Site icon Vistara News

Tumakuru News : ಸಿದ್ದರ ಬೆಟ್ಟದಲ್ಲಿ ಜೂ. 12ರಂದು ಉಚಿತ ಸಾಮೂಹಿಕ ವಿವಾಹ, ಧರ್ಮಜಾಗೃತಿ ಸಮಾವೇಶ

#image_title

ಕೊರಟಗೆರೆ: ತಾಲೂಕಿನ ಸಿದ್ದರಬೆಟ್ಟದ ಶ್ರೀ ಕ್ಷೇತ್ರ ಬಾಳೆಹೊನ್ನೂರು ರಂಭಾಪುರಿ ಖಾಸಾ ಶಾಖಾ ಮಠದ (Tumkur News) 17ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಜೂನ್‌ 12ರಂದು ಉಚಿತ ಸಾಮೂಹಿಕ ವಿವಾಹ ಹಾಗೂ ಧರ್ಮ ಜಾಗೃತಿ ಸಮಾವೇಶ ನಡೆಯಲಿದೆ ಎಂದು ಶ್ರೀ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಯವರು ತಿಳಿಸಿದ್ದಾರೆ.

ಅವರು ತಾಲೂಕಿನ ಚನ್ನರಾಯನದುರ್ಗಾ ಹೋಬಳಿಯ ಸಿದ್ದರಬೆಟ್ಟದ ಶ್ರೀಕ್ಷೇತ್ರ ಬಾಳೆಹೊನ್ನೂರು ರಂಭಾಪುರಿ ಖಾಸಾ ಶಾಖಾ ಮಠದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪೋಸ್ಟರ್‌ಗಳನ್ನು ಮತ್ತು ಕರಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

“ಪ್ರತಿ ವರ್ಷದಂತೆ ಈ ವರ್ಷವು ಸಹ ಜೂನ್ 12ರಂದು ಶ್ರೀ ಮಠದ ಭಕ್ತಾಧಿಗಳ ಸಮ್ಮುಖದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ, ಜಗಜ್ಯೋತಿ ಬಸವೇಶ್ವರರ ಜಯಂತೋತ್ಸವ ಮತ್ತು ಉಚಿತ ಸಾಮೂಹಿಕ ವಿವಾಹ ಮಹೋತ್ಸವಗಳು ಹಾಗೂ ಜನಜಾಗೃತಿ ಧರ್ಮ ಸಮಾರಂಭವನ್ನು ನಡೆಸಲಾಗುತ್ತಿದೆ. ಶ್ರೀ ಮಠದ ಭಕ್ತಾಧಿಗಳ ಸಹಕಾರದಿಂದ ಕಳೆದ 15 ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಏರ್ಪಡಿಸಲಾಗುತ್ತಿದೆ. ಅನಾನುಕೂಲದಲ್ಲಿರುವಂತಹ ಸುಮಾರು 500 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಇನ್ನೂ ಹೆಚ್ಚಿನ ಜೋಡಿಗಳು ಈ ರೀತಿಯ ಸಾಮೂಹಿಕ ವಿವಾಹವಾಗುವುದರ ಮೂಲಕ ಆರ್ಥಿಕವಾಗಿ ಸಬಲರಾಗಬೇಕು” ಎಂದು ತಿಳಿಸಿದರು.

ಇದನ್ನೂ ಓದಿ: Karnataka Election 2023: ಪೊಲೀಸರ ಸೋಗಿನಲ್ಲಿ ಬಂದು ತುಮಕೂರು ಸಂಸದರ ಆಪ್ತನ ಮೇಲೆ ಹಲ್ಲೆ ಮಾಡಿದ ಅಪರಿಚಿತರು

“ಮಠದ ಆವರಣಕ್ಕೆ ಸಿಸಿ ರಸ್ತೆ ನಿರ್ಮಿಸಲು ಡಾ.ಜಿ.ಪರಮೇಶ್ವರ್‌ ಅವರು ಉಪಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ವಿಶೇಷ ಅನುದಾನದಲ್ಲಿ ಹಣ ಮಂಜೂರು ಮಾಡಿಕೊಟ್ಟಿದ್ದರು. ದಾಸೋಹ ಕೊಠಡಿ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದ ಹಿನ್ನೆಲೆ 1.25 ಕೋಟಿ ಹಣ ಮಂಜೂರು ಮಾಡಿದ್ದಾರೆ. ಪ್ರತಿ ವರ್ಷದ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರು ವಧುಗಳಿಗೆ ಮಾಂಗಲ್ಯವನ್ನು ನೀಡುತ್ತಿದ್ದಾರೆ. ಈ ಮಹತ್ವದ ಕಾರ್ಯಕ್ಕೆ ಕೈ ಜೋಡಿಸಿದ ಎಲ್ಲರಿಗೂ ಕೃತಜ್ಞತೆಗಳು. ಈ ಕಾರ್ಯಕ್ರಮಕ್ಕೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿದೆ” ಎಂದರು.

ಪೂರ್ವಭಾವಿ ಸಭೆಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಮಹೋತ್ಸವವನ್ನು ವ್ಯವಸ್ಥಿತವಾಗಿ ಸಂಭ್ರಮದಿಂದ ಮಾಡುವ ಅಭಿಲಾಷೆಯ ಬಗ್ಗೆ ಸಭಿಕರು ಚರ್ಚಿಸಿದರು. “ಸಮಾವೇಶಕ್ಕೆ ರಾಜ್ಯ ಸೇರಿದಂತೆ ಜಿಲ್ಲೆಯ ಹಾಗೂ ತಾಲೂಕಿನ ಪ್ರತಿ ಗ್ರಾಮಗಳಲ್ಲಿನ ಭಕ್ತಾದಿಗಳನ್ನು ಬರಮಾಡಿ ಕೊಂಡು ಅವರೆಲ್ಲರನ್ನು ಒಂದೆಡೆ ಸೇರಿಸಬೇಕು ಎನ್ನುವ ಉದ್ದೇಶವಿದೆ. ಈ ಬಗ್ಗೆ ಮಠದ ಭಕ್ತರು ನಿರಂತರವಾಗಿ ಸಂಪರ್ಕದಲ್ಲಿದ್ದು, ಯಾವುದೇ ರೀತಿ ಫಲಾಪೇಕ್ಷೆ ಬಯಸದೆ ಮಠದ ಪ್ರತಿ ಕಾರ್ಯಕ್ರಮದಲ್ಲಿಯೂ ಭಾಗಿಯಾಗುತ್ತಿದ್ದಾರೆ. ದಾನ ಮಾಡಿ ಸಹಕಾರ ನೀಡುತ್ತಿರುವ ಕಾರಣದಿಂದ ಮಠದ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನಡೆಯುತ್ತಿವೆ. ಇದು ಹೀಗೆ ಮುಂದುವರೆಯಲಿ” ಎಂದು ಶ್ರೀಗಳು ಹೇಳಿದರು.

ಇದನ್ನೂ ಓದಿ: The Kerala Story: ‘ದಿ ಕೇರಳ ಸ್ಟೋರಿ’ ಸಿನಿಮಾ ನೋಡಿ, ದ್ವೇಷ ಭಾಷಣ ಮಾಡಿದ ಸಾಧ್ವಿ ಪ್ರಾಚಿ ವಿರುದ್ಧ ಕೇಸ್ ದಾಖಲು

ಪೂರ್ವಭಾವಿ ಸಭೆಯಲ್ಲಿ ಶಿರಾ ಕೃಷ್ಣಪ್ಪ, ಶಿವಕುಮಾರ್, ಸುಕುಮಾರ್, ಆರ್.ಎಸ್.ರಾಜಣ್ಣ, ಶಾಂತಣ್ಣ, ಕೃಷ್ಣಪ್ಪ, ಇಂಜಿನಿಯರ್ ರೇಣುಕಪ್ಪ, ತರಕಾರಿ ಶಿವಕುಮಾರ್, ಗಂಗಮ್ಮ, ಗೀತಾ, ದೀಪಾಮಹೇಶ್, ಸದಾಶಿವಯ್ಯ, ಉಮೇಶ್, ನೀಲೇಶ್, ದ್ವಾರಕೀಶ್, ಅಖಂಡಾರಾದ್ಯ, ವಾಗೀಶ್, ಪವನ್‌ಕುಮಾರ್, ಮಲ್ಲಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Exit mobile version