Site icon Vistara News

Tumkur News: ಹಂಚಿಹಳ್ಳಿ ಗ್ರಾಮದಲ್ಲಿ ಬೋನಿಗೆ ಬಿದ್ದ ಚಿರತೆ

leopard fell into a cage in Hanchihalli village

ಕೊರಟಗೆರೆ: ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆಯು (Leopard) ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ತಾಲೂಕಿನ ಕಸಬಾ ಹೋಬಳಿಯ ಹಂಚಿಹಳ್ಳಿ ಗ್ರಾಮದಲ್ಲಿ ಮಂಗಳವಾರ (Tumkur News) ನಡೆದಿದೆ.

ಹಂಚಿಹಳ್ಳಿ ಗ್ರಾಮದಲ್ಲಿ ಕಳೆದ 25 ದಿನಗಳ ಹಿಂದೆಯೂ ಸಹ ಚಿರತೆಯೊಂದು ಬೋನಿಗೆ ಬಿದ್ದಿತ್ತು. ನಂತರ ಮತ್ತೆ ಅದೇ ಭಾಗದಲ್ಲಿ ಕಾಣಿಸಿಕೊಂಡಿದ್ದ ಚಿರತೆಗಳು, ಮೇಕೆ ಸೇರಿದಂತೆ ಅನೇಕ ಪ್ರಾಣಿಗಳನ್ನು ಬಲಿತೆಗೆದುಕೊಂಡಿದ್ದವು. ಗ್ರಾಮಸ್ಥರು ಈ ಘಟನೆಯ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿ, ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಸ್ಥಳ ಪರಿಶೀಲಿಸಿ ಸೂಕ್ತ ಸ್ಥಳದಲ್ಲಿ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ.

ಇದನ್ನೂ ಓದಿ: Heart Attack : ಜಮೀನು ಕೆಲಸ ಮಾಡುತ್ತಿದ್ದ ನರೇಗಾ ಕಾರ್ಮಿಕ ಹೃದಯಾಘಾತದಿಂದ ಸಾವು

ಹಂಚಿಹಳ್ಳಿ ಗ್ರಾಮದ ಬೆಟ್ಟದಲ್ಲಿ ಇನ್ನೆರಡು ಚಿರತೆಗಳು ಇವೆ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದ್ದು, ರೈತರು ತಮ್ಮ ಜಮೀನುಗಳಿಗೆ ಹೋಗಲು ಭಯಪಡುವಂತಾಗಿದೆ. ಕೂಡಲೆ ಚಿರತೆಗಳನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹಂಚಿಹಳ್ಳಿ ಗ್ರಾ.ಪಂ. ಸದಸ್ಯ ಶ್ರೀನಿವಾಸ್ ಮಾತನಾಡಿ, ಹಂಚಿಹಳ್ಳಿ ಗ್ರಾಮದಲ್ಲಿ ಪದೇ ಪದೇ ಚಿರತೆಗಳ ಹಾವಳಿ ಹೆಚ್ಚಾಗುತ್ತಿದೆ. ಮೂಕ ಪ್ರಾಣಿಗಳನ್ನು ಪ್ರತಿದಿನ ಬಲಿ ಪಡೆಯುತ್ತಿವೆ. ಗ್ರಾಮದಲ್ಲಿ ರಾತ್ರಿಯಾದರೆ ಹೊರಗೆ ಬರಲು ಕಷ್ಟಕರವಾಗಿದೆ. ಮಕ್ಕಳು, ಮಹಿಳೆಯರು, ರೈತರು, ವಯಸ್ಸಾದ ಹಿರಿಯರು, ಭಯ-ಭೀತಿಯಲ್ಲಿ ಓಡಾಡುವಂತಾಗಿದೆ. ಈಗಾಗಲೇ ಒಂದು ತಿಂಗಳ ಹಿಂದೆ ಒಂದು ಚಿರತೆ ಬೊನಿಗೆ ಬಿದ್ದಿದ್ದು, ನಮ್ಮ ಗ್ರಾಮದ ಬಳಿ ಇರುವ ಬೆಟ್ಟದಲ್ಲಿ ಸುಮಾರು ನಾಲ್ಕರಿಂದ ಐದು ಚಿರತೆಗಳು ಕಾಣಿಸಿಕೊಂಡಿವೆ. ಅದರಲ್ಲಿ ಎರಡು ಚಿರತೆಗಳನ್ನು ಈಗ ಅರಣ್ಯ ಇಲಾಖೆಯ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿವೆ. ಆದಷ್ಟು ಬೇಗ ಉಳಿದ ಚಿರತೆಗಳನ್ನು ಹಿಡಿದು ಗ್ರಾಮಸ್ಥರು ನೆಮ್ಮದಿಯಿಂದ ತಮ್ಮ ಜಮೀನುಗಳಿಗೆ ಓಡಾಡಲು ಅವಕಾಶ ಕಲ್ಪಿಸಿ ಕೊಡಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರು.

ಇದನ್ನೂ ಓದಿ: Mukesh Ambani: ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅದಾನಿಯನ್ನು ಹಿಂದಿಕ್ಕಿದ ಅಂಬಾನಿ; ಉಳಿದ ಸಿರಿವಂತರು ಯಾರು?

ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು, ಚಿರತೆ ಬಿದ್ದಿದ್ದ ಬೋನನ್ನು ತಮ್ಮ ವಶಕ್ಕೆ ಪಡೆದು, ಆದಷ್ಟು ಬೇಗ ಉಳಿದ ಚಿರತೆಗಳನ್ನು ಸೆರೆ ಹಿಡಿಯುವುದಾಗಿ ಭರವಸೆ ನೀಡಿದರು.

Exit mobile version