ಶಿರಾ: ಆಕಸ್ಮಿಕವಾಗಿ ಬೆಂಕಿ (Accidental Fire) ಹೊತ್ತಿಕೊಂಡ ಪರಿಣಾಮ ಸುಮಾರು ನಾಲ್ಕು ಗುಡಿಸಲುಗಳು (Four Huts) ಸಂಪೂರ್ಣವಾಗಿ ಸುಟ್ಟು ಭಸ್ಮವಾದ ಘಟನೆ ತಾಲೂಕಿನ ಕಳ್ಳಂಬೆಳ್ಖ ಹೋಬಳಿ ದೊಡ್ಡ ಸೀಬಿ ಗ್ರಾಮದಲ್ಲಿ ಸೋಮವಾರ ಜರುಗಿದೆ.
ದೊಡ್ಡ ಸೀಬಿ ಗ್ರಾಮದ ರಮೇಶ್, ರಂಗನಾಥ, ಲೋಕೇಶ್, ಚಿಕ್ಕ ಮಣಿ, ಮಾರಕ್ಕ ಎಂಬುವರಿಗೆ ಸೇರಿದ ಗುಡಿಸಲುಗಳಿಗೆ ಬೆಂಕಿ ಅನಾಹುತ ಸಂಭವಿಸಿದ್ದು, ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಬೆಂಕಿ ಹೊತ್ತಿಕೊಂಡ ತಕ್ಷಣ ಗುಡಿಸಲಿನಿಂದ ಹೊರಗೆ ಓಡಿ ಬಂದಿದ್ದರಿಂದ ಯಾರಿಗೂ ಗಾಯಗಳಾಗಿಲ್ಲ. ವಿಷಯ ತಿಳಿದ ಕೂಡಲೇ ವಾಹನಗಳಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.
ಇದನ್ನೂ ಓದಿ: Shreyas Iyer : ವಿಶ್ವ ಕಪ್ ತಂಡ ಆಯ್ಕೆಯ ಬಗ್ಗೆ ಗೌತಮ್ ಗಂಭೀರ್ ಗುಡುಗು; ಅವರ ಆಕ್ಷೇಪವೇನು?
ಬೆಳಿಗ್ಗೆ 10.30ರ ಸುಮಾರಿಗೆ ಗುಡಿಸಲಿನಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿತು. ತೆಂಗಿನ ಗರಿ ಮತ್ತು ಪ್ಲಾಸ್ಟಿಕ್‌ನಿಂದ ನಿರ್ಮಾಣಗೊಂಡಿದ್ದ ಗುಡಿಸಲುಗಳು ಕೆಲವೇ ನಿಮಿಷಗಳಲ್ಲಿ ಉರಿದು ಹೋದವು, ಜತೆಗೆ ಬೆಂಕಿಗೆ ಗುಡಿಸಲಿನಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದೆ, ಗುಡಿಸಲಿನ ಇದ್ದ ವಸ್ತು, ಬಟ್ಟೆಗಳೆಲ್ಲವೂ ಬೆಂಕಿಗೆ ಆಹುತಿಯಾಗಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಕಳ್ಳಂಬೆಳ್ಖ ಠಾಣೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.