ಕೊರಟಗೆರೆ: ಒಂದು ವರ್ಷದಲ್ಲಿ ಕೊರಟಗೆರೆ, ಮಧುಗಿರಿ ಮಧ್ಯದಲ್ಲಿ ಕೇಂದ್ರೀಯ ವಿದ್ಯಾಲಯವನ್ನು ಸ್ಥಾಪನೆ ಮಾಡಲು ನನಗೆ ಈ ಬರಿ ಆಶೀರ್ವಾದ ಮಾಡಿ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಆಭ್ಯರ್ಥಿ ವಿ. ಸೋಮಣ್ಣ ಮನವಿ (Lok Sabha Election 2024) ಮಾಡಿದರು.
ತಾಲೂಕಿನ ಹೊಳವನಹಳ್ಳಿ ಹೋಬಳಿ ಕೇಂದ್ರದಲ್ಲಿ ಚುನಾವಣಾ ಪ್ರಚಾರ ಹಾಗೂ ರೋಡ್ ಶೋ ಸಂದರ್ಭದಲ್ಲಿ ಮತದಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸರಿಸಾಟಿ ಯಾರು ಇಲ್ಲ. ಮತ್ತೆ ತುಮಕೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: IPL 2024: ಸಿಕ್ಸರ್ ಮೂಲಕ ದಾಖಲೆ ಬರೆದ ಹಿಟ್ಮ್ಯಾನ್ ರೋಹಿತ್
ಬೆಂಗಳೂರಿನ ಗೋವಿಂದರಾಜ ನಗರದಂತೆ ತುಮಕೂರು ಜಿಲ್ಲೆಯ ಎಂಟು ತಾಲೂಕುಗಳನ್ನು ಅಭಿವೃದ್ಧಿ ಮಾಡಲು ಬಿಜೆಪಿ ಪಕ್ಷಕ್ಕೆ ಮತ ನೀಡಬೇಕು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಈ ರಾಷ್ಟ್ರಕ್ಕೆ ಮೂರನೇ ಬಾರಿ ನರೇಂದ್ರ ಮೋದಿಯವರು ಪ್ರಧಾನಿಯಾದರೆ ದೇಶ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಚುನಾವಣಾ ಪ್ರಚಾರ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಧ್ಯಕ್ಷ ನರಸಿಂಹರಾಜು, ಮಾಜಿ ಐಎಎಸ್ ಅಧಿಕಾರಿ, ಬಿಜೆಪಿ ಮುಖಂಡ ಅನಿಲ್‌ಕುಮಾರ್, ಮಾಜಿ ಶಾಸಕ ಪಿ.ಆರ್. ಸುಧಾಕರ್ ಲಾಲ್, ತಾಲೂಕು ಅಧ್ಯಕ್ಷ ಡಾ. ಕೆ.ಎಲ್. ದರ್ಶನ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶಿವಕುಮಾರ್, ಮಾಜಿ ಅಧ್ಯಕ್ಷ ಪವನಕುಮಾರ್, ಮುಖಂಡರಾದ ಕಾಮರಾಜು, ವೆಂಕಟಚಲಯ್ಯ, ಗುರುಧತ್, ಪ್ರಕಾಶ್, ಕುಸುಮ, ಸೀಬಿರಂಗಮ್ಮ, ಮರಡಪ್ಪ, ವೆಂಕಟೇಶ್, ವಿಶ್ವನಾಥ್, ಸಿದ್ದಮಲ್ಲಪ್ಪ, ವೀರಕ್ಯಾತರಾಯಪ್ಪ, ದಯಾನಂದ್, ಚೇತನ್, ಸಿದ್ದನಂಜಪ್ಪ, ಚಂದ್ರಮೋಹನ್, ಹನುಮಂತರಾಜು, ಗೋಪಿ, ಕಿಶೋರ್, ಮಂಜುನಾಥ್, ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ: Gold Rate Today: ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ; ಬೆಂಗಳೂರಿನಲ್ಲಿ ಇಂದು ಹೀಗಿದೆ ದರ
ವಿವಿಧೆಡೆ ಮತಯಾಚನೆ
ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಆಭ್ಯರ್ಥಿ ವಿ.ಸೋಮಣ್ಣ,ಕ್ಷೇತ್ರದ ಓಬಳಪುರ, ಬೆಳಧರ, ಗೊಲ್ಲಹಳ್ಳಿ, ಅಗ್ರಹಾರ, ಬುಕ್ಕಪಟ್ಟಣ, ಕುರಂಕೋಟೆ, ಬೂದಗವಿ, ತುಂಬಾಡಿ, ವಡ್ಡಗೆರೆ, ಹುಲೀಕುಂಟೆ, ಹೊಳವನಹಳ್ಳಿ, ಅಕ್ಕಿರಾಂಪುರ, ಬೈಚಾಪುರ, ಬೈರೇನಹಳ್ಳಿ, ಕೊಡಗದಾಲ, ಬ್ಯಾಲ್ಯ, ಪುರವಾರ, ಗೊಂದಿಹಳ್ಳಿ, ಕೋಡ್ಲಾಪುರ, ಕೊಂಡವಾಡಿ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು.