Site icon Vistara News

ಸಿದ್ದರಾಮಯ್ಯ- ಈಶ್ವರಪ್ಪ ಬಣಗಳ ನಡುವೆ ಮಾತಿನ ಚಕಮಕಿ

sidramaya and ishwarappa

ತುಮಕೂರು: ಶನಿವಾರ ನಡೆಯುವ ಕುರುಬರ ಸಮಾವೇಶಕ್ಕೆ ಸಂಬಂಧಿಸಿದಂತೆ ಶುಕ್ರವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆದ ಸಂದರ್ಭ, ಸಿದ್ದರಾಮಯ್ಯ ಹಾಗೂ ಈಶ್ವರಪ್ಪ ಪರ ಬಣಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಒಂದೇ ಬಣದ ಕೆಲವು ಮುಖಂಡರನ್ನು ಸಮಾವೇಶಕ್ಕೆ ಆಹ್ವಾನಿಸಿದ್ದಕ್ಕೆ ಎರಡು ಬಣಗಳ ನಡುವೆ ಕಿತ್ತಾಟ ಉಂಟಾಯಿತು. ಈಶ್ವರಪ್ಪನವರನ್ನು ಆಹ್ವಾನಿಸದೇ ಕೇವಲ ಸಿದ್ದರಾಮಯ್ಯರನ್ನು ಆಹ್ವಾನಿಸಲಾಗಿದೆ, ಈಶ್ವರಪ್ಪ ಅವರನ್ನು ಉಪೇಕ್ಷೆ ಮಾಡಲಾಗಿದೆ ಎಂದು ಈಶ್ವರಪ್ಪ ಬಣ ಆರೋಪಿಸಿತು. ಸುದ್ದಿಗೋಷ್ಠಿ ಬಳಿಕ ಎರಡು ಬಣಗಳ ನಡುವೆ ಮಾತಿನ ಚಕಮಕಿ ನಡೆದು, ಪರಸ್ಪರ ಕೈ ಕೈ ಮಿಲಾಯಿಕೊಳ್ಳುವ ಹಂತಕ್ಕೆ ಹೋಯಿತು.

ಈಶ್ವರಪ್ಪ ಯಾವತ್ತೂ ಹಿಂದುಳಿದವರ ಪರ ಧ್ವನಿ ಎತ್ತಿಲ್ಲ, ಸಿದ್ದರಾಮಯ್ಯ ಮಾತ್ರ ಕುರುಬರ ಪರ ನಿಲ್ಲುತ್ತಾರೆ. ಈಶ್ವರಪ್ಪ ತಾನು ಕುರುಬ ಎಂದು ಹೇಳಲಿ, ಆಮೇಲೆ ಅವರನ್ನು ಸಮಾವೇಶಕ್ಕೆ ಕರೆಯುತ್ತೇವೆ ಎಂದು ಕುರುಬರ ರಾಜ್ಯ ಸಂಘದ ನಿರ್ದೇಶಕ ರಾಮಚಂದ್ರಪ್ಪ ಹೇಳಿದರು.

ರಾಮಚಂದ್ರಪ್ಪರ ಹೇಳಿಕೆಯಿಂದ ಇನ್ನಷ್ಟು ಕೆರಳಿದ ಪಂಗಡ ನಾಯಕರು ಹೋಟೆಲ್‌ನ ಮುಂಭಾಗದಲ್ಲಿ ನಡುರಸ್ತೆಯಲ್ಲಿ ಜಗಳಕ್ಕೆ ನಿಂತರು. ಆಗ ಎರಡು ಬಣಗಳ ನಡುವೆ ಕಿತ್ತಾಟದ ಹೈಡ್ರಾಮಾ ನಡೆಯಿತು.

ಇದನ್ನೂ ಓದಿ| ಇವತ್ತು ಹೆಡ್ಗೆವಾರ್‌ ಪಠ್ಯ, ನಾಳೆ ಗೋಡ್ಸೆ ಪಠ್ಯ: ಸಿದ್ದರಾಮಯ್ಯ ವಾಗ್ದಾಳಿ

Exit mobile version