ಶಿರಾ: ತಾಲೂಕಿನ ದೊಡ್ಡ ಅಗ್ರಹಾರ ಗ್ರಾಮದಲ್ಲಿ ಹರ್ಷ ಮಿತ್ರವೃಂದ ವತಿಯಿಂದ ದಿ. ಟಿ.ವಿ. ಹರ್ಷ ಸವಿ ನೆನಪಿಗಾಗಿ ಹರ್ಷೋತ್ಸವ (Harshotsava) ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಗ್ರಾಮದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಶಾಲೆಯ ಮುಖ್ಯಗುರು ಷಡಾಕ್ಷರಿ ಚಾಲನೆ ನೀಡಿದರು.
ಇದನ್ನೂ ಓದಿ: Overcooked Foods Lose Their Nutrition: ಆಹಾರವನ್ನು ಅತಿಯಾಗಿ ಬೇಯಿಸಬೇಡಿ; ಏಕೆಂದರೆ…
ಕಾರ್ಯಕ್ರಮದಲ್ಲಿ ಟಿ.ವಿ. ಹರ್ಷ ಮಿತ್ರ ವೃಂದದ ಅಧ್ಯಕ್ಷ ಕೌಶಿಕ್ ಮಾತನಾಡಿ, 2002 ರಲ್ಲಿ ಹರ್ಷ ಅಕಾಲಿಕ ಮರಣ ನಂತರ ಪ್ರತಿ ವರ್ಷ ಅವರ ಹೆಸರಿನಲ್ಲಿ ಕ್ರೀಡಾಕೂಟವನ್ನು ನಡೆಸಲಾಗುತ್ತಿದೆ. ದಿ.ಹರ್ಷ ಉತ್ತಮ ವಿದ್ಯಾರ್ಥಿಯಾಗಿ ಜತೆಗೆ ಕ್ರೀಡೆಯಲ್ಲಿ ಬಹಳ ಆಸಕ್ತಿ ಹೊಂದಿದ್ದನು, ಆದ್ದರಿಂದ ಅವರ ಸವಿ ನೆನಪಿಗಾಗಿ ಪ್ರತಿವರ್ಷ ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಕ್ರೀಡೆಗಳ ಬಗ್ಗೆಯೂ ಆಸಕ್ತಿ ಹೆಚ್ಚಿಸಬೇಕು ಎಂಬ ಉದ್ದೇಶದಿಂದ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಬಳಿಕ ನಡೆದ ವಿವಿಧ ಗ್ರಾಮೀಣ ಕ್ರೀಡೆಗಳಲ್ಲಿ ಶಾಲಾ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು. ಅನಂತರ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಇದನ್ನೂ ಓದಿ: Karnataka Weather : ಬೀಸಲಿದೆ ಬಿಸಿಗಾಳಿ; ರಾಜ್ಯಾದ್ಯಂತ ಏರಲಿದೆ ಕನಿಷ್ಠ ತಾಪಮಾನ
ಈ ಸಂದರ್ಭದಲ್ಲಿ ದೊಡ್ಡ ಅಗ್ರಹಾರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಗುರು ನಾಗರಾಜ್, ಟಿ.ವಿ. ಹರ್ಷ ಮಿತ್ರ ವೃಂದದ ರಾಕೇಶ್, ನಾಗೇಶ್, ದೊಡ್ಡ ಅಗ್ರಹಾರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುದ್ರಮ್ಮ, ಉಪಾಧ್ಯಕ್ಷೆ ರೇಣುಕಾ ನಾಗರಾಜ್, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.