Site icon Vistara News

Tumkur News: ಚಿಂಪುಗಾನಹಳ್ಳಿಯಲ್ಲಿ 10 ಗುಡಿಸಲು ಭಸ್ಮ; ಸ್ಥಳಕ್ಕೆ ಪರಮೇಶ್ವರ್‌ ಭೇಟಿ

Tumkur News 10 huts burnt down in Chimpuganahalli Minister Dr G Parameshwar visited the place

ಕೊರಟಗೆರೆ: ತಾಲೂಕಿನ ಚಿಂಪುಗಾನಹಳ್ಳಿ ಗ್ರಾಮದಲ್ಲಿ 10 ಗುಡಿಸಲುಗಳು ಬೆಂಕಿಗಾಹುತಿಯಾದ ಸ್ಥಳಕ್ಕೆ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ, ವೈಯಕ್ತಿಕವಾಗಿ ಪರಿಹಾರ (Tumkur News) ವಿತರಿಸಿದರು.

ತಾಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಂಪುಗಾನಹಳ್ಳಿ ಗ್ರಾಮದ ಹೊರವಲಯದಲ್ಲಿ ಏ.26 ರಂದು ಆಕಸ್ಮಿಕ ಬೆಂಕಿ ತಗುಲಿ 10 ಗುಡಿಸಲುಗಳು ಸಂಪೂರ್ಣ ಸುಟ್ಟು ಹೋಗಿದ್ದವು. ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹಾಗೂ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಅವರು ಸ್ಥಳಕ್ಕೆ ಭೇಟಿ ನೀಡಿದರು.

ಈ ವೇಳೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾತನಾಡಿ, ಈ ಹಿಂದೆ ಎರಡು ಬಾರಿ ಇದೇ ಸ್ಥಳದಲ್ಲಿ ಬೆಂಕಿ ಬಿದ್ದಾಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಿರಾತ್ರಿತರಿಗೆ ಮನೆ ಕಟ್ಟಿಕೊಳ್ಳಲು ನಿವೇಶನಗಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು, ಗುಡಿಸಲು ಸುಟ್ಟ ಕುಟುಂಬದ ಬಹುತೇಕರು ಪರಿಶಿಷ್ಟ ಜಾತಿ ಮತ್ತು ಹಾವಾಡಿಗ ಕುಟುಂಬಗಳಾಗಿವೆ ಎಂದರು.

ಇದನ್ನೂ ಓದಿ: Drown in Mekedatu: ಮೇಕೆದಾಟು ಬಳಿ ಈಜಲು ಹೋಗಿದ್ದ ಬೆಂಗಳೂರಿನ ಐವರು ಪ್ರವಾಸಿಗರ ಸಾವು

ಆಧಿಕಾರಿಗಳು ಈ ಗ್ರಾಮಕ್ಕೆ ಹೊಂದಿಕೊಂಡಿರುವ 9 ಎಕರೆ ಸರ್ಕಾರಿ ಜಮೀನನ್ನು ಗುರುತಿಸಿದ್ದಾರೆ, ಚುನಾವಣೆಯ ನೀತಿ ಸಂಹಿತೆ ಮುಗಿದ ತಕ್ಷಣ ಈ ಭಾಗದಲ್ಲಿ ಗುಡಿಸಲಿನಲ್ಲಿರುವ ಕುಟುಂಬಗಳಿಗೆ ಮೊದಲು ನಿವೇಶನಗಳನ್ನು ನೀಡಿ ಆಶ್ರಯ ಯೋಜನೆಗಳಲ್ಲಿ ಮನೆ ನಿರ್ಮಿಸಿ ಕೊಡಲಾಗುವುದು ಎಂದು ತಿಳಿಸಿದರು.

ಕ್ಷೇತ್ರಕ್ಕೆ ಸಾವಿರಾರು ಮನೆಗಳನ್ನು ತಂದರೂ ನಮ್ಮಲ್ಲಿ ಅವಿಭಕ್ತ ಕುಟುಂಬಗಳು ಕಡಿಮೆಯಾಗಿ ಎಲ್ಲರೂ ಚಿಕ್ಕ ಚಿಕ್ಕ ಕುಟುಂಬಗಳಾಗಿ ಹೊರಬರುತ್ತಿದ್ದಾರೆ ಅದಕ್ಕಾಗಿ ನಾವುಗಳು ಕ್ಷೇತ್ರದ್ಯಾಂತ ನಿವೇಶನಗಳನ್ನು ಗುರುತಿಸಿ ಮನೆ ಕಟ್ಟಿಕೊಡುವ ಕೆಲಸವನ್ನು ಮಾಡುತ್ತಾ ಬಂದಿದ್ದೇವೆ, ಆದರೆ ಹಲವು ಕಡೆ ಖಾಲಿ ಇರುವ ಸರ್ಕಾರಿ ಜಮೀನುಗಳಲ್ಲಿ ಗುಡಿಸಿಲು ಹಾಕಿಕೊಂಡರೆ ನಿವೇಶನ ನೀಡುತ್ತಾರೆ ಎನ್ನುವ ಮನೋಭಾವ ಹಲವರಲ್ಲಿ ಬಂದಿದ್ದು ಇದಕ್ಕೆ ಸ್ಥಳೀಯರು ಹಾಗೂ ಜನಪ್ರತಿನಿಧಿಗಳು ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಆಧಿಕಾರಿಗಳು ಹಾಗೂ ಗ್ರಾಪಂ ಸದಸ್ಯರು ಸ್ಥಳ ಪರಿಶೀಲನೆ ಮಾಡಿ ಅರ್ಹತೆ ಉಳ್ಳವರಿಗೆ ಮಾತ್ರ ನೀವೇಶನ ನೀಡಲಾಗುವುದು, ಸದ್ಯಕ್ಕೆ ಗುಡಿಸಲು ಸುಟ್ಟ ಕುಟುಂಬಗಳಿಗೆ ಬದುಕಲು ತಾತ್ಕಾಲಿಕ ಸಹಾಯ ಮಾಡಲಾಗಿದೆ ಎಂದರು.

ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಈ ರೀತಿ ಅವಘಡಗಳು ತುಂಬಾ ದುಃಖ ತರುತ್ತವೆ. ಗುಡಿಸಲು ಸುಟ್ಟುಕೊಂಡ ಕುಟುಂಬಗಳಿಗೆ ಶ್ರೀ ಮಠದಿಂದ ಅಡಿಗೆ ಪಾತ್ರೆಗಳು, ಬಟ್ಟೆಗಳು, ದಿನಸಿ ಸಾಮಗ್ರಿಗಳನ್ನು ನೀಡಲಾಗಿದೆ, ಈಗಾಗಲೆ ಗೃಹ ಸಚಿವರು ನೊಂದ ಕುಟುಂಬಗಳಿಗೆ ಶೀಘ್ರವಾಗಿ ಮನೆ ಕಟ್ಟಿಕೊಡುವ ಭರವಸೆ ನೀಡಿದ್ದು, ನೊಂದವರ ಪರವಾಗಿ ಶ್ರೀ ಮಠವು ಸದಾ ಇರುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: WhatsApp Exit India: ವಾಟ್ಸ್ಯಾಪ್‌ ಜೊತೆಗೇ ಭಾರತ ತೊರೆಯಲಿವೆಯೇ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ?

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೊಡ್ಲಹಳ್ಳಿ ಅಶ್ವತ್ಥ ನಾರಾಯಣ, ಅರಕೆರೆ ಶಂಕರ್, ಮುಖಂಡರುಗಳಾದ ಮಹಾಲಿಂಗಪ್ಪ, ಗ್ರಾ.ಪಂ. ಅಧ್ಯಕ್ಷ ನಾಗರಾಜು, ಜಯರಾಂ. ದೇವರಾಜು, ರಘು, ದರ್ಶನ್, ಕೆಂಪರಾಜು, ಶಿವಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Exit mobile version