ಗುಬ್ಬಿ: ತಾಲೂಕಿನ ಕಸಬಾ ಹೋಬಳಿ ಸುರಿಗೇನಹಳ್ಳಿಯಲ್ಲಿ ಸುಮಾರು 2 ವರ್ಷದ ಗಂಡು ಚಿರತೆಯು (Leopard) ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಭಾನುವಾರ ಬೆಳಿಗ್ಗೆ (Tumkur News) ಸೆರೆಯಾಗಿದೆ.
ಸುಮಾರು ದಿನಗಳಿಂದ ಈ ಭಾಗದಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದರಿಂದ ಗ್ರಾಮಸ್ಥರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆಯವರು ಬೋನನ್ನು ಇಟ್ಟಿದ್ದರು.
ಇದನ್ನೂ ಓದಿ: Drowned in River : ಕಾವೇರಿ ನದಿಗಿಳಿದ ವಿದ್ಯಾರ್ಥಿ ಈಜಲು ಬಾರದೆ ನೀರುಪಾಲು
ಚಿರತೆಯು ಬೋನಿಗೆ ಬೀಳುವ ಮೂಲಕ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಅತಂಕ ನಿವಾರಣೆಯಾಗಿದ್ದರೂ, ಇನ್ನೂ ಹೆಚ್ಚಿನ ಚಿರತೆಗಳು ಇರುವ ಬಗ್ಗೆ ಗ್ರಾಮಸ್ಥರು ಶಂಕೆಯನ್ನು ವ್ಯಕ್ತಪಡಿಸಿ, ಅರಣ್ಯ ಇಲಾಖೆಯವರು ಕ್ರಮವಹಿಸಬೇಕು. ಈಗ ಬೇಸಿಗೆಯಾಗಿದ್ದು ನೀರು ಹಾಯಿಸಲು ರಾತ್ರಿ ಹಗಲು ಎನ್ನದೆ ತೋಟಗಳಿಗೆ ಹೋಗಬೇಕಾಗಿರುವುದರಿಂದ ಇಲಾಖೆಯವರು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.