Site icon Vistara News

Tumkur News: ಬೇಟೆಗಾರರ ಬಂಧನ; 7 ಕಾಡು ಹಂದಿಗಳ ರಕ್ಷಣೆ

Four accused of wild boar poachers arrested 7 Protection of wild boars

ಕೊರಟಗೆರೆ: ಸುರಪುರ ಅರಣ್ಯದಲ್ಲಿ ಅಕ್ರಮವಾಗಿ ಕಾಡು ಹಂದಿಗಳನ್ನು (Wild Boars) ಬೇಟೆಯಾಡಿ ಯಾದಗಿರಿಯಿಂದ ಕೊರಟಗೆರೆ ಪಟ್ಟಣಕ್ಕೆ ತಂದು ಮಾರಾಟಕ್ಕೆ ಯತ್ನಿಸುವ ವೇಳೆ ಅರಣ್ಯ ಇಲಾಖೆಯ ರವಿ ಸಿ. ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ, 4 ಜನ ಆರೋಪಿಗಳನ್ನು ಬಂಧಿಸಿ, ಏಳು ಕಾಡು ಹಂದಿಗಳ ರಕ್ಷಣೆ ಮಾಡುವಲ್ಲಿ (Tumkur News) ಯಶಸ್ವಿಯಾಗಿದೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಧೋಲ್ ಪೇಟೆಯ ಸುರೇಶ (28), ಕೊಪ್ಪಳ ತಾಲೂಕಿನ ಗಾಂಧಿನಗರದ ಮಂಜುನಾಥ (28), ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ರಂಗಮಪೇಟೆಯ ಪರಶುರಾಮ (22), ಕೊರಟಗೆರೆ ಪಟ್ಟಣದ ವಿನಾಯಕ ನಗರದ ಮಾರುತಿ (39) ಬಂಧಿತರು. ಇನ್ನೋರ್ವ ಆರೋಪಿ ದೋಲ್ ಪೇಟೆಯ ಭೀಮಾ (38) ಎಂಬುವವನ ಶೋಧ ಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ: IPL 2024 : ಐಪಿಎಲ್​ ಪಂದ್ಯಕ್ಕೆ ನೀರು ಎಲ್ಲಿಂದ? ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನೋಟಿಸ್​

ಪಟ್ಟಣದ ವಿನಾಯಕ ನಗರದ ಮಾರುತಿ ಎಂಬಾತನ ಅಂಗಡಿಯಲ್ಲಿ ಮಾರಾಟಕ್ಕೆ ಯತ್ನಿಸುವ ವೇಳೆ ಅರಣ್ಯ ಇಲಾಖೆ ದಾಳಿ ನಡೆಸಿ ನಾಲ್ಕು ಜನ ಆರೋಪಿಗಳು. ಬೊಲೆರೋ ವಾಹನ ವಶಕ್ಕೆ ಪಡೆದು ಏಳು ಕಾಡು ಹಂದಿಗಳನ್ನು ರಕ್ಷಣೆ ಮಾಡಿದ್ದಾರೆ. ಕೊರಟಗೆರೆ ಅರಣ್ಯ ಇಲಾಖೆಯಲ್ಲಿ ಐದು ಜನ ಆರೋಪಿಗಳ ಮೇಲೆ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Youngest Billionaire: 19 ವರ್ಷದ ವಿದ್ಯಾರ್ಥಿನಿ ವಿಶ್ವದ ಕಿರಿಯ ಬಿಲಿಯನೇರ್ ಆಗಿದ್ದು ಹೇಗೆ? ಇಲ್ಲಿದೆ ಮನಿ ಸೀಕ್ರೆಟ್​​

ತುಮಕೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ ಎಚ್., ಮಧುಗಿರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿಕಾರ್ಜುನ್ ಅವರ ಮಾರ್ಗದರ್ಶನದಲ್ಲಿ ಕೊರಟಗೆರೆ ವಲಯ ಅರಣ್ಯ ಅಧಿಕಾರಿ ರವಿ ಸಿ., ಉಪವಲಯ ಅರಣ್ಯಾಧಿಕಾರಿ ದಿಲೀಪ್ ಕುಮಾರ್, ಸಿಬ್ಬಂದಿಗಳಾದ ವಿಜಯಕುಮಾರ್, ಮಂಜುನಾಥ್ , ಚಾಂದು ಪಾಷ, ಕಾವ್ಯಶ್ರೀ, ನರಸರಾಜು, ಬಾಬು ಸೇರಿದಂತೆ ಇತರರು ದಾಳಿಯಲ್ಲಿ ಪಾಲ್ಗೊಂಡಿದ್ದರು.

Exit mobile version