ಕೊರಟಗೆರೆ: ಪಟ್ಟಣದ ತಾಲೂಕು ಕಚೇರಿಯ ಬಳಿಯಿರುವ ಶ್ರೀ ಸಾಯಿಬಾಬಾ ದೇವಾಲಯದ (Sri Sai Baba Temple) ಅನ್ನ ದಾಸೋಹದ ಕಟ್ಟಡದ ನಿರ್ಮಾಣಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ವತಿಯಿಂದ 150000 ರೂ. ಮೊತ್ತದ ಡಿಡಿಯನ್ನು ದೇವಸ್ಥಾನದ ಪದಾಧಿಕಾರಿಗಳಿಗೆ ತಾಲೂಕಿನ ಯೋಜನಾಧಿಕಾರಿ ಬಾಲಕೃಷ್ಣ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕಳೆದ ಒಂದು ವರ್ಷದಲ್ಲಿ ಕೊರಟಗೆರೆ ತಾಲೂಕಿನಲ್ಲಿ ದೇವಸ್ಥಾನಗಳ ಜೀರ್ಣೊದ್ಧಾರಕ್ಕೆ ಸುಮಾರು 20 ಲಕ್ಷ ರೂ. ಅನುದಾನವನ್ನು ನೀಡಲಾಗಿದೆ. ಅದೇ ರೀತಿ ಹಾಲಿನ ಡೈರಿ ಕಟ್ಟಡಕ್ಕೆ ಅನುದಾನವನ್ನು ನೀಡಿರುವುದಾಗಿ ತಿಳಿಸಿದರು.
ಇದನ್ನೂ ಓದಿ: Stock Market: 73 ಸಾವಿರ ಅಂಕ ದಾಟಿದ ಸೆನ್ಸೆಕ್ಸ್; ವಿಪ್ರೋ, ಟಿಸಿಎಸ್ ಷೇರು ಏರಿಕೆ
ಕೊರಟಗೆರೆಯ ಕಾಮರಾಜನಹಳ್ಳಿ ದೇವರಕೆರೆ ಅಭಿವೃದ್ಧಿ ಕೆಲಸಕ್ಕೆ ಕ್ಷೇತ್ರದಿಂದ ಸುಮಾರು 14 ಲಕ್ಷ ರೂ. ಮೊತ್ತ ಮಂಜೂರಾಗಿದ್ದು ಕಾಮಗಾರಿ ನಡೆಯುತ್ತಿರುವ ಬಗ್ಗೆ ಅವರು ಇದೇ ವೇಳೆ ತಿಳಿಸಿದರು.
ಸಾಯಿಬಾಬಾ ದೇವಾಲಯ ಸಮಿತಿಯ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ್ ಮಾತನಾಡಿದರು.
ಇದನ್ನೂ ಓದಿ: Shivam Dube : ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ದಾಖಲೆ ಪಟ್ಟಿ ಸೇರಿದ ಶಿವಂ ದುಬೆ
ಈ ಸಂದರ್ಭದಲ್ಲಿ ಸಾಯಿಬಾಬಾ ದೇವಾಲಯ ಸಮಿತಿಯ ಅಧ್ಯಕ್ಷೆ ಸುಧಾಮಣಿ ಎಚ್.ಎಸ್., ಸಮಿತಿಯ ನಿರ್ದೇಶಕ ಗಿರೀಶ್ ಕೆ.ಎಲ್., ನವೀನ್ ಕುಮಾರ್, ಆದಿ ರಮೇಶ್, ಶಂಕರ್ ನಾರಾಯಣ ಶೆಟ್ಟಿ ಹಾಗೂ ಪ್ರದೀಪ್ ಕುಮಾರ್ ಎಚ್.ಎಸ್., ಮಮತಾ ದಿವಾಕರ್, ರಾಜಣ್ಣ ಕೊರಟಗೆರೆ ವಲಯ ಮೇಲ್ವಿಚಾರಕ ರವೀಂದ್ರ ಬಿ. ಮತ್ತು ಸಮಿತಿಯ ಪದಾಧಿಕಾರಿಗಳು, ಇತರರು ಉಪಸ್ಥಿತರಿದ್ದರು.