Site icon Vistara News

ಬೆಂಕಿ ಹಚ್ಚಿಕೊಂಡಿದ್ದ ವೈನ್‌ ಕ್ಯಾಷಿಯರ್‌ ಚಿಕಿತ್ಸೆ ಫಲಿಸದೇ ಸಾವು

ತುಮಕೂರು: ಸೋರೆಕುಂಟೆಯಲ್ಲಿರುವ ಶ್ರೀನಿಧಿ ವೈನ್ಸ್ ನಲ್ಲಿ ಕ್ಯಾಷಿಯರ್ ಆಗಿದ್ದ ಗೋವಿಂದ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಸೋರೆಕುಂಟೆಯಲ್ಲಿರುವ ಶ್ರೀನಿಧಿ ವೈನ್ಸ್‌ನಲ್ಲಿ ಗೋವಿಂದ ಕ್ಯಾಷಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಗುರುವಾರ ತಡರಾತ್ರಿ ಕೌಟುಂಬಿಕ ಕಲಹಕ್ಕೆ ಮನನೊಂದು ಗೋವಿಂದ ಆತ್ಮಹತ್ಯೆಗೆ ಯತ್ನಿಸಿದ್ದರು. ಇದನ್ನು ಗಮನಿಸಿದ ಶ್ರೀನಿಧಿ ವೈನ್ಸ್ ಸಿಬ್ಬಂದಿ ತುರ್ತು ದೂರವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದರು.

ಇದನ್ನೂ ಓದಿ| ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆ, ಗಂಡನೇ ಕೊಲೆಗಾರ ಎಂದ ಕುಟುಂಬ

ಸ್ಥಳಕ್ಕೆ ಆಗಮಿಸಿದ ಪೊಲೀಸರು, ಬೆಂಕಿ ಹಾಕಿಕೊಂಡಿದ್ದ ವ್ಯಕ್ತಿಯನ್ನ ತಡೆಯಲು ಮುಂದಾದರು. ಈ ವೇಳೆ ಇಬ್ಬರು ಪೊಲೀಸರಿಗೂ ಬೆಂಕಿ ತಗುಲಿದೆ. ತಕ್ಷಣ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಗೋವಿಂದ ಶುಕ್ರವಾರ ಮೃತಪಟ್ಟಿದ್ದಾರೆ. ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ| Fire Tragedy: ಸುರಕ್ಷತಾ ನಿಯಮ ನಿರ್ಲಕ್ಷ್ಯಕ್ಕೆ ತೆರಬೇಕಾಗುತ್ತದೆ ಬೆಂಕಿಯ ಬೆಲೆ

Exit mobile version