Site icon Vistara News

Koratagere News: ಕೊರಟಗೆರೆ ತಾಲೂಕಿನಲ್ಲಿ ಬಿತ್ತನೆ ಬೀಜಕ್ಕೆ ಕೊರತೆ ಇಲ್ಲ: ಸಹಾಯಕ ಕೃಷಿ ನಿರ್ದೇಶಕ ರುದ್ರಪ್ಪ

There is no shortage of seed for sowing in Koratagere taluk says M R Rudrappa

ಕೊರಟಗೆರೆ: 2024-25 ನೇ ಸಾಲಿನಲ್ಲಿ ಕೊರಟಗೆರೆ ತಾಲೂಕಿನ (Koratagere News) ವಾರ್ಷಿಕ ಮಳೆಯು (Rain) ಒಟ್ಟು 637.5 ಮಿ.ಮೀ. ಇದೆ ಆದರೆ ಮೇ 2024ರವರೆಗೆ ವಾಡಿಕೆ ಮಳೆಯು 78.5 ಮಿ.ಮೀ. ಇದ್ದು, ಇಲ್ಲಿಯವರೆಗೂ 121.8 ಮಿ.ಮೀ ರಷ್ಟು ಮಳೆಯಾಗಿದೆ ಎಂದು ಕೊರಟಗೆರೆ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಎಂ.ಆರ್. ರುದ್ರಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ: PSI Exam: ಪಿಎಸ್‌ಐ ಸೇರಿ 4 ಸಾವಿರ ಹುದ್ದೆಗಳ ನೇಮಕಾತಿಗೆ ಪರೀಕ್ಷಾ ದಿನಾಂಕ ಅನೌನ್ಸ್‌; ಯಾವ ದಿನಕ್ಕೆ ಯಾವ ಪರೀಕ್ಷೆ?

ಕೊರಟಗೆರೆ ತಾಲೂಕಿನಲ್ಲಿ ಮುಂಗಾರು ಕೃಷಿ ಬೆಳೆಗಳ ಒಟ್ಟು ವಿಸ್ತೀರ್ಣ 32553 ಹೆಕ್ಟೇರ್ ಗುರಿ ಇದ್ದು, ಬಿತ್ತನೆ ಕಾರ್ಯಕ್ಕೆ ಸಿದ್ಧತೆ ನಡೆಯುತ್ತಿದೆ. ಕೃಷಿ ಇಲಾಖೆ ಕೊರಟಗೆರೆ ವ್ಯಾಪ್ತಿಯ 4 ರೈತ ಸಂಪರ್ಕ ಕೇಂದ್ರಗಳಲ್ಲಿ ಮುಂಗಾರು ಬೆಳೆಗಳಾದ ರಾಗಿ ( ಎಂ.ಆರ್. 6), ಭತ್ತ (ತೆಲ್ಲ ಹಂಸ), ಮುಸುಕಿನ ಜೋಳ (ಹೈಬ್ರೀಡ್), ಅಲಸಂದೆ (ಡಿಸಿ-15), ತೊಗರಿ (ಬಿ.ಆರ್.ಜಿ.-3 ಮತ್ತು ಬಿ.ಆರ್.ಜಿ-5) ಹಾಗೂ ಶೇಂಗಾ (ಕೆ-6) ಪ್ರಮಾಣಿತ ಬಿತ್ತನೆ ಬೀಜಗಳ ಒಟ್ಟು 367.4 ಕ್ವಿಂಟಾಲ್ ದಾಸ್ತಾನಿದ್ದು, ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದ್ದು ಬಿತ್ತನೆ ಬೀಜಕ್ಕೆ ಯಾವುದೇ ಕೊರತೆ ಇಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Gold Rate Today: ಚಿನ್ನದ ದರ ಇಂದು ಯಥಾಸ್ಥಿತಿ; 22K- 24K ಬಂಗಾರದ ದರಗಳು ಹೀಗಿವೆ

ತಾಲೂಕಿನ ವ್ಯಾಪ್ತಿಯಲ್ಲಿರುವ ರಸಗೊಬ್ಬರ ಮಳಿಗೆಗಳು ಹಾಗೂ ಪ್ರಾಥಮಿಕ ಕೃಷಿ ಸಹಕಾರ ಸಂಘಗಳಲ್ಲಿ ರಸ ಗೊಬ್ಬರಗಳಾದ ಯೂರಿಯಾ-1042.5 ಮೆ. ಟನ್, ಡಿ.ಎ.ಪಿ-387.95 ಮೆ.ಟನ್, ಎಂ.ಒ.ಪಿ – 11.1 ಮೆ. ಟನ್, ಎನ್.ಪಿ.ಕೆ ಕಾಂಪ್ಲೆಕ್ಸ್ ಗೊಬ್ಬರಗಳು 826.38 ಮೆ. ಟನ್ ಹಾಗೂ ಇತರೆ ಗೊಬ್ಬರ 3.6 ಮೆ. ಟನ್ ಒಟ್ಟು ರಸಗೊಬ್ಬರ 2263.5 ಮೆ. ಟನ್ ದಾಸ್ತಾನಿದ್ದು, ಪ್ರಸಕ್ತ ಹಂಗಾಮಿಗೆ ಯಾವುದೇ ರಸಗೊಬ್ಬರದ ಕೊರತೆ ಇರುವುದಿಲ್ಲ. ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬಿತ್ತನೆ ಬೀಜ ಮತ್ತು ಬೆಳೆಗಳ ಬಗ್ಗೆ ತಾಂತ್ರಿಕ ಮಾಹಿತಿಯನ್ನು ಪಡೆಯಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version