ತುಮಕೂರು : ಗ್ರಾಮಾಂತರದ (Tumkuru News) ಹೊಸಹಳ್ಳಿ ಸಮೀಪವಿರುವ ಗೌರಿ ಅಕ್ಷಯ ಜಲ್ಲಿ ಕ್ರಷರ್‌ನ ಕ್ವಾರಿಯಲ್ಲಿ ಕೆಲಸ ಮಾಡುವಾಗ ಕಾರ್ಮಿಕರೊಬ್ಬರು ಆಯತಪ್ಪಿ ಮೇಲಿಂದ ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕಾರ್ಮಿಕ ಈರಣ್ಣ (55) ಮೃತ ದುರ್ದೈವಿಯಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಬಿದರಹಳ್ಳಿ ಮೂಲದ ಈರಣ್ಣ ಬಂಡೆಗೆ ರಂಧ್ರ ಕೊರೆಯುವಾಗ ಆಯತಪ್ಪಿ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ನಾಲ್ಕೈದು ತಿಂಗಳ ಹಿಂದೆಯೂ ಈ ಕ್ವಾರಿಯಲ್ಲಿ ಕಾರ್ಮಿಕರೊಬ್ಬರು ಬಿದ್ದು ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಈಗ ಮತ್ತೊಂದು ಘಟನೆ ನಡೆದಿದೆ.
ಇದನ್ನೂ ಓದಿ | Lift Collapses | ಗುಜರಾತ್ನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್ ಕುಸಿತ; 7 ಕಾರ್ಮಿಕರು ಸಾವು
ಹಗ್ಗ ಕಟ್ಟಿಕೊಂಡು ಕಡಿದಾದ ಬೆಟ್ಟ ಹತ್ತಿ ಬಂಡೆಗೆ ಕಾರ್ಮಿಕರು ಕೊರೆಯುತ್ತಾರೆ. ಹೀಗೆ ಬಂಡೆಗೆ ರಂಧ್ರ ಕೊರೆಯುವಾಗ ಆಯತಪ್ಪಿ ಬಿದ್ದು ಈರಣ್ಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕ್ವಾರಿ ಮಾಲಿಕರು ಸುರಕ್ಷಿತ ಕ್ರಮಗಳನ್ನು ಕೈಗೊಳ್ಳದ ಪರಿಣಾಮ ಇಂಥ ಘಟನೆಗಳು ನಡೆಯುತ್ತಿವೆ. ಪದೇ ಪದೆ ಇಂಥ ಘಟನೆ ನಡೆದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ಇದನ್ನೂ ಓದಿ | Tumkur accident | ಶಿರಾ ಬಳಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ, 9 ಕಾರ್ಮಿಕರ ಸಾವು