ಶಿರಾ: ನಗರದಲ್ಲಿ ಸುಗಮ ಸಂಚಾರ ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಫುಟ್‌ಪಾತ್ ಒತ್ತುವರಿ (Footpath Encroachment) ತೆರವಿಗೆ ನಗರ ಪೊಲೀಸರು (Police) ವಿಶೇಷ ಅಭಿಯಾನವನ್ನು ಆರಂಭಿಸಿದರು.
ಶಿರಾ ನಗರ ಸಿಪಿಐ ಮಂಜುನಾಥ ಗೌಡ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ನಗರ ಪ್ರದೇಶಗಳ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ವಹಿವಾಟು ನಡೆಸದಂತೆ ವ್ಯಾಪಾರಿಗಳಿಗೆ ಅರಿವು ಮೂಡಿಸಲಾಯಿತು.
ಬೀದಿ ಬದಿಯ ವ್ಯಾಪಾರಿಗಳು ಫುಟಪಾತ್‌ನಲ್ಲೇ ವ್ಯಾಪಾರ ನಡೆಸುತ್ತಿರುವುದರಿಂದ ಪಾದಚಾರಿಗಳಿಗೆ, ಟ್ರಾಫಿಕ್ ನಿಧಾನಗತಿ ಉಂಟಾಗುತ್ತಿದೆ, ಅಷ್ಟೇ ಅಲ್ಲದೆ, ಪಾದಚಾರಿಗಳು ರಸ್ತೆಯಲ್ಲಿ ಸಂಚರಿಸುವ ಸಮಯದಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಜತೆಗೆ ವಾಹನ ನಿಲುಗಡೆಗೂ ಸ್ಥಳಾವಕಾಶವಿಲ್ಲದೆ ಸಾರ್ವಜನಿಕ ರಸ್ತೆಯಲ್ಲಿಯೇ ನಿಲ್ಲಿಸಲಾಗುತ್ತಿರುವುದರಿಂದ ಟ್ರಾಫಿಕ್ ತೊಂದರೆಯಾಗುತ್ತಿತ್ತು.
ಇದನ್ನೂ ಓದಿ: Yuzvendra Chahal : ವಿಶ್ವ ಕಪ್ನಲ್ಲಿ ಸಿಗದ ಸ್ಥಾನ, ಟೆಸ್ಟ್ ಕ್ರಿಕೆಟ್ನತ್ತ ಗಮನಹರಿಸಿದ ಲೆಗ್ ಸ್ಪಿನ್ನರ್
ರಸ್ತೆಯ ಎರಡು ಇಕ್ಕೆಲಗಳಲ್ಲಿ ಸಣ್ಣಪುಟ್ಟ ವ್ಯಾಪಾರಸ್ಥರು, ಅಂಗಡಿ ಮುಂಗಟ್ಟುಗಳ ಸಾಮಗ್ರಿ, ತಳ್ಳುಗಾಡಿ ಇಡುವ ಸ್ಥಳವಾಗಿ ಮಾರ್ಪಟ್ಟಿತ್ತು. ಇದರಿಂದ ಪಾದಚಾರಿಗಳಿಗೆ, ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು.
ಇದನ್ನೂ ಓದಿ: Tips for Healthy Travel: ಪ್ರವಾಸ ಮಾಡುತ್ತಿದ್ದೀರಾ? ಆಹಾರದ ಸಮತೋಲನಕ್ಕಾಗಿ ಹೀಗೆ ಮಾಡಿ
ಈ ವೇಳೆ ಶಿರಾ ನಗರ ಸಿಪಿಐ ಮಂಜುನಾಥ ಗೌಡ ಮಾತನಾಡಿ, ವ್ಯಾಪಾರಸ್ಥರು ನಿಗದಿತ ಸ್ಥಳಗಳಲ್ಲಿ ತಮ್ಮ ವ್ಯಾಪಾರ ವಹಿವಾಟು ನಡೆಸಬೇಕು, ಪುಟ್‌ಪಾತ್‌ಗಳಲ್ಲಿ ವ್ಯಾಪರ ನಡೆಸುತ್ತಿರುವುದರಿಂದ ಪಾದಚಾರಿಗಳಿಗೆ, ವಾಹನಗಳ ಸುಗಮ ಸಂಚಾರಕ್ಕೆ ತೀವ್ರ ಸಮಸ್ಯೆ ಉಂಟಾಗುತ್ತಿದೆ. ಇದೇ ರೀತಿ ಮುಂದುವರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.