Site icon Vistara News

Tumkur News: ಶಿರಾದಲ್ಲಿ ನಡು ರಸ್ತೆಯಲ್ಲೇ ಹೊತ್ತಿ ಉರಿದ ಕಾರು

car caught fire in the middle of the road in Shira The video is viral

ಶಿರಾ: ಚಲಿಸುತ್ತಿದ್ದ ಕಾರಿನಲ್ಲಿ (Car) ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕೆಲಹೊತ್ತಿನಲ್ಲೇ ಸುಟ್ಟು ಕರಕಲಾದ ಘಟನೆ ನಗರದ ತುಮಕೂರು ರಸ್ತೆಯ ಪೆಟ್ರೋಲ್‌ ಬಂಕ್‌ವೊಂದರ ಮುಂಭಾಗ ಶುಕ್ರವಾರ ಮಧ್ಯಾಹ್ನ (Tumkur News) ಜರುಗಿದೆ.

ಕಾರಿನಲ್ಲಿ ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ಗಮನಿಸಿ ಕೂಡಲೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಹೊರಗಡೆ ಬಂದಿದ್ದಾರೆ. ಇದಾದ ಬಳಿಕ ಕೆಲ ಹೊತ್ತಿನಲ್ಲೇ ಕಾರು ಸುಟ್ಟು ಕರಕಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Home Remedies For Sunburn: ಬಿಸಿಲಿಗೆ ಚರ್ಮದ ಅಂದಗೆಟ್ಟಿದೆಯೆ? ಇಲ್ಲಿದೆ ಮನೆಮದ್ದು!

ಘಟನೆಯ ಹಿನ್ನಲೆಯಲ್ಲಿ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ಅಷ್ಟರೊಳಗೆ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ. ಕಾರು ಹೊತ್ತಿ ಉರಿದ ವಿಡಿಯೊ ಇದೀಗ ಸಾಮಾಜಿಕ ಜಾಲಗಳಲ್ಲಿ ವೈರಲ್ ಆಗಿದೆ.

Exit mobile version