ಕೊರಟಗೆರೆ: 2022-23ನೇ ಸಾಲಿನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ (SSLC Result) ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಕೊರಟಗೆರೆ ತಾಲೂಕಿನ ಹುಲಿಕುಂಟೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಉತ್ತಮ ಸಾಧನೆ ಮಾಡಿದೆ. ಶಾಲೆಯ ವಿದ್ಯಾರ್ಥಿನಿಯಾದ ಜಿ.ಡಿ ಚೈತ್ರ 625 ಅಂಕಗಳಿಗೆ 616 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಪಟ್ಟಣದ ರವೀಂದ್ರ ಭಾರತಿ ಪ್ರೌಢಶಾಲೆಯ ಜಿ.ಆರ್ ರಾಜೇಶ್ 625 ಅಂಕಗಳಿಗೆ 614 ಅಂಕ ಪಡೆದು ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಪಟ್ಟಣದ ಚಾಣಕ್ಯ ಪಬ್ಲಿಕ್ ಪ್ರೌಢಶಾಲೆಯ ಕೆ.ಆರ್. ಅಕ್ಷಯ್ ಕುಮಾರ್ 625 ಅಂಕಗಳಿಗೆ 611 ಅಂಕ ಪಡೆದು ತಾಲೂಕಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ಈ ಮಕ್ಕಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವಿ. ನಟರಾಜು, ಎಸ್‌ಎಸ್‌ಎಲ್‌ಸಿ ನೋಡೆಲ್ ಅಧಿಕಾರಿ ಟಿ.ಎಸ್. ಗಂಗಾಧರ್ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಸಹ ಶಿಕ್ಷಕರು ಅಭಿನಂದನೆ ತಿಳಿಸಿದ್ದಾರೆ.
ಇದನ್ನೂ ಓದಿ: Karnataka Election 2023: ಮತ ಜಾಗೃತಿ ನಾನಾ ನಮೂನೆ; ಮತದಾನ ನಮ್ಮೆಲ್ಲರ ಹೊಣೆ
ಕೊರಟಗೆರೆ ತಾಲೂಕಿನಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದ ಶಾಲೆಗಳು
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಹುಲಿಕುಂಟೆ, ರವೀಂದ್ರ ಭಾರತಿ ಪ್ರೌಢಶಾಲೆ ಕೊರಟಗೆರೆ ಪಟ್ಟಣ, ಸರ್ಕಾರಿ ಪ್ರೌಢಶಾಲೆ ಯಲಚಿಗೆರೆ, ಸರ್ಕಾರಿ ಪ್ರೌಢಶಾಲೆ ಲಿಂಗಾಪುರ, ಸರ್ಕಾರಿ ಪ್ರೌಢಶಾಲೆ ಅರಸಾಪುರ, ಸರ್ಕಾರಿ ಪ್ರೌಢಶಾಲೆ ದಾಸರಹಳ್ಳಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ ರೆಡ್ಡಿಕಟ್ಟೆ, ಶ್ರೀ ಮಾರುತಿ ಗ್ರಾಮಾಂತರ ಪ್ರೌಢಶಾಲೆ ಕಬ್ಬಿಗೆರೆ, ಕೆ.ಎಂ.ಎಂ ಪ್ರೌಢಶಾಲೆ ಕುರಂಕೋಟೆ, ಸುವರ್ಣ ಮುಖಿ ಪ್ರೌಢಶಾಲೆ ಮಲ್ಲೇಕಾವು, ಡಾ.ಬಿ.ಆರ್ ಅಂಬೇಡ್ಕರ್ ಪ್ರೌಢಶಾಲೆ ಸಿದ್ದರಬೆಟ್ಟ, ವಿಶ್ವಭಾರತಿ ಪ್ರೌಢಶಾಲೆ ಮಾವತ್ತೂರು, ಶ್ರೀ ಮಹಾಲಕ್ಷ್ಮಿ ಪ್ರೌಢಶಾಲೆ ಗೊರವನಹಳ್ಳಿ, ಜೈನಾಬೀಯಾ ಪ್ರೌಢಶಾಲೆ ಹೊಳವನಹಳ್ಳಿ ಶಾಲೆಗಳು ಶೇಕಡಾ 100 ರಷ್ಟು ಫಲಿತಾಂಶವನ್ನು ಪಡೆದುಕೊಂಡಿವೆ.