ಕೊರಟಗೆರೆ: ತಾಲೂಕಿನ ಚನ್ನರಾಯನ ದುರ್ಗಾ ಹೋಬಳಿಯ ತೋವಿನಕೆರೆ ಗ್ರಾಮದ ಸಾರ್ವಜನಿಕ ಗ್ರಂಥಾಲಯದ ಆವರಣದಲ್ಲಿ ಶುಕ್ರವಾರ ಸಿರಿಧಾನ್ಯ ಖಾದ್ಯಗಳ (Cereal Dishes) ಪ್ರದರ್ಶನ ಮತ್ತು ಮಾರಾಟ ಮೇಳವನ್ನು (Tumkur News) ಹಮ್ಮಿಕೊಳ್ಳಲಾಗಿತ್ತು.
ತೋವಿನಕೆರೆ ಗ್ರಾಮ ಪಂಚಾಯಿತಿ, ಹಳ್ಳಿಸಿರಿ, ಸ್ವಸಹಾಯ ಮತ್ತು ಸ್ತ್ರೀ ಶಕ್ತಿ ಸಂಘಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನು ತೋವಿನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಮ್ಮ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ, ಬಳಿಕ ಮಾತನಾಡಿದರು.
ಇದನ್ನೂ ಓದಿ: KAS: ಕೆಎಎಸ್ ನೇಮಕಕ್ಕೆ ದಿನಗಣನೆ ಶುರು; 504 ಹುದ್ದೆಗಳಿಗೆ ಬದಲಾಗಿ 384 ಹುದ್ದೆಗಳಿಗೆ ನೇಮಕ
ಸಿರಿಧಾನ್ಯಗಳ ಮಸಾಲೆ ರೊಟ್ಟಿ, ನವಣೆ ಪಾಯಾಸ, ರಾಗಿ ಲಡ್ಡು, ರಾಗಿ ಖಾರ, ಹಲಸಿನ ಪಲಾವ್, ಹಲಸಿನ ಮಂಚೂರಿ ಸೇರಿದಂತೆ ಬಗೆಬಗೆಯ ಖಾದ್ಯಗಳನ್ನು ಮೇಳ ನಡೆದ ಸ್ಥಳದಲ್ಲೇ ಮಹಿಳೆಯರು ತಯಾರಿಸಿ, ಬಳಿಕ ಪ್ರದರ್ಶನಕ್ಕಿಡಲಾಗಿತ್ತು.
ಈ ವೇಳೆ ಗ್ರಾಹಕರು ಖಾದ್ಯಗಳನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು. ತಾಲೂಕಿನ ತೋವಿನಕೆರೆ, ಸಿದ್ದರಬೆಟ್ಟ , ಕುರಂಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಿಳಾ ಸದಸ್ಯರು ಮೇಳದಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: Tarini Movie Kannada: ರಾಜಸ್ಥಾನ್ ಚಲನ ಚಿತ್ರೋತ್ಸವದಲ್ಲಿ ಪ್ರಶಸ್ತಿ ಗೆದ್ದ “ತಾರಿಣಿ”
ಕಾರ್ಯಕ್ರಮದಲ್ಲಿ ತೋವಿನಕೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶೈಲಜಾ, ಕಾರ್ಯದರ್ಶಿ ಸುಮಾ, ಸದಸ್ಯರಾದ ಸುಜಾತ, ಗಂಗಾಣಿ, ರಮೇಶ್ , ಸುಬ್ರಮಣ್ಯ ಹಾಗೂ ಮಂಜುನಾಥ, ರಾಘವೇಂದ್ರ, ಜಗದೀಶ್, ಸುನೀತಾ , ಲಲಿತಮ್ಮ, ಟಿ.ಎಲ್. ಸಿದ್ದಗಂಗಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.