ತುಮಕೂರು: ಕುಣಿಗಲ್ ಶಾಸಕರು (Kunigal MLA) ಮತ್ತೊಮ್ಮೆ ಬಡ ವ್ಯಕ್ತಿಗೆ ಉಚಿತ ಆಪರೇಷನ್ ಮಾಡಿ ಮನ ಗೆದ್ದಿದ್ದಾರೆ. ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದ ವ್ಯಕ್ತಿಗೆ ಶಾಸಕ ಡಾ.ರಂಗನಾಥ್ (Kunigal MLA Dr. Ranganath) ಅವರು ಉಚಿತವಾಗಿ ಶಸ್ತ್ರಚಿಕಿತ್ಸೆ (free surgery) ಮಾಡಿ ಕಳಿಸಿಕೊಟ್ಟಿದ್ದಾರೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಯಡವಾಣಿ ಗ್ರಾಮದ ಶಿವನಂಜಯ್ಯ ಎಂಬವರು ಹಲವಾರು ದಿನಗಳಿಂದ ಮಂಡಿ ನೋವಿನಿಂದ ಬಳಲುತ್ತಿದ್ದರು. ಆದರೆ ಅವರ ಬಳಿ ಚಿಕಿತ್ಸೆಗೆ ಹಣವಿರಲಿಲ್ಲ. ಹೀಗಾಗಿ ಚಿಕಿತ್ಸೆಗೆ ಸಹಾಯ ಮಾಡುವಂತೆ ಕೋರಿ ಶಾಸಕರ ಬಳಿ ಹೋಗಿದ್ದರು. ಡಾ.ರಂಗನಾಥ್ ಮೂಲತಃ ಆರ್ಥೋಪೆಡಿಕ್ (orthopedician) ವೈದ್ಯರಾಗಿದ್ದಾರೆ.
ಬಡ ವ್ಯಕ್ತಿಯ ಮನವಿಗೆ ತಕ್ಷಣವೇ ಸ್ಪಂದಿಸಿದ ಶಾಸಕ ಡಾ. ರಂಗನಾಥ್, ತಾವೇ ಖುದ್ದು ಆಪರೇಷನ್ ಮಾಡಲು ಮುಂದಾದರು. ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ (Bowring Hospital) ಉಚಿತ ಮಂಡಿ ಶಸ್ತ್ರಚಿಕಿತ್ಸೆ (knee surgery) ನೆರವೇರಿಸಿಕೊಟ್ಟರು. ಈ ಹಿಂದೆಯೂ ಬಡ ಮಹಿಳೆಯೊಬ್ಬರಿಗೆ ಉಚಿತ ಶಸ್ತ್ರಚಿಕಿತ್ಸೆಯನ್ನು ರಂಗನಾಥ್ ಮಾಡಿಸಿದ್ದು ಸುದ್ದಿಯಾಗಿತ್ತು.
ರಂಗನಾಥ್‌ಗೆ ಗೃಹ ಸಚಿವರ ಅಭಿನಂದನೆ
ಉಚಿತವಾಗಿ ಆಪರೇಷನ್ ಮಾಡಿದ್ದ ಶಾಸಕ ಡಾ.ರಂಗನಾಥ್ ಅವರಿಗೆ ಕೆಡಿಪಿ ಸಭೆಯಲ್ಲಿ ಸಭೆಯ ನಡುವೆಯೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಭಿನಂದನೆ ಸಲ್ಲಿಸಿದ್ದಾರೆ. ಈ ಹಿಂದೆ ಬಡ ಮಹಿಳೆಗೆ ಸ್ವತಃ ತಾವೇ ಶಸ್ತ್ರ ಚಿಕಿತ್ಸೆ ಮಾಡಿ ಮಾನವೀಯತೆ ಮೆರೆದಿದ್ದರು ಅವರು.
ಕುಣಿಗಲ್ ತಾಲೂಕು ಕುಂದೂರು ತಾಲೂಕಿನ ಮಹಿಳೆ ಆಶಾ ಎಂಬವರ ಕೀಲು ಡಿಸ್‌ಲೋಕೇಟ್ ಆಗಿತ್ತು. ಶಸ್ತ್ರ ಚಿಕಿತ್ಸೆಗೆ 5-6 ಲಕ್ಷ ಖರ್ಚಾಗುತ್ತಿತ್ತು. ಈ ಬಗ್ಗೆ ಶಾಸಕರ ಬಳಿ ಬಂದು ಮಹಿಳೆ ನೋವು ತೋಡಿಕೊಂಡಿದ್ದರು. ಬಳಿಕ ಮಹಿಳೆಯನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಡಾ.ರಂಗನಾಥ್ ಶಸ್ತ್ರ ಚಿಕಿತ್ಸೆ ಮಾಡಿದ್ದರು.
ಇದನ್ನೂ ಓದಿ: Kunigal MLA: ಬಡ ಮಹಿಳೆಗೆ ತಾವೇ ಶಸ್ತ್ರಚಿಕಿತ್ಸೆ ಮಾಡಿ ಮಾನವೀಯತೆ ಮೆರೆದ ಶಾಸಕ ಡಾ. ರಂಗನಾಥ್