ಗುಬ್ಬಿ: ತಾಲೂಕಿನ ಹಾಗಲವಾಡಿ ಹೋಬಳಿಯ ಅರಳಕಟ್ಟೆ ಗ್ರಾಮದ ರೈತರ (Farmers) ಜಮೀನಿಗೆ ಜೆಡಿಎಸ್‌ನ (JDS) ಬರ ಅಧ್ಯಯನ ತಂಡ (Drought Study Team) ಭೇಟಿ ನೀಡಿ, ರೈತರ ಸಮಸ್ಯೆಗಳನ್ನು ಆಲಿಸಲಾಯಿತು.
ಈ ಸಂದರ್ಭದಲ್ಲಿ ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಮಾತನಾಡಿ, ಮಳೆ ಇಲ್ಲದೆ ಬರಗಾಲ ಬಂದಿದ್ದರೂ ಸಹ ಕಾಂಗ್ರೆಸ್ ಸರ್ಕಾರ ಇದುವರೆಗೂ ರೈತರ ಜಮೀನುಗಳಿಗೆ ಹೋಗಿ ಅವರ ಸಮಸ್ಯೆಗಳನ್ನು ಆಲಿಸಿಲ್ಲ, ಹಾಗಾಗಿ ಜೆಡಿಎಸ್ ವರಿಷ್ಟರ ಸೂಚನೆಯ ಮೇರೆಗೆ ನಾವು ಖುದ್ದು ರೈತರ ಜಮೀನಿಗೆ ತೆರಳಿ, ಇಲ್ಲಿನ ಸಮಸ್ಯೆಗಳನ್ನು ನೇರವಾಗಿ ಕೇಂದ್ರ ಸರ್ಕಾರಕ್ಕೆ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದು, ಇಡೀ ಜಿಲ್ಲಾದ್ಯಂತ ಪ್ರವಾಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: Children’s day: ನ. 14ರಂದು ಈ ಬಾರಿ ರಜೆ, ಹಾಗಿದ್ದರೆ ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಯಾವಾಗ?
ಜೆಡಿಎಸ್ ಮುಖಂಡ ಬಿ.ಎಸ್. ನಾಗರಾಜು ಮಾತನಾಡಿ, ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದರೂ ಸಹ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗದ ಕಾಂಗ್ರೆಸ್ ಸರ್ಕಾರ, ರೈತರಿಗೆ ಯಾವುದೇ ರೀತಿಯ ಉತ್ತಮ ಯೋಜನೆಗಳನ್ನು ರೂಪಿಸಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ: Champions Trophy : ಇನ್ನು ಮುಂದೆ ಚಾಂಪಿಯನ್ಸ್ ಟ್ರೋಫಿಯಲ್ಲೂ ಟಿ20 ಪಂದ್ಯಗಳು
ಈ ಸಂದರ್ಭದಲ್ಲಿ ಬರ ಅಧ್ಯಯನ ತಂಡದ ತಿಪಟೂರು ಶಾಂತಕುಮಾರ್, ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕ ವೀರಯ್ಯ, ಕುಣಿಗಲ್ ಜಗದೀಶ್, ಕಳ್ಳಿಪಾಳ್ಯ ಲೋಕೇಶ್, ರೈತ ಮುಖಂಡರಾದ ಪಾಂಡುರಂಗಯ್ಯ, ಗೋವಿಂದರಾಜು, ಮಂಜುನಾಥ್, ಕೃಷ್ಣ ಜಟ್ಟಿ, ಲಿಂಗರಾಜು ಸೇರಿದಂತೆ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.