Site icon Vistara News

Tumkur News: ಡಿ.8ರಂದು ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಾಲಯದಲ್ಲಿ ವಿಶೇಷ ಪೂಜೆ

Special Pooja at Goravanahalli Sri Mahalakshmi Temple on December 8

ಕೊರಟಗೆರೆ: ತಾಲೂಕಿನ‌ ಪ್ರಸಿದ್ಧ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಾಲಯದಲ್ಲಿ (Goravanahalli Sri Mahalakshmi Temple) ಕಾರ್ತಿಕ ಮಾಸದ ಕೊನೆ ಶುಕ್ರವಾರ ಡಿ. 8ರಂದು ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.

ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್‌ನ ವತಿಯಿಂದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಡಿ. 8ರಂದು ಶುಕ್ರವಾರ ಶ್ರೀ ಮಹಾಲಕ್ಷ್ಮೀ ದೇವಿಗೆ ವಿಶೇಷ ಹೂವಿನ ಅಲಂಕಾರ, ಬೆಳಗ್ಗೆ 7 ಗಂಟೆಯಿಂದ 8.30ರವರೆಗೆ ಪಂಚಾಮೃತ ಅಭಿಷೇಕ, ಬೆಳಗ್ಗೆ 8.30ರಿಂದ ಮಧ್ಯಾಹ್ನ 12ರವರೆಗೆ ಶ್ರೀ ಗಣಪತಿ ಹೋಮ, ನವಗ್ರಹ ಹೋಮ , ಶ್ರೀ ಮಹಾಲಕ್ಷ್ಮೀ ಹೋಮ, ಗ್ರಾಮದೇವತೆ ದುರ್ಗಾ ಹೋಮ ನಡೆಯಲಿವೆ.

ಇದನ್ನೂ ಓದಿ: Cyber Crime: ಆನ್‌ಲೈನ್‌ ಉದ್ಯೋಗದ ಹೆಸರಿನಲ್ಲಿ ವಂಚಿಸುತ್ತಿದ್ದ 100 ವೆಬ್‌ಸೈಟ್‌ಗಳನ್ನು ನಿಷೇಧಿಸಿದ ಕೇಂದ್ರ

ಮಧ್ಯಾಹ್ನ 12.25ಕ್ಕೆ ರಥಾಂಗ ಹೋಮದ ನಂತರ ಅಭಿಜಿನ್ ಲಗ್ನದಲ್ಲಿ ಬ್ರಹ್ಮ ರಥೋತ್ಸವ, ಸಾಂಸ್ಕೃತಿಕ ಕಲಾತಂಡಗಳೂಂದಿಗೆ ಸಂಜೆ 5.30 ಕ್ಕೆ ದೀಪೋತ್ಸವ , ರಾತ್ರಿ 8 ಗಂಟೆಗೆ ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ಗೊರವನಹಳ್ಳಿ – ನರಸಯ್ಯನಪಾಳ್ಯ ಗ್ರಾಮಸ್ಥರಿಂದ ಆರತಿ ಸೇವೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಇದನ್ನೂ ಓದಿ: Rishabh Pant: ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಪಂತ್​; ಈ ಸರಣಿಯಲ್ಲಿ ಕಣಕ್ಕೆ!

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿ ಶ್ರೀ ಮಹಾಲಕ್ಷ್ಮೀ ತಾಯಿಯ ಕೃಪೆಗೆ ಪಾತ್ರರಾಗಬೇಕೆಂದು ಕಾರ್ಯನಿರ್ವಾಹಕ ಅಧಿಕಾರಿ ಕೇಶವಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version