ಶಿರಾ: ನಗರಸಭೆಯಿಂದ ಬಾಡಿಗೆ ಪಡೆದ ವಾಣಿಜ್ಯ ಮಳಿಗೆಗಳಿಗೆ ಎಷ್ಟೇ ಗಡುವು ನೀಡಿದರೂ ನಿರ್ಲಕ್ಷ್ಯ ವಹಿಸಿ ಬಾಡಿಗೆ (Rent) ಪಾವತಿಸದ ಬಾಡಿಗೆದಾರರ ಅಂಗಡಿಗಳಿಗೆ (Shops) ನಗರಸಭೆ ಆಯುಕ್ತ ರುದ್ರೇಶ್ ಅವರು ಮಂಗಳವಾರ ಬೀಗ ಜಡಿದಿದ್ದಾರೆ.
ನಗರಸಭೆ ವತಿಯಿಂದ ನಿರ್ಮಾಣ ಮಾಡಿರುವ ವಾಣಿಜ್ಯ ಮಳಿಗೆಗಳಲ್ಲಿ ಬಾಡಿಗೆ ವಸೂಲಿಗಾಗಿ ಮಂಗಳವಾರ ಕಾರ್ಯಾಚರಣೆ ನಡೆಸಿದ ನಗರಸಭೆ ಆಯುಕ್ತರು, ಪ್ರಾರಂಭದಿಂದಲೂ ಬಾಡಿಗೆ ಕಟ್ಟದೆ ಹೆಚ್ಚಿನ ಬಾಕಿ ಉಳಿಸಿಕೊಂಡಿದ್ದ ಸುಮಾರು 67 ಅಂಗಡಿಗಳಿಗೆ ಬೀಗ ಹಾಕಿಸಿದರು.
ಇದನ್ನೂ ಓದಿ: CM Siddaramaiah: ಬಸವೇಶ್ವರ ಏತ ನೀರಾವರಿ ಯೋಜನೆ: 2024ರ ಸೆಪ್ಟೆಂಬರ್‌ನೊಳಗೆ ಕಾಮಗಾರಿ ಪೂರ್ಣಗೊಳಿಸಿ ಎಂದ ಸಿಎಂ
ನಗರದ ಖಾಸಗಿ ಬಸ್ ನಿಲ್ದಾಣದಲ್ಲಿನ ವಾಣಿಜ್ಯ ಸಂಕಿರ್ಣದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿ ಸಾರ್ವಜನಿಕವಾಗಿ ಹರಾಜು ಪ್ರಕ್ರಿಯೆ ನಡೆಸಿ ಬಾಡಿಗೆಗೆ ನೀಡಲಾಗಿತ್ತು, ಆದರೆ ಬಾಡಿಗೆಗೆ ಪಡೆದಿರುವವರು ಬಾಡಿಗೆಯನ್ನು ಪಾವತಿಸಿದೇ ನಿರ್ಲಕ್ಷ್ಯ ವಹಿಸಿದ್ದರು. ಹಲವು ಬಾರಿ ಎಚ್ಚರಿಕೆಯ ನೋಟಿಸ್ ಕೊಟ್ಟರೂ ಬಾಡಿಗೆ ಕಟ್ಟಿರಲಿಲ್ಲ. ಈ ಹಿನ್ನಲೆಯಲ್ಲೆ ಆಯುಕ್ತರು, ನಗರಸಭೆ ಸಿಬ್ಬಂದಿಯೊಂದಿಗೆ ಬಾಡಿಗೆ ವಸೂಲಿಯ ಕಾರ್ಯಾಚರಣೆ ನಡೆಸಿದರು.
ಕಾರ್ಯಾಚರಣೆ ವೇಳೆ 67ಕ್ಕೂ ಹೆಚ್ಚು ಬಾಡಿಗೆ ಕಟ್ಟದ ಅಂಗಡಿಗಳನ್ನು ಬೀಗ ಹಾಕಿಸಿದರು.
ಇದನ್ನೂ ಓದಿ: Lakshmi Hebbalkar: ಇಲಾಖೆಗೆ ಕೆಟ್ಟ ಹೆಸರು ಬರದಂತೆ ಕಾರ್ಯ ನಿರ್ವಹಿಸಿ: ಲಕ್ಷ್ಮೀ ಹೆಬ್ಬಾಳ್ಕರ್
ಬಾಡಿಗೆ ವಸೂಲಿ ಕಾರ್ಯಾಚರಣೆಯಲ್ಲಿ ನಗರಸಭೆಯ ಕಂದಾಯ ಇಲಾಖೆಯ ನೌಕರರು, ಸಿಬ್ಬಂದಿ ಪಾಲ್ಗೊಂಡಿದ್ದರು.