ಗುಬ್ಬಿ: ತಾಲೂಕಿನ ಕಾಳಘಟ್ಟಮ್ಮ ದೇವಾಲಯದಲ್ಲಿ ಮಂಗಳವಾರ ದಿಗ್ವಿಜಯ ಸಿನಿಮಾ ತಂಡದಿಂದ (Digvijaya Movie Team) ವಿಶೇಷ ಪೂಜೆಯನ್ನು ಸಲ್ಲಿಸಿ, ರೈತ ಮುಖಂಡರೊಂದಿಗೆ (farmer leaders) ಚರ್ಚೆ (Discussion) ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ರೈತ ಸಂಘದ ಅಧ್ಯಕ್ಷ ವೆಂಕಟೇಗೌಡ, ಕಮರ್ಷಿಯಲ್ ಚಿತ್ರಗಳ ನಡುವೆ ರೈತರ ಪರವಾಗಿ ದಿಗ್ವಿಜಯ ಎಂಬ ಸಿನಿಮಾವನ್ನು ಗುಬ್ಬಿ ತಾಲೂಕಿನ ಯುವ ನಟ ಜಯಪ್ರಭು ಲಿಂಗಾಯತ್ ನಟಿಸಿದ್ದು, ರೈತರ ಆತ್ಮಹತ್ಯೆ ತಡೆಯಲು ಸರ್ಕಾರ ಏನೆಲ್ಲಾ ಕ್ರಮ ವಹಿಸಬೇಕು. ರೈತರ ಸುಖ ಜೀವನಕ್ಕೆ ಏನೆಲ್ಲ ಮಾಡಬೇಕು ಎಂಬ ಚಿತ್ರವನ್ನು ನಿರ್ಮಿಸುವ ಮೂಲಕ ರೈತರ ಪರವಾಗಿ ಚಿತ್ರ ನಿರ್ಮಾಣ ಮಾಡಿದ್ದಾರೆ.
ಈ ಸಿನಿಮಾದ ಯಶಸ್ವಿಗೆ ಎಲ್ಲ ರೈತ ಮುಖಂಡರು, ರೈತನ ನಾಯಕರು, ರೈತರು ಚಿತ್ರವನ್ನು ಚಲನಚಿತ್ರ ಮಂದಿರದಲ್ಲಿ ವೀಕ್ಷಿಸಿ, ಆ ಸಿನಿಮಾ ತಂಡಕ್ಕೆ ಶುಭ ಹಾರೈಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: Koppala News: ಅಳಿವಿನಂಚಿನಲ್ಲಿರುವ ಅಪರೂಪದ 60 ವರ್ಷದ ಆಮೆ ರಕ್ಷಿಸಿದ ವಿದ್ಯಾರ್ಥಿಗಳು
ಯುವ ಚಿತ್ರನಟ ಜಯಪ್ರಭು ಆರ್. ಲಿಂಗಾಯತ್ ಮಾತನಾಡಿ, ಈ ಸಿನಿಮಾದಲ್ಲಿ ನಾನೊಬ್ಬ ಪತ್ರಿಕಾ ವರದಿಗಾರನಾಗಿ ಕೆಲಸ ಮಾಡುವ ಮೂಲಕ ರೈತರ ಪರ ಕಾಳಜಿ, ರೈತರ ಭವಿಷ್ಯದ ಬಗ್ಗೆ ಹೇಗೆಲ್ಲಾ ಸರ್ಕಾರಗಳು ಮಾನದಂಡಗಳನ್ನು ಅನುಸರಿಸಬೇಕು, ಅವರಿಗೆ ಹೇಗೆಲ್ಲ ಸಹಕಾರ ನೀಡಬೇಕು ಎಂಬ ವಿಶ್ಲೇಷಣೆಯನ್ನು ಮಾಡಲಾಗಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು, ಚಿತ್ರ ಪ್ರೇಮಿಗಳು ಕುಟುಂಬ ಸಮೇತರಾಗಿ ಆಗಮಿಸಿ ಈ ಚಿತ್ರವನ್ನು ನೋಡಬಹುದಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Drought in Karnataka : ರಾಜ್ಯದಲ್ಲಿ 42 ಲಕ್ಷ ಹೆಕ್ಟೇರ್ ಬೆಳೆ ಹಾನಿ; 6 ಸಾವಿರ ಕೋಟಿಗಾಗಿ ಕೇಂದ್ರಕ್ಕೆ ಮೊರೆ
ಈ ಸಂದರ್ಭದಲ್ಲಿ ಮುಖಂಡರಾದ ಜಗದೀಶ್, ಗುರು ಚೆನ್ನಬಸವಯ್ಯ, ಸಿ.ಟಿ. ಕುಮಾರ್, ವೆಂಕಟಪ್ಪ ಹಾಗೂ ವಿಜಯ್ ಕುಮಾರ್, ರಾಮಮಣಿ ಪರಮಶಿವಯ್ಯ ರೇಣುಕಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.