ಕೊರಟಗೆರೆ: ತಾಲೂಕಿನ ವಜ್ಜನಕುರಿಕೆ ಪಶು ಚಿಕಿತ್ಸಾಲಯ ವ್ಯಾಪ್ತಿಯ ಪುಟ್ಟಸಂದ್ರ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಹಾಲು ಉತ್ಪಾದಕರ ಸಹಕಾರ ಸಂಘ ಪುಟ್ಟಸಂದ್ರ ಹಾಗೂ ಗ್ರಾಮ ಪಂಚಾಯಿತಿ ಪಾತಗಾನಹಳ್ಳಿ ಇವರ ಸಹಯೋಗದಲ್ಲಿ ಬುಧವಾರ ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.
ಪಾತಗಾನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆಜಯಮ್ಮ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಒಟ್ಟು 38 ಮಿಶ್ರತಳಿ ಹೆಣ್ಣುಕರುಗಳು ಭಾಗವಹಿಸಿದ್ದವು. ಭಾಗವಹಿಸಿದ ಕರುಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಿ (0-6 ತಿಂಗಳು ಮತ್ತು 6-12 ತಿಂಗಳ ಒಳಗೆ) ಉತ್ತಮವಾಗಿ ಸಾಕಿದ ಮಿಶ್ರತಳಿ ಹೆಣ್ಣುಕರುಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಇದನ್ನೂ ಓದಿ: Vijayanagara News: ಹಂಪಿ ಕನ್ನಡ ವಿವಿ ನುಡಿಹಬ್ಬ; ಮೂವರಿಗೆ ನಾಡೋಜ ಗೌರವ ಪ್ರದಾನ
ಭಾಗವಹಿಸಿದ ಎಲ್ಲಾ ಕರುಗಳಿಗೆ ಸಮಾಧಾನಕರ ಬಹುಮಾನದ ಜತೆಗೆ ಜಂತುನಾಶಕ ಮಾತ್ರೆ, ಲಿವರ್ ಟಾನಿಕ್,ವಿಟಾಮಿನ್ ಟಾನಿಕ್ ಹಾಗೂ ಸಮತೋಲಿತ ಖನಿಜ ಮಿಶ್ರಣವನ್ನು ವಿತರಿಸಲಾಯಿತು. ಭಾಗವಹಿಸಿದ್ದ ರೈತರಿಗೆ ಹೈನುಗಾರಿಕೆ, ಮಿಶ್ರತಳಿ ಕರುಗಳ ಸಾಕಾಣಿಕೆ ಮತ್ತು ಮೇವು ಪೌಷ್ಟೀಕರಣದ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಪುಟ್ಟಸಂದ್ರದ ಅಧ‍್ಯಕ್ಷ ಪಿ.ಕೆ. ಜಯರಾಮಯ್ಯ, ಉಪಾಧ್ಯಕ್ಷ ಪಿ.ಎಂ. ಮಂಜುನಾಥ್, ಸದಸ್ಯರಾದ ವೈ.ಆರ್ ಸುರೇಶ್, ಪಿ.ಕೆ. ಶ್ರೀನಿವಾಸ್, ಪಿ.ಕೆ. ಗುರುರಾಜ್, ಪಿ.ಆರ್. ಪಾಲನೇತ್ರಯ್ಯ, ಪಿ.ಎಸ್. ಶಿವಾನಂದಯ್ಯ, ಪಿ.ಎನ್. ನಂಜುಂಡಯ್ಯ, ಪಿ.ಎಚ್. ರಾಮಮೂರ್ತಿ, ಕಾರ್ಯದರ್ಶಿಗಳು, ಹಾಲು ಪರೀಕ್ಷಕರು ಪಾಲ್ಗೊಂಡಿದ್ದರು.
ಇದನ್ನೂ ಓದಿ: Training for Youth: ಸ್ವಯಂ ಉದ್ಯೋಗ ನಿರ್ವಹಿಸುತ್ತೀರಾ? ಇಲ್ಲಿದೆ ತರಬೇತಿ; ಈಗಲೇ ಹೆಸರು ನೋಂದಾಯಿಸಿ
ಈ ಸಂದರ್ಭದಲ್ಲಿ ಕೊರಟಗೆರೆ ತಾಲೂಕಿನ ಮುಖ‍್ಯ ಪಶುವೈದ್ಯಾಧಿಕಾರಿ(ಆಡಳಿತ) ಡಾ.ಎಚ್.ಎನ್.ನಾಗಭೂಷಣ , ವಿಸ್ತರಣಾಧಿಕಾರಿ ಡಾ. ಜಿ.ಸಿ ಉಷಾರಾಣಿ, ಪಶುವೈದ್ಯಾಧಿಕಾರಿ ಡಾ.ಕೆ ಶ್ರೀಧರ್, ಡಾ. ಮಂಜುನಾಥ್ ಎನ್.ಎಸ್., ಡಾ. ಆರ್. ಹಿತೈಶಿನಿ, ಡಾ. ನಾಗಭೂಷಣ, ಡಾ. ಮೋಹನ್ ಕುಮಾರ್, ಡಾ.ಮಧುಸೂದನ್, ಡಾ. ಮೆಹಬೂಬ್ ಉನ್ನೀಸಾ, ಮತ್ತು ಪಶುಪಾಲನಾ ಇಲಾಖೆಯ ಸಿಬ್ಬಂದಿ ಮತ್ತು ಇತರರಿದ್ದರು.