Site icon Vistara News

Suspicious Death : ಮನೆಯೊಳಗೆ ನೇತಾಡುತ್ತಿತ್ತು ಗ್ರಾಪಂ ಸದಸ್ಯೆ ಶವ; ಕೊಲೆಯೋ? ಆತ್ಮಹತ್ಯೆಯೋ?

Hirehalli gram panchayat member found dead under mysterious circumstances

ತುಮಕೂರು: ಅನುಮಾನಾಸ್ಪದವಾಗಿ ಗ್ರಾಮ ಪಂಚಾಯತ್‌ನ ಸದಸ್ಯೆ (Suspicious Death) ಮೃತಪಟ್ಟಿದ್ದಾರೆ. ತುಮಕೂರು ತಾಲೂಕಿನ ಸಂಗಾಪುರದ ಗೊಲ್ಲರಹಟ್ಟಿಯಲ್ಲಿ ಘಟನೆ ನಡೆದಿದೆ. ಭಾಗ್ಯ (30) ಮೃತ ದುರ್ದೈವಿ.

ಭಾಗ್ಯ ಹಿರೇಹಳ್ಳಿ ಗ್ರಾಮ ಪಂ‌ಚಾಯತ್‌ನ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆಯಾಗಿದ್ದರು. ಕಳೆದ ಶುಕ್ರವಾರ ನೇಣು ಬಿಗಿದ ಸ್ಥಿತಿಯಲ್ಲಿ ಭಾಗ್ಯಳ ಶವ ಪತ್ತೆಯಾಗಿದೆ. ಆದರೆ ಭಾಗ್ಯಳ ಸಂಬಂಧಿಕರು ಈ ಸಾವಿನ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲವಾಗಿರಲಿಲ್ಲ ಎಂದಿದ್ದಾರೆ.

ಸದ್ಯ ತುಮಕೂರಿನ ಕ್ಯಾತ್ಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾಗ್ಯಳ ಸಾವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದನ್ನು ತಿಳಿಯಲು ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: Namma Metro : ಹಳದಿ ಲೈನ್‌ ಮೆಟ್ರೋ ಕಾರ್ಯಾರಂಭ ಮತ್ತೆ ವಿಳಂಬ; ಕಾರಣ ಚೀನಾ!

ಕಾಮುಕ ಅಣ್ಣನಿಂದಲೇ ಅತ್ಯಾಚಾರ; ಮಗುವಿಗೆ ಜನ್ಮ ನೀಡಿದ 15ರ ಬಾಲಕಿ

ಕಲಬುರಗಿ: 10ನೇ ತರಗತಿಯಲ್ಲಿ ಕಲಿಯುತ್ತಿರುವ 15 ವರ್ಷದ ಬಾಲಕಿಯೊಬ್ಬಳು (15 Year old girl) ಗಂಡು ಮಗುವಿಗೆ ಜನ್ಮ (Girl gives birth to boy child) ನೀಡಿದ ಘಟನೆ ಕಲಬುರಗಿ ಜಿಲ್ಲೆಯ (Kalaburagi News) ಅಳಂದದಲ್ಲಿ ಸಂಭವಿಸಿದೆ. ಆಕೆ ಅತ್ಯಾಚಾರಕ್ಕೆ ಒಳಗಾಗಿ (Physical Abuse) ಈ ಸಮಸ್ಯೆ ಎದುರಿಸಿದ್ದಾಳೆ. ದುರಂತವೆಂದರೆ ಆಕೆಯನ್ನು ಹಾಗೆ ಬಳಸಿಕೊಂಡದ್ದು ಬೇರೆ ಯಾರೂ ಅಲ್ಲ.. ಅವಳ ಅಣ್ಣನೇ ಈ ಕಾಮುಕ!

ಆಳಂದ ತಾಲೂಕಿನ ವಾಸಿಯಾಗಿರುವ ಈ ಯುವತಿ ಗರ್ಭ ಧರಿಸಲು ಆಕೆಯ ಅಣ್ಣನೇ ಕಾರಣ ಎಂದು ಹೇಳಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಅಣ್ಣ ಎಂದರೆ ಅವರು ಒಡಹುಟ್ಟಿದವನೇನೂ ಅಲ್ಲ. ಬದಲಾಗಿ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದ ದೊಡ್ಡಪ್ಪನ ಮಗನೇ ಆಕೆಯನ್ನು ಈ ರೀತಿಯಾಗಿ ಬಳಸಿಕೊಂಡು ಗರ್ಭಿಣಿಯಾಗಿ ಮಾಡಿದ್ದು.

ಈ ವಿದ್ಯಾರ್ಥಿನಿ ಕಲಬುರಗಿ ಜಿಲ್ಲೆಯಲ್ಲಿರುವ ವಸತಿ ಶಾಲೆಯಲ್ಲಿ ವಾಸವಾಗಿದ್ದು ಓದು ಮುಂದುವರಿಸಿದ್ದಳು. ಶಾಲೆಗೆ ರಜೆ ಇದ್ದಾಗ ಮಾತ್ರ ಮನೆಗೆ ಬರುತ್ತಿದ್ದಳು. ಅವರದು ಕೂಡು ಕುಟುಂಬ. ಆಕೆ ಮನೆಗೆ ಬಂದಾಗಲೆಲ್ಲ ಆಕೆಯ ಅಣ್ಣನ ಮಗ ಆಕೆಯನ್ನು ಬಳಸಿಕೊಳ್ಳುತ್ತಿದ್ದ ಎನ್ನಲಾಗಿದೆ.

ರಾತ್ರಿ ಹೊತ್ತು ಮನೆಯಲ್ಲಿ ಎಲ್ಲರೂ ಮಲಗಿದ ಮೇಲೆ ಆಕೆಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ. ಕಳೆದ ಏಪ್ರಿಲ್‌ ತಿಂಗಳಲ್ಲಿ ಆಕೆ ರಜೆಯಲ್ಲಿ ಮನೆಗೆ ಬಂದಿದ್ದಾಗ ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಹೀಗಾಗಿ ಆಕೆ ಯಾರಿಗೂ ಈ ವಿಚಾರವನ್ನು ಹೇಳಿರಲಿಲ್ಲ.

ಇದನ್ನೂ ಓದಿ : Hanagal Case: ಹಾನಗಲ್‌ ಅತ್ಯಾಚಾರ ಕೇಸ್‌ ಮುಚ್ಚಿ ಹಾಕಲು ಲೈಸೆನ್ಸ್‌ ಕೊಟ್ಟ ಸಿದ್ದರಾಮಯ್ಯ; ಬೊಮ್ಮಾಯಿ ಕಿಡಿ

ಗರ್ಭಿಣಿಯಾದರೂ ಯಾರಿಗೂ ಗೊತ್ತಾಗಿರಲಿಲ್ಲ!

ಈ ನಡುವೆ ಆಕೆ ಗರ್ಭಿಣಿಯಾಗಿದ್ದಳು. ಆದರೆ ಆಕೆ ಗರ್ಭಿಣಿಯಾಗಿದ್ದು ಯಾರಿಗೂ ಗೊತ್ತಾಗಿರಲಿಲ್ಲ. ಡಿಸೆಂಬರ್‌ 24ರಂದು ಶಾಲೆಯಲ್ಲಿ ಇದ್ದಾಗ ಆಕೆಗೆ ಜೋರಾಗಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಶಿಕ್ಷಕರಿಗೆ ಹೇಳಿ ಆಕೆ ಸಂಬಂಧಿಕರ ಮನೆಗೆ ತೆರಳಿದ್ದಾಳೆ. ನಂತರ ಸಂಬಂಧಿಕರು‌ ವಿದ್ಯಾರ್ಥಿನಿ ಕುಟಂಬದವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ‌ ಆಕೆಯನ್ನು ಮಹಾರಾಷ್ಟ್ರದ ಸೊಲ್ಲಾಪುರದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಯಿತು. ಚಿಕಿತ್ಸೆಗೆ ದಾಖಲು ಮಾಡುತ್ತಿದ್ದಂತೆಯೇ ಆಕೆ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾಳೆ.

ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮ ಕೊಟ್ಟಿರುವ ವಿಚಾರ ಗೊತ್ತಾಗ್ತಿದ್ದಂತೆ ಕುಟುಂಬಸ್ಥರು ಕೂಡ ಶಾಕ್‌ ಆಗಿದ್ದಾರೆ. ಯಾಕೆಂದರೆ ಅವರ‍್ಯಾರಿಗೂ ಅದರ ಸುಳಿವೇ ಇರಲಿಲ್ಲ. ಯುವತಿ ಮೊದಲೇ ಸ್ವಲ್ಪ ದಪ್ಪ ಇದ್ದಿದ್ದರಿಂದ ಆಕೆಯ ಹೊಟ್ಟೆ ದಪ್ಪ ಆಗಿದ್ದು ಯಾರ ಅರಿವಿಗೂ ಬಂದಿರಲಿಲ್ಲ. ಆಕೆ ಮನೆಯಲ್ಲಿ ಇಲ್ಲದೆ ಹಾಸ್ಟೆಲ್‌ನಲ್ಲಿ ಇದ್ದಿದ್ದರಿಂದ ಮಾಸಿಕ ಋತುಸ್ರಾವ ಆಕೆಗಿದೆಯೇ ಇಲ್ಲವೇ ಎನ್ನುವುದು ಕೂಡಾ ಅವರ ಅವರಿಗೆ ಬಂದಿರಲಿಲ್ಲ. ಹಾಸ್ಟೆಲ್‌ನಲ್ಲಿ ಅದನ್ನೆಲ್ಲ ಯಾರೂ ಸೂಕ್ಷ್ಮವಾಗಿ ಗಮನಿಸಿರಲಿಲ್ಲ.

ಮಹಾರಾಷ್ಟ್ರ ಪೊಲೀಸರು ನಿಂಬರ್ಗಾ ಪೊಲೀಸರನ್ನು ಸಂಪರ್ಕ ಮಾಡಿ ವಿಷಯವನ್ನು ತಿಳಿಸಿದ್ದು, ನಿಂಬರ್ಗಾ ಪೊಲೀಸರು ವಿದ್ಯಾರ್ಥಿನಿಯ ವಿಚಾರಣೆ ನಡೆಸಿದಾಗ ಅಣ್ಣನಿಂದಲೇ ಆಕೆ ಅತ್ಯಾಚಾರಕ್ಕೆ ಒಳಗಾಗಿದ್ದು ಬಯಲಾಯಿತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version