Site icon Vistara News

ರಸ್ತೆ ಬದಿಯ ಹೋಟೆಲ್‌ನಲ್ಲಿ ತಿಂಡಿ, ಚಹಾ ಸೇವಿಸಿ ಸರಳತೆ ಮೆರೆದ ಶಿಕ್ಷಣ ಸಚಿವ ನಾಗೇಶ್‌

ತುಮಕೂರು : ತಿಪಟೂರಿನಿಂದ ಕೇವಲ 9 ಕಿಲೋಮೀಟರ್ ದೂರವಿರುವ ಪಾಲಣ್ಣ ಹೋಟೆಲ್‌ನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಕುಳಿತು ತಿಂಡಿ, ಚಹಾ ಸೇವಿಸುತ್ತಿರುವ ಫೋಟೊ ಈಗ ಎಲ್ಲೆಡೆ ಹರಿದಾಡುತ್ತಿದ್ದು, ಸಚಿವರ ಸರಳತೆಗೆ ಮೆಚ್ಚುಗೆ ಗಳಿಸುತ್ತಿದೆ.

ಈ ಹೋಟೆಲ್‌ನಲ್ಲಿ ಗ್ಯಾಸ್‌ ಬದಲಿಗೆ, ಹಳ್ಳಿಯ ರೀತಿಯಲ್ಲಿ ತೆಂಗಿನ ಮಟ್ಟೆ ಕಾಯಿಯನ್ನು ಉಪಯೋಗಿಸಿ ತಟ್ಟೆಇಡ್ಲಿ ತಯಾರಿಸಲಾಗುತ್ತದೆ. ಈ ಹೋಟೆಲ್‌ನ ತಟ್ಟೆ ಇಡ್ಲಿ, ಖಾರದ ಚಟ್ನಿ, ವಡೆ, ಹೆರಳೆಕಾಯಿ ಚಿತ್ರಾನ್ನ ಸುತ್ತಮತ್ತ ಸಾಕಷ್ಟು ಜನಪ್ರಿಯವಾಗಿದೆ. ಪತಿ-ಪತ್ನಿ ಇಬ್ಬರೇ ನಡೆಸುವ ಹೋಟೆಲ್‌ಗೆ ನಾಗೇಶ್‌ ಇತ್ತೀಚೆಗೆ ಭೇಟಿ ನೀಡಿದ್ದಾರೆ.

ನಾಗೇಶ್‌ ಅತ್ಯಂತ ಸರಳವಾಗಿ ಒಬ್ಬರೇ ಹೋಗಿ ರಸ್ತೆಬದಿಯ ಬೆಂಚ್‌ ಕಲ್ಲಿನ ಮೇಲೆ ಕುಳಿತು ಸಾಮಾನ್ಯರಲ್ಲಿ ಸಾಮಾನ್ಯರಂತೆ ತಿಂಡಿ ತಿನ್ನುತ್ತಿರುವುದು ವಿಶೇಷ.

ಇದ್ದನ್ನು ಓದಿ | ಪ್ರಾಚೀನ ಭಾರತದ ಈ 5 ಆಹಾರಗಳನ್ನು ಜನರು ಈಗಲೂ ಸೇವಿಸುತ್ತಾರೆ

Exit mobile version