ಶಿರಾ: ಶಿರಾ ನಗರಸಭೆಯ ವತಿಯಿಂದ ಭಾನುವಾರ ನಗರದ ದೊಡ್ಡಕೆರೆಯ ಸುತ್ತಮುತ್ತಲಿನ ಪ್ರದೇಶದ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಹೇಮಾವತಿ ಜಲಾಶಯದಿಂದ ಶಿರಾದ ದೊಡ್ಡಕೆರೆಗೆ ನೀರು ಹರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನಗರಸಭೆಯ ಆಯುಕ್ತ ರುದ್ರೇಶ್ ಅವರ ನೇತೃತ್ವದಲ್ಲಿ ಸಿಬ್ಬಂದಿ ಸ್ವಚ್ಛತಾ ಕಾರ್ಯ (Shira News) ಕೈಗೊಂಡರು.
ಇದನ್ನೂ ಓದಿ: Stock Market News: ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ, ರೂ.17.03 ಲಕ್ಷ ಕೋಟಿ ನಷ್ಟ
ತುಮಕೂರು ಭಾಗದ ನಾಲೆಗಳಿಗೆ ಹೇಮಾವತಿ ಜಲಾಶಯದಿಂದ ನೀರು ಹರಿಸಿರುವ ಕಾರಣ ಶಿರಾ ದೊಡ್ಡಕೆರೆಯ ಸುತ್ತಮುತ್ತಲೂ ಯಥೇಚ್ಛವಾಗಿ ಬೆಳೆದಿದ್ದ ಗಿಡ-ಗಂಟೆಗಳು, ಕಸದರಾಶಿಯನ್ನು ನಗರಸಭೆಯ ಸಿಬ್ಬಂದಿ ತೆರವು ಗೊಳಿಸಿ, ಸ್ವಚ್ಛತಾ ಕಾರ್ಯ ನಡೆಸಿದರು.
ಇನ್ನು ಕೆರೆಯ ಸುತ್ತಮುತ್ತಲಿನ ನಾನಾ ಬಡಾವಣೆಗಳಿಂದ ಹರಿಬಿಡುವ ಕೊಳಚೆ ನೀರು ಕೆರೆಗೆ ಸೇರದಂತೆ ಅಗತ್ಯ ಕ್ರಮ ಕೈಗೊಂಡು ಹಾಗೂ ಸುತ್ತಲಿನ ತಂತಿ ಬೇಲಿಗಳನ್ನು ಭದ್ರಗೊಳಿಸಿ, ತಂತಿ ಬೇಲಿಗೆ ಆವರಿಸಿಕೊಂಡಿದ್ದ ಗಿಡ-ಗಂಟೆಗಳನ್ನು ತೆರವುಗೊಳಿಸಲಾಯಿತು.
ಇದನ್ನೂ ಓದಿ: Viral Video: ಅಳುತ್ತಿರುವ ಹುಡುಗನನ್ನು ಸಮಾಧಾನಪಡಿಸಿದ ನಾಯಿ ಮರಿ! ಆನಂದ್ ಮಹೀಂದ್ರಾ ಹಂಚಿಕೊಂಡ ವಿಡಿಯೊ ಇದು
ಈ ಕುರಿತು ನಗರಸಭೆಯ ಆಯುಕ್ತ ರುದ್ರೇಶ್ ಮಾತನಾಡಿ, ದೊಡ್ಡಕೆರೆಯ ಸುತ್ತಮುತ್ತಲೂ ಬೆಳೆದಿದ್ದ ಗಿಡ-ಗಂಟೆ, ತ್ಯಾಜ್ಯವನ್ನು ತೆರವುಗೊಳಿಸುವ ಮೂಲಕ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.