ಗುಬ್ಬಿ: ತಾಲೂಕಿನ ಹೊದಲೂರು ಗ್ರಾಮದ ಶ್ರೀ ಸಿದ್ದರಾಮೇಶ್ವರ ಪ್ರೌಢಶಾಲೆಯಲ್ಲಿ ಚಾಲುಕ್ಯ ಆಸ್ಪತ್ರೆಯ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ (Free Health Checkup Camp) ಮತ್ತು ರಕ್ತದ ಗುಂಪು ಪರಿಚಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಚಾಲುಕ್ಯ ಆಸ್ಪತ್ರೆಯ ಸಿಇಒ ಡಾ. ನಾಗಭೂಷಣ್ ಉದ್ಘಾಟಿದರು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಲವು ಕ್ಷೇತ್ರಗಳಲ್ಲಿ ಅತ್ಯಂತ ಹೆಚ್ಚಿನ ಸಾಧನೆ ಮಾಡಿದ್ದಾರೆ. ಅದರಂತೆ ನೀವು ಸಹ ಶ್ರಮವಹಿಸಿ, ಅಧ್ಯಯನ ಮಾಡಿ, ಜೀವನದಲ್ಲಿ ಉನ್ನತ ಹಂತ ತಲುಪಬೇಕು ಎಂದು ಹೇಳಿದರು.
ಇದನ್ನೂ ಓದಿ: Vastu Tips: ನಿಮ್ಮ ಜೀವನ ಸಮೃದ್ಧಿಗಾಗಿ ಈ ಗಿಡಗಳನ್ನು ಬೆಳೆಸಿ
ಬಳಿಕ ಶಾಲೆಯ ಸಂಸ್ಥಾಪಕ ನಂದೀಶಯ್ಯ ಮಾತನಾಡಿ, ಚಾಲುಕ್ಯ ಆಸ್ಪತ್ರೆ ವತಿಯಿಂದ ಉಚಿತವಾಗಿ ನಮ್ಮ ಶಾಲೆಯ 96 ಮಕ್ಕಳಿಗೆ ಆರೋಗ್ಯ ತಪಾಸಣೆ ಮತ್ತು ರಕ್ತದ ಗುಂಪು ತಿಳಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Jio Airfiber: ಕರ್ನಾಟಕದ 54 ಪಟ್ಟಣಗಳಲ್ಲಿ ರಿಲಯನ್ಸ್ ಜಿಯೋ ಏರ್ ಫೈಬರ್ ಸೇವೆ
ಕಾರ್ಯಕ್ರಮದಲ್ಲಿ ಡಾ. ಪ್ರಿಯಾಂಕ, ಡಾ. ರಂಜಿತಾ, ಶಾಲೆಯ ಮುಖ್ಯ ಶಿಕ್ಷಕ ಸ್ವಾಮಿ, ಸಹ ಶಿಕ್ಷಕರಾದ ಲಿಂಗರಾಜು, ಪೂರ್ಣಿಮಾ, ಚೈತ್ರಾಂಜಲಿ, ನಂಜುಂಡಮ್ಮ ಸೇರಿದಂತೆ ಶಾಲೆಯ ಶಿಕ್ಷಕರು, ಆಸ್ಪತ್ರೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.