Site icon Vistara News

Tumkur News: ಶಿರಾದಲ್ಲಿ ಬೃಹತ್‌ ಉದ್ಯೋಗ ಮೇಳ; 75 ಕಂಪನಿಗಳಿಂದ 1980 ಅಭ್ಯರ್ಥಿಗಳಿಗೆ ಜಾಬ್ ಆಫರ್ ಲೆಟರ್

Shira MLA TB Jayachandra spoke At the job fair

ಶಿರಾ: ಇಂದು ನಡೆದ ಉದ್ಯೋಗ ಮೇಳಕ್ಕೆ (Job Fair) ಹಾಜರಾಗಿ ನೌಕರಿ ಸಿಗದೇ ಇರುವ ಅಭ್ಯರ್ಥಿಗಳಿಗೆ (candidates) ಮುಂದಿನ ದಿನಗಳಲ್ಲಿ ತಮ್ಮ ಶಾಸಕರ ಕಚೇರಿಯಿಂದ (MLA Office) ಕಂಪನಿಗಳನ್ನು (Companies) ಸಂಪರ್ಕಿಸಿ ಕೆಲಸ ಕೊಡಿಸುವುದಾಗಿ ಶಿರಾ ಕ್ಷೇತ್ರದ ಶಾಸಕ ಟಿ.ಬಿ. ಜಯಚಂದ್ರ ಭರವಸೆ ನೀಡಿದರು.

ನಗರದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ಆವರಣದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್‌ ಉದ್ಯೋಗ ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಳೆದ ಎರಡು ವಾರದಲ್ಲಿ ಎಲ್ಲ ಕಂಪನಿಗಳು ಹಾಗೂ ಕೈಗಾರಿಕಾ ಮುಖ್ಯಸ್ಥರ ಜೊತೆ ತಾವು ಮಾತನಾಡಿದ್ದು ಭವಿಷ್ಯದಲ್ಲಿ ಶಿರಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳಿಗೆ ಉದ್ಯೋಗ ನೀಡುವ ಭರವಸೆಯನ್ನು ಕಂಪನಿ ಮಾಲೀಕರು ನೀಡಿದ್ದಾರೆ ಎಂದು ಇದೇ ವೇಳೆ ಶಾಸಕರು ತಿಳಿಸಿದರು.

ಇದನ್ನೂ ಓದಿ: Weather Report : ಕರಾವಳಿ, ಉತ್ತರ ಆಗಲಿದೆ ಮಳೆಗೆ ತತ್ತರ

10800 ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ನೋಂದಣಿ ಮಾಡಿಸಿಕೊಂಡಿದ್ದರು, ಅದರಲ್ಲಿ 1980 ಅಭ್ಯರ್ಥಿಗಳಿಗೆ ಕೆಲಸದ ಅಮಂತ್ರಣ ಪತ್ರ ನೀಡಿದ್ದಾರೆ, ಇಂದು ಕೆಲಸ ಸಿಗದ ಅಭ್ಯರ್ಥಿಗಳಿಗೆ ಒಂದು ಹೊಸ ಉದ್ಯೋಗ ಪೋರ್ಟಲ್ ಅನ್ನು ತೆರೆದು ಮುಂದಿನ ದಿನಗಳಲ್ಲಿ ಎಲ್ಲ ಅಭ್ಯರ್ಥಿಗಳಿಗೆ ತಮ್ಮ ಕಚೇರಿಯಿಂದಲೇ ಕೆಲಸ ಕೊಡಿಸುವ ಕಾರ್ಯ ಮಾಡುವುದಾಗಿ ಶಾಸಕ ಜಯಚಂದ್ರ ಅವರು ಇದೇ ವೇಳೆ ಭರವಸೆ ನೀಡಿದರು.

ಇದಕ್ಕೂ ಮುನ್ನ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ದೊರೆತ ಹಲವಾರು ಅಭ್ಯರ್ಥಿಗಳಿಗೆ ಆಫರ್ ಲೆಟರ್ ಗಳನ್ನು ವಿತರಿಸಿದರು.

ಪ್ರತಿಷ್ಠಿತ ಕಂಪನಿಗಳಾದ ಯಶಸ್ವಿನಿ, ಬಜಾಜ್ ಕ್ಯಾಪಿಟಲ್ ಕಂಪನಿಯಲ್ಲಿ ರಘನಂದನ್, ಪವನ್‌, ನರಸಿಂಹ ಮೂರ್ತಿ, ಹರೀಶ್, ದರ್ಶನ, ಅಜಯ್ ಕುಮಾರ್ .ಜಿ, ಹಾಗೂ ಯಶವಂತ್ ಅವರಿಗೆ ಮತ್ತು ಐಸಿಐಸಿ ಬ್ಯಾಂಕ್‌ನಲ್ಲಿ
ಭರತ್, ದಯಾಮಣಿ, ಹೇಮಂತ್ ಎಚ್, ಸ್ಪಂದನಾ, ಗೋಪಾಲ ಕೃಷ್ಣ ಅವರಿಗೆ ಆಫರ್‌ ಲೆಟರ್‌ಗಳನ್ನು ವಿತರಿಸಿದರು .

ಮುಂದಿನ ವರ್ಷಗಳಲ್ಲಿ ಮತ್ತೆ ಉದ್ಯೋಗ ಮೇಳ ಏರ್ಪಡಿಸುವುದಾಗಿ ಇದೇ ವೇಳೆ ಟಿಬಿ ಜಯಚಂದ್ರ ಅವರು ಘೋಷಿಸಿದರು.

ಇದನ್ನೂ ಓದಿ: SBI PO Recruitment 2023: 2000 ಪ್ರೊಬೇಷನರಿ ಹುದ್ದೆ ನೇಮಕಕ್ಕೆ ಎಸ್‌ಬಿಐ ಅರ್ಜಿ ಆಹ್ವಾನ, ಸೆ.27 ಅಪ್ಲೈಗೆ ಕೊನೆ ದಿನ

ಒಟ್ಟು 10,800 ಅಭ್ಯರ್ಥಿಗಳು ಉದ್ಯೋಗ ಮೇಳಕ್ಕೆ ನೋಂದಣಿ ಮಾಡಿಸಿದ್ದರು ಅದರಲ್ಲಿ 5300 ಅಭ್ಯರ್ಥಿಗಳು ಉದ್ಯೋಗ ಮೇಳಕ್ಕೆ ಹಾಜರಾಗಿದ್ದರು.

Exit mobile version