Site icon Vistara News

Pavagada News: ಚುನಾವಣೆ ಯಶಸ್ಸಿಗೆ ಜನರ ಸಹಕಾರ ಮುಖ್ಯ: ಚುನಾವಣಾಧಿಕಾರಿ ಆದಿಕ್‌ ಪಾಷ

#image_title

ಪಾವಗಡ: ಮೇ 10ರಂದು ನಡೆಯುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಪಾವಗಡದಲ್ಲಿ ತಾಲೂಕು (Pavagada News) ಆಡಳಿತದಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ತಾಲೂಕಿನ 246 ಮತಗಟ್ಟೆಗಳಲ್ಲಿ ಬಿಗಿ ಬಂದೋಬಸ್ತ್‌ ಹಾಗೂ ಕಟ್ಟೆಚ್ಚರ ವಹಿಸಲಾಗಿದೆ ಎಂದು ಚುನಾವಣಾಧಿಕಾರಿ ಆದಿಕ್ ಪಾಷ ತಿಳಿಸಿದ್ದಾರೆ.

ಚುನಾವಣೆ ಸಿದ್ಧತೆ ಬಗ್ಗೆ ಮಾತನಾಡಿರುವ ಅವರು, “ರಾಜವಂತಿ ಕೊಡಮಡಗು, ನಾಗಲಾಪುರ, ದೊಮ್ಮತಮರಿ, ಅರಸೀಕೆರೆ, (ಚಿಕ್ಕನಡಕು ಕ್ರಾಸ್)ವೆಂಕಟಮ್ಮನಹಳ್ಳಿ, ಸಾಸಲಕು೦ಟೆ ಸೇರಿ 6 ಕಡೆ ಗಡಿ ಗ್ರಾಮಗಳಲ್ಲಿ ಚೆಕ್‌ಪೋಸ್ಟ್‌ ನಿರ್ಮಿಸಲಾಗಿದೆ. ದಿನದ 24 ಗಂಟೆಯೂ ಕಾರ್ಯನಿರ್ವಹಿಸುವುದಕ್ಕೆಂದು ತಂಡಗಳನ್ನು ರಚಿಸಲಾಗಿದೆ. ಚುನಾವಣೆಗೆ ಸ೦ಬ೦ಧಪಟ್ಟಂತೆ ಕಾನೂನು ಬಾಹಿರ ಚಟುವಟಿಕೆ ಕಂಡು ಬ೦ದರೆ ಚುನಾವಣೆ ಆಯೋಗ ಸೂಚಿಸಿದ 08136-200577 ಹಾಗೂ ಟೋಲ್ ಫ್ರೀ ಸಂಖ್ಯೆಯಾದ 1950ಕ್ಕೆ ಕರೆ ಮಾಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ” ಎ೦ದರು.

ಇದನ್ನೂ ಓದಿ: KUWJ Conference: 37ನೇ ರಾಜ್ಯ ಪತ್ರಕರ್ತರ ಸಮ್ಮೇಳನ; ರಾಜ್ಯಮಟ್ಟದ ಪ್ರಶಸ್ತಿ ಸ್ವೀಕರಿಸಿದ ವಿಸ್ತಾರ ನ್ಯೂಸ್‌ನ ಮಾರುತಿ ಪಾವಗಡ

ಶುಕ್ರವಾರ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ವೈ.ಎನ್. ಹೊಸಕೋಟೆ ಹಾಗೂ ನಾಗಲಮಡಿಕೆ ಸೇರಿದಂತೆ ತಾಲೂಕಿನ ನಾಲ್ಕು ಹೋಬಳಿಗಳಲ್ಲಿ 98,489 ಪುರುಷ ಹಾಗೂ 93,588 ಮಹಿಳೆ ಮತ್ತು ಇತರೆ 10 ಸೇರಿ ಒಟ್ಟು 19,2087 ಮತದಾರರಿದ್ದಾರೆ. 3251 ಹೊಸದಾಗಿ ಸೇರ್ಪಡೆಯಾದ ಯುವ ಮತದಾರರಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಶೇ.82ರಷ್ಟು ಮತದಾನವಾಗಿತ್ತು” ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Bigg Boss Kannada | ಹಾವು – ಏಣಿ ಆಟಕ್ಕೆ ಮಂಜು ಪಾವಗಡ ಸ್ಪೆಷಲ್ ಗೆಸ್ಟ್: ರಾಕೇಶ್‌ ಅಡಿಗ ಕಕ್ಕಾ ಬಿಕ್ಕಿ ಆಗಿದ್ದೇಕೆ?

ಸಹಾಯಕ ಚುನಾವಣಾಧಿಕಾರಿ ಕೆ.ಎಸ್‌. ಸುಜಾತ ಮಾತನಾಡಿ, “ಚುನಾವಣಾ ಆಯೋಗದ ಅನ್ವಯ ಕ್ರಮ ವಹಿಸಲಾಗಿದೆ. ನಿಯಮಾನುಸಾರ ಚುನಾವಣೆ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ. ಹಣ, ಮದ್ಯ ಹಾಗೂ ಇತರೆ ಅಕ್ರಮ ಸಾಕಾಣಿಕೆ ಕ೦ಡು ಬಂದರೆ ಕೂಡಲೇ ಕ್ರಮ ಜರುಗಿಸಿ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗುವುದು” ಎಂದು ಹೇಳಿದರು. ಇದೇ ವೇಳೆ ಕಂದಾಯ ಇಲಾಖೆಯ ಶಿರಸ್ತೇದಾರ್ ನರಸಿಂಹಮೂರ್ತಿ ಹಾಗೂ ಚುನಾವಣಾ ಸಿಬ್ಬಂದಿ ಉಪಸ್ಥಿತರಿದ್ದರು.

Exit mobile version