ಕೊರಟಗೆರೆ: ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕ್ಯಾಮೇನಹಳ್ಳಿಯ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವವು ಶುಕ್ರವಾರ ವಿಜೃಂಭಣೆಯಿಂದ (Tumkur News) ನೇರವೇರಿತು.
ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು.
ಕೊರಟಗೆರೆ ತಾಲೂಕು ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಸಾವಿರಾರು ಭಕ್ತರು ಆಗಮಿಸಿ, ದೇವರ ದರ್ಶನ ಪಡೆದರು. ಮಧ್ಯಾಹ್ನ ರಥೋತ್ಸವ ಪ್ರಾರಂಭದ ವೇಳೆ ಗರುಡ ಪಕ್ಷಿಯೊಂದು ರಥದ ಸುತ್ತ ಪ್ರದಕ್ಷಣೆ ಹಾಕಿತು. ನಂತರ ರರೋತ್ಸವಕ್ಕೆ ಚಾಲನೆ ನೀಡಲಾಯಿತು. ಪ್ರತಿ ವರ್ಷ ರಥೋತ್ಸವ ಪ್ರಾರಂಭವಾಗುವ ಸಮಯಕ್ಕೆ ಗರುಡ ಪಕ್ಷಿ ಬರುವುದು ವಾಡಿಕೆ.
ಇದನ್ನೂ ಓದಿ: Arvind Kejriwal: ವಿಶ್ವಾಸಮತ ಗೆದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್; 54 ಎಎಪಿ ಶಾಸಕರ ಬೆಂಬಲ
ತಾಲೂಕಿನ ಬೊಮ್ಮಲದೇವಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಪಾಳ್ಯ, ಅಕ್ಕಾಜಿಹಳ್ಳಿ, ದೊಡ್ಡಪಾಳ್ಯ, ಹೊಸಪಾಳ್ಯ, ಅವುದಾರನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರಿಂದ ರಥೋತ್ಸವಕ್ಕೂ ಮೂರು ದಿನಗಳ ಮುನ್ನ ಆರತಿ ಸೇವೆ ನಡೆಸಲಾಯಿತು.
ಇದನ್ನೂ ಓದಿ: IND vs ENG: ಸ್ಟನ್ನಿಂಗ್ ಕ್ಯಾಚ್ ಹಿಡಿದು ರೂಟ್ಗೆ ಪೆವಿಲಿಯನ್ ರೂಟ್ ತೋರಿದ ಜೈಸ್ವಾಲ್
ತಹಸೀಲ್ದಾರ್ ಕೆ. ಮಂಜುನಾಥ, ತಾ.ಪಂ. ಇಒ ಅಪೂರ್ವ, ಸಿಪಿಐ ಅನಿಲ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಇತರರು ಈ ವೇಳೆ ಪಾಲ್ಗೊಂಡಿದ್ದರು.