Site icon Vistara News

Tumkur News: ಅಕ್ರಮ ಗಾಂಜಾ ಮಾರಾಟ: 3 ಅಂತಾರಾಜ್ಯ ಆರೋಪಿಗಳ ಬಂಧನ

Pattanayakanahalli police station

ಶಿರಾ: ಅಕ್ರಮ ಗಾಂಜಾ (Illegal Ganja) ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ, ಮೂವರು ಅಂತಾರಾಜ್ಯ ಆರೋಪಿಗಳನ್ನು ಬಂಧಿಸಿ, ಅಕ್ರಮ ಗಾಂಜಾ ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಪಟ್ಟನಾಯಕನಹಳ್ಳಿ ಕ್ರಾಸಿಂಗ್‌ ಬಳಿ ಜರುಗಿದೆ.

ಆಂಧ್ರಪ್ರದೇಶ ರಾಜ್ಯದ ಹೆಂಜಾರಪ್ಪ, ಕರಿಯಪ್ಪ, ಚಂದ್ರಶೇಖರ್‌ ಎಂಬುವವರೇ ಬಂಧಿತ ಆರೋಪಿಗಳು. ಖಚಿತ ಮಾಹಿತಿಯ ಮೇರೆಗೆ ಪಟ್ಟನಾಯಕನಹಳ್ಳಿ ಠಾಣೆಯ ಪೊಲೀಸರು ದಾಳಿ ನಡೆಸಿ, ಸುಮಾರು 65 ಸಾವಿರ ರೂ ಬೆಲೆಬಾಳುವ 1 ಕೆ.ಜಿ. 144 ಗ್ರಾಂ ಕಡ್ಡಿ ಬೀಜ ಮಿಶ್ರಿತ ಗಾಂಜಾ ಸೊಪ್ಪು ಹಾಗೂ ಸುಮಾರು 30 ಸಾವಿರ ರೂ ಬೆಲೆ ಬಾಳುವ 1 ಕೆಜಿ 600 ಗ್ರಾಂ ಹಸಿ ಗಾಂಜಾ ಗಿಡ ಹಾಗೂ ಮೋಟಾರ್‌ ಸೈಕಲ್‌ ಅನ್ನು ವಶ ಪಡಿಸಿಕೊಂಡಿದ್ದಾರೆ.

ಈ ಕುರಿತು ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version