಟನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕತೆಯ ಆಧುನಿಕ ತಂತ್ರಜ್ಞಾನದ ಜಗತ್ತಿನಲ್ಲಿ ಯುವ ಪೀಳಿಗೆಯಲ್ಲಿ ಸಂಸ್ಕಾರ, ಸಂಸ್ಕೃತಿ ಹಾಗೂ ಗುರು ಹಿರಿಯರಲ್ಲಿ ಗೌರವ ಭಾವನೆ ಕಡಿಮೆಯಾಗುತ್ತಿದೆ. ಧಾರ್ಮಿಕ ಕಾರ್ಯವನ್ನೇ ಮರೆಯುತ್ತಿದ್ದಾರೆ. ವೀರಶೈವ ಮಹಾಸಭಾ ಇಂತಹ ಸಂಪ್ರದಾಯಗಳ ಅರಿವು ಮೂಡಿಸಬೇಕು. ಮೊದಲು ತಾಲೂಕಿನಲ್ಲಿ ವಿದ್ಯಾರ್ಥಿಗಳಿಗೆ ವಸತಿ ನಿಲಯ ಹಾಗೂ ಸಮುದಾಯ ಭವನ ಕಟ್ಟಬೇಕು. ತಾಲೂಕಿನಲ್ಲಿ ಕುಂಠಿತವಾಗಿರುವ ವೀರಶೈವ ಬಂಧು ಪತ್ತಿನ ಸಹಕಾರ ಬ್ಯಾಂಕ್ ಪುನಶ್ಚೇತನ ಗೊಳಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ: Union Budget 2024: ಹೊಸ ತೆರಿಗೆ ಸ್ಲ್ಯಾಬ್‌ನಿಂದ 17,500 ರೂ. ತೆರಿಗೆ ಉಳಿತಾಯ ಹೇಗೆ? ಇಲ್ಲಿದೆ ಮಾಹಿತಿ
ಜಿಲ್ಲಾ ಘಟಕದ ನೂತನ ಅಧ್ಯಕ್ಷ ಡಾ. ಪರಮೇಶ್ ಮಾತನಾಡಿ, ಜಿಲ್ಲೆಯಲ್ಲಿ ಸಂಘಗಳನ್ನು ಶಕ್ತಿಯುತಗೊಳಿಸಲು ಶ್ರಮಿಸಲಾಗುವುದು. ತಾಲೂಕಿನಲ್ಲಿ ನಿರ್ಮಿಸುವ ಸಮುದಾಯ ಭವನಕ್ಕೆ ಒಂದು ಲಕ್ಷ ದೇಣಿಗೆ ನೀಡುವುದಾಗಿ ತಿಳಿಸಿದರು.
ತಾಲೂಕು ನೂತನ ಅಧ್ಯಕ್ಷ ಪಿ.ಎ. ವೀರಭದ್ರಯ್ಯ ಮಾತನಾಡಿ ವೀರಶೈವ ಸಮುದಾಯದ ಅಭಿವೃದ್ಧಿಗೆ ಸಂಘದ ಪ್ರತಿಯೊಬ್ಬರು ಅಧ್ಯಕ್ಷರೆಂದು ಭಾವಿಸಬೇಕು .ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ತಾಲೂಕಿನಲ್ಲಿ ನೂತನವಾಗಿ ನಿರ್ಮಿಸುವ ಸಮುದಾಯ ಭವನಕ್ಕೆ 5 ಲಕ್ಷ ದೇಣಿಗೆಯನ್ನು ನೀಡುವುದಾಗಿ ಘೋಷಿಸಿದರು.
ಇದೇ ವೇಳೆ ನಿರ್ದೇಶಕರುಗಳಾದ ಈಶ ಪ್ರಸಾದ್, ಜಿಎಂ ಶಿವಾನಂದ್, ಉಮಾಶಂಕರಾಧ್ಯ, ಚನ್ನಬಸವರಾದ್ಯ, ಚನ್ನಂಜ್ಜಯ್ಯ, ಎಸ್.ಎಸ್. ಪವನ್ ಕುಮಾರ್, ಜ್ಯೋತಿ ಪ್ರಕಾಶ್, ಪುಟ್ಟರಾಜು, ಪಾಲನೇತ್ರಯ್ಯ, ವಿನಯ್ ಕುಮಾರ್, ಶಿವಕುಮಾರ್, ಕಿರಣ್ ಕುಮಾರ್, ಚಿದಾನಂದ, ಪುಷ್ಪಲತಾ, ಭಾರತಿ, ಶುಭ, ಶಕುಂತಲಾ, ಶಾಂತಮ್ಮ ಅವರನ್ನು ಗೌರವಿಸಲಾಯಿತು.
ಇದನ್ನೂ ಓದಿ: Karnataka Rain : ಹಾವೇರಿಯಲ್ಲಿ ಮಳೆಯಾರ್ಭಟಕ್ಕೆ ಮರ ಬಿದ್ದು ಬಲಿಯಾದ ಹಸು; ಮಹಾರಾಷ್ಟ್ರ- ಕರ್ನಾಟಕ ಸಂಪರ್ಕ ಸೇತುವೆ ಬಂದ್
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಬಿಜೆಪಿ ತಾಲೂಕು ಅಧ್ಯಕ್ಷ ದರ್ಶನ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ರುದ್ರೇಶ್, ಮುಖಂಡರುಗಳಾದ ಎಲ್ ರಾಜಣ್ಣ, ಪರ್ವತಯ್ಯ, ಆರ್.ಎಸ್ ರಾಜಣ್ಣ, ಮಂಜುಳಾ , ಶಂಭುಲಿಂಗರಾಧ್ಯ, ದ್ರಾಕ್ಷಾಯಿಣಿ, ಮಮತಾ, ತೀತಾ ಮಂಜುನಾಥ್, ಕೆ.ಬಿ ಲೋಕೇಶ್, ಆರ್.ಆರ್. ರಾಜಣ್ಣ, ಕೆ.ಎಂ ಸುರೇಶ್, ಮಲ್ಲಣ್ಣ, ಕಾಳಪ್ಪ, ತ್ರಿಯಂಭಕಾರಾಧ್ಯ ಸೇರಿದಂತೆ ಇತರರು ಇದ್ದರು.